ಬಿಗ್ ಬಾಸ್ ಸೀಸನ್ 13ರ (Bigg Boss Kannada 13) ಅಗ್ನಿಪರೀಕ್ಷೆ (Agniparikshe) ಬರ್ತಾ ಬರ್ತಾ ಕಠಿಣವಾಗುತ್ತಿದೆ. ಬಿಗ್ ಬಾಸ್ ಮನೆಗೆ ಹೋಗಲು ಜನಸಾಮಾನ್ಯರು ಹೋರಾಟ ನಡೆಸುತ್ತಿದ್ದಾರೆ. ಟಾಸ್ಕ್ ಶುರುವಾಗುತ್ತಿದ್ದಂತೆ ಪೂರ್ಣಿಮಾ ಅವರು ಕುಮಾರಿಯನ್ನು ತಳ್ಳಿ ಬಲೂನ್ ಅನ್ನು ಒಡೆದು ಹಾಕಿದ್ದಾರೆ. ಏಕಾಏಕಿ ತಲೆ ಸುತ್ತಿ ಕುಮಾರಿ ಕೆಳಗೆ ಬಿದ್ದಿದ್ದಾಳೆ. ಈ ಪ್ರೋಮೋ (Promo) ಈಗ ಸಖತ್ ಸುದ್ದಿಯಲ್ಲಿದೆ.
ಐದು Star ಕಂಟೆಸ್ಟೆಂಟ್ ಇದ್ದಾರೆ. ಅದರಲ್ಲಿ ಯಾರಾಗ್ತಾರೆ top 4? ಅಂತ ಪ್ರೋಮೋ ಹಂಚಿಕೊಂಡಿದೆ ವಾಹಿನಿ. ಪೂರ್ಣಿಮಾ ಈ ವೇಳೆ ಕುಮಾರಿ ತುಂಬಾ ಚೈಲ್ಡಿಶ್ ಎಂದಿದ್ದಾರೆ. ಜಾಸ್ತಿ ಚೈಲ್ಡಿ ಬೇಡ ಎಂದಿದ್ದಾರೆ. ಅದಕ್ಕೆ ಕುಮಾರಿ ಇದ್ದವರು ಜಾಸ್ತಿನೇ ಬೇಕು ಎಂದು ತಿರುಗೇಟು ಕೊಟ್ಟರು. ಆ ಬಳಿಕ ಟಾಸ್ ಕೂಡ ಕೊಡಲಾಗಿತ್ತು.
ಇದನ್ನೂ ಓದಿ: Kurmaavatar Title: ಶಿವರಾಜ್‌ಕುಮಾರ್ ನಟನೆಯ 'ಕೂರ್ಮಾವತಾರ್' ಟೈಟಲ್ ಟೀಸರ್ ರಿಲೀಸ್
ಅರ್ಧಕ್ಕೆ ನಿಲ್ಲಿಸಿದ್ರು ಟಾಸ್ಕ್
ಇದೇ ವೇಳೆ ಪೂರ್ಣಿಮಾ ಹಾಗೂ ಕುಮಾರಿಗೆ ಬಲೂನ್ ಒಡೆಯುವ ಟಾಸ್ಕ್ ಕೊಟ್ಟಿದ್ದಾರೆ. ಟಾಸ್ಕ್ ಶುರುವಾಗುತ್ತಿದ್ದಂತೆ ಪೂರ್ಣಿಮಾ ಅವರು ಕುಮಾರಿಯನ್ನು ತಳ್ಳಿ ಬಲೂನ್ ಅನ್ನು ಒಡೆದು ಹಾಕಿದ್ದಾರೆ. ಆ ಕೂಡಲೇ ಟಾಸ್ಕ್ ಅನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ.
“30 ಸೆಕೆಂಡ್ ಟೈಯರ್ ಎತ್ತುವ ಸವಾಲನ್ನು 45 ಸೆಕೆಂಡ್ ನಿರ್ವಹಿಸಿ, ನಟನಾ ಟಾಸ್ಕ್‌ನಲ್ಲಿ ನಾಲ್ಕೂ ಜ್ಯೂರಿಗಳ ಮನಗೆದ್ದ ಮಂಡ್ಯದ KSRTC ಮೆಕ್ಯಾನಿಕ್ ಜಿ.ಕೆ. ಪೂರ್ಣಿಮಾ ಮೊದಲ ‘ಸ್ಟಾರ್ ಕಂಟೆಸ್ಟೆಂಟ್’ ಆಗಿ ಹೊರಹೊಮ್ಮಿದ್ದರು. ಆದರೆ ಇಂದಿನ ಪ್ರೋಮೋ ಕಂಡು ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ.
ಇನ್ನೊಂದು ಟಾಸ್ಕ್ ಮಂಜುಗಡ್ಡೆಯ ಟಬ್‌ನಲ್ಲಿ ಮುಳುಗಿಕೊಳ್ಳಬೇಕು. ಸಖತ್ ಚಳಿಯಲ್ಲಿ ಹೈರಾಣ್ ಆಗಿದ್ದಾರೆ ಸ್ಪರ್ಧಿಗಳು. ಸದ್ಯ 60 ಜನರ ಪೈ ಕಿ ಕೆಲವರುಮಾತ್ರ ಆಯ್ಕೆಯಾಗಿದ್ದು, ಅವರಲ್ಲಿ ಯಾರೆಲ್ಲಾ ಬಿಗ್ಬಾಸ್ ಸೀಸನ್ 13ಕ್ಕೆ ಸ್ಪರ್ಧಿ ಾಗಿ ಕಾಲಿಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: Bigg Boss Kannada 13: ಈ ಸ್ಪರ್ಧಿಯ ನೋವಿನ ಮಾತು ಕೇಳಿ ಕಣ್ಣೀರಿಟ್ಟ ಜ್ಯೂರೀಸ್ !
ಈ ಅಗ್ನಿಪರೀಕ್ಷೆ ಮುಗಿದ ಬೆನ್ನಲ್ಲೇ, ಅಂದರೆ ಮುಂದಿನ ತಿಂಗಳು ಬಿಗ್ ಬಾಸ್ ಸೀಸನ್-13 ಅದ್ಧೂರಿಯಾಗಿ ಲಾಂಚ್ ಆಗಲಿದೆ. ದಿನಾಂಕ ಇನ್ನೂ ಅಧಿಕೃತವಾಗಿ ಅನೌನ್ಸ್ ಆಗದಿದ್ದರೂ, ಅಕ್ಟೋಬರ್ ಮೊದಲ ವಾರದಲ್ಲೇ ಶೋ ಶುರುವಾಗಬಹುದು ಎನ್ನಲಾಗುತ್ತಿದೆ.