ಬಿಗ್ ಬಾಸ್ ಮನೆಯಲ್ಲಿ (Bigg Boss Kannada 13) ಒಂದಲ್ಲ ಒಂದು ಟ್ವಿಸ್ಟ್ ಎದುರಾಗುತ್ತಲೇ ಇರುತ್ತದೆ. ಸಿನಿಮಾ ತೋರಿಸ್ತೀನಿ ಅಂತ ಬಿಗ್ ಬಾಸ್ ಚಮಕ್ ಕೊಟ್ಟಿದ್ದಾರೆ. ಬೆನ್ನ ಹಿಂದೆ ನಡೆದಿದ್ದು ವಿಡಿಯೋ ಪ್ಲೇ ಮಾಡಿಸಿದ್ದಾರೆ. ಸ್ಪರ್ಧಿಗಳ ಮಧ್ಯೆ ಈಗ ವೈಮನಸ್ಸು ಹೆಚ್ಚಾಗಿದೆ. ಗಗನ್-ತಾಂಡವ್ (Gagan Thandav) ಸ್ನೇಹದಲ್ಲಿ ಬಿರುಕು ಮೂಡೋದು ಖಂಡಿತ.
ಹೌದು ಯಶಸ್ ಅವರು ಸೌಂದರ್ಯ ಕಾಲು ಹಿಡಿದ, ಸೌಂದರ್ಯ ಗಗನ್ ಜೊತೆ dump ಎಂತು ಹೇಳಿದ ವಿಡಿಯೋ ಪ್ಲೇ ಆಗಿದೆ. ಅಷ್ಟೇ ಅಲ್ಲ ತಾಂಡವ್ಗೆ ಸಮಾಧಾನ ಪಡಿಸಲು ಬಂದಿದ್ದಾರೆ ಗಗನ್. ಅವತ್ತೆ ಸಾರಿ ಕೇಳಿದ್ರೆ ಸರಿ ಇರ್ತಾ ಇತ್ತು ಅಂತ ಯಶಸ್, ಪ್ರಶಾಂತ್ ಸೈಡ್ನಲ್ಲಿ ಮಾತನಾಡಿಕೊಂಡಿದ್ದಾರೆ.
ಇದನ್ನೂ ಓದಿ: Bigg Boss Kannada 13: ಬಿಗ್ ಬಾಸ್ ಮನೆಯಿಂದ ಕಾವ್ಯ ಔಟ್!
ಯಶಸ್ ಅವರ ನಡವಳಿಕೆ ʻಬಿಗ್ ಬಾಸ್ʼ ಮನೆಯಲ್ಲಿ ಇತರ ಸ್ಪರ್ಧಿಗಳ ಟೀಕೆಗೆ ಕಾರಣವಾಗಿತ್ತು. ಜಗದೀಶ್ ಹಾಗೂ ಪ್ರಶಾಂತ್ ಕೂಡ ಯಶಸ್ ಬಗ್ಗೆ ಮಾತನಾಡಿಕೊಂಡಿದ್ದರು. ಕಾವ್ಯಾ, ಸೌಂದರ್ಯಾ ಶೆಟ್ಟಿ ಹಾಗೂ ಯಶಸ್ ಅವರು ಕುಳಿತು ಮಾತನಾಡುತ್ತಿದ್ದರು. ಕಾಲು ಇಟ್ಟುಕೊಳ್ಳಲು ಜಾಗ ಇಲ್ಲ ಎಂದು ಸೌಂದರ್ಯಾ ಅವರು ಹೇಳಿದರು. ಆಗ ಸೌಂದರ್ಯಾ ಅವರ ಕಾಲನ್ನು ಯಶಸ್ (Yashas) ಅವರು ತಮ್ಮ ಅಂಗೈಯಲ್ಲಿ ಹಿಡಿದುಕೊಂಡರು. ಅದನ್ನು ಕಂಡು ಜಗದೀಶ್ ಹಾಗೂ ಪ್ರಶಾಂತ್ ಮಾತನಾಡಿಕೊಂಡಿದ್ದರು.
ಇದನ್ನೂ ಓದಿ: Bigg Boss Kannada 13: ಗೇಮ್ ಅರ್ಥ ಆಗಿಲ್ಲದವರು ಮನೆ ಬಿಟ್ಟು ಹೊರಡಿ ಎಂದ ಕಿಚ್ಚ! ಜಗ್ಗ ಮಮ್ಮಿ ಶಾಕ್
ಅವಳ ಕಾಲು ಹಿಡಿದುಕೊಂಡಿದ್ದಾನೆ ನೋಡು ಎಂದು ಜಗದೀಶ್ ಹೇಳಿದ್ರೆ, ಯಶಸ್ಗೆ ಏನಾಗಿದೆ? ಇದನ್ನೇ ಅವನು ಹೆಮ್ಮೆ ಎಂದುಕೊಂಡಿದ್ದಾನಾ? ಎರಡು ವಾರ ಆದ್ಮೇಲೆ ಆಟ ತೋರಿಸುತ್ತೇನೆ ಎಂದು ಹೇಳುತ್ತಿದ್ದ ಎಂದು ಪ್ರಶಾಂತ್ ಹೇಳಿದ್ದರು. ‘ನನಗೆ ಅನುಮಾನ ಆಗುತ್ತಿದೆ. ಆಸಿಯಾನ ಯಶಸ್ ಇಷ್ಟಪಡುತ್ತಿದ್ದಾನಾ ಅಥವಾ ಸೌಂದರ್ಯಾನ ಇಷ್ಟಪಡುತ್ತಿದ್ದಾನಾ’ ಎಂದು ಪ್ರಶಾಂತ್ ಅವರು ಅನುಮಾನ ವ್ಯಕ್ತಪಡಿಸಿದ್ದರು.