‘ಬಿಗ್ ಬಾಸ್’ (Bigg Boss) ಪ್ರತಿ ಸೀಸನ್ ಕೂಡ ಹೊಸ ಹೊಸ ರೂಪದಲ್ಲಿ ಬರುತ್ತದೆ. ಈ ಬಾರಿ ಸ್ಪರ್ಧಿಗಳಿಗೆ ‘ಅಗ್ನಿಪರೀಕ್ಷೆ’ ಆಯೋಜನೆ ಮಾಡುವ ಯೋಜನೆ ರೂಪಿಸಲಾಗಿದೆ ಎನ್ನಲಾಗಿದೆ. ಬಿಗ್ ಬಾಸ್ ಕನ್ನಡ ಸೀಸನ್ 13ರ ಮೊದಲ ಅಧಿಕೃತ ಪ್ರೋಮೋ (Promo) ಬಿಡುಗಡೆಯಾಯಿತು. ʼನಮಸ್ತೆ ಕರ್ನಾಟಕ, the Bigg wait is over!ʼ ಎಂಬ ಶೀರ್ಷಿಕೆಯಲ್ಲಿ 50 ಸೆಕೆಂಡ್‌ಗಳ ಪ್ರೋಮೋ ಬಿಡುಗಡೆ ಮಾಡಲಾಗಿದೆ. ಸುದೀಪ್ ಸಹ ಸಖತ್ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸೀಸನ್ ಸೆಪ್ಟೆಂಬರ್ ತಿಂಗಳಿನಿಂದ ಶುರುವಾಗಲಿದೆ. ಹಾಗಾದ್ರೆ, ಇದೇ ತಿಂಗಳು ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಅಂತ್ಯವಾಗಲಿರುವ ಎರಡು ಟಾಪ್ ಸೀರಿಯಲ್‌ಗಳು (Top Serial) ಯಾವುವು?
ಕನ್ನಡ ವಾಹಿನಿಯಲ್ಲಿ ಸಂಜೆ 6 ಗಂಟೆಗೆ ರಾಣಿ’, 6:30ಕ್ಕೆ ‘ಪ್ರೇಮಕಾವ್ಯ , 7 ಗಂಟೆಗೆ ಅಗ್ನಿಸಾಕ್ಷಿ , 7:30ಕ್ಕೆ ಮುದ್ದು ಸೊಸೆ , 8 ಗಂಟೆಗೆ ಗೌರಿ ಕಲ್ಯಾಣ , 8:30ಕ್ಕೆ ಶ್ರೀಗಂಧದ ಗುಡಿ , 9 ಗಂಟೆಗೆ ನಂದಗೋಕುಲ, 9:30ಕ್ಕೆ ಪವಿತ್ರ ಬಂಧನ, 10 ಗಂಟೆಗೆ ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್ ಪ್ರಸಾರವಾಗುತ್ತಿದೆ.
ಇದನ್ನೂ ಓದಿ: SIIMA Awards 2026: ಸೈಮಾ ಅವಾರ್ಡ್ 14ನೇ ಸೀಸನ್; ಪ್ರತಿನಿಧಿಸುವ ನಟ ಶ್ರೀಮುರುಳಿ
ಪ್ರೇಮಕಾವ್ಯ
ಕಳೆದ ಬಾರಿ ‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮ ವಾರದ ದಿನಗಳಲ್ಲಿ ರಾತ್ರಿ 9:30ಕ್ಕೆ ಪ್ರಸಾರಗೊಂಡಿತ್ತು. 6:30ಕ್ಕೆ ಪ್ರಸಾರವಾಗುತ್ತಿರುವ ‘ಪ್ರೇಮಕಾವ್ಯ’ ಸೀರಿಯಲ್ ಮುಕ್ತಾಯವಾಗಲಿದೆ. ಅಂತಿಮ ದಿನದ ಶೂಟಿಂಗ್ ಸಹ ಮುಗಿದಿದೆ. ಅಪಾರ ಬಾಂಧವ್ಯ, ಪ್ರೀತಿ ಮತ್ತು ಸಂಸಾರದ ಏರಿಳಿತಗಳ ಕಥಾಹಂದರ ಹೊಂದಿದ್ದ 'ಪ್ರೇಮಕಾವ್ಯ' ಧಾರಾವಾಹಿ ಕೂಡ ತನ್ನ ಪ್ರಸಾರವನ್ನು ಕಾಯಂ ಆಗಿ ಸ್ಥಗಿತಗೊಳಿಸುತ್ತಿದೆ.
ಪ್ರಿಯಾ ಜೆ. ಆಚಾರ್, ವೈಷ್ಣವಿ, ರಘು ಹಾಗೂ ವಿಕಾಸ್ ಮುಂತಾದ ಪ್ರತಿಭಾವಂತ ಕಲಾವಿದರು ಇದ್ದಾರೆ. ಪ್ರೇಮಾ ಮತ್ತು ಕಾವ್ಯ ಎಂಬ ಇಬ್ಬರು ಸೋದರಿಯರ ಬದುಕು ಬದಾಲಿಸುವ ಮದುವೆ ಕಥೆ ಇದಾಗಿತ್ತು. ಸಹೋದರಿಯರ ಬದುಕಿನ ಭಾವನಾತ್ಮಕ ಪಯಣ ‘ಪ್ರೇಮಕಾವ್ಯ’.ಇಷ್ಟವಿಲ್ಲದ ಮದುವೆಗಳ ಬಳಿಕ ಅವರು ಎದುರಿಸುವ ಕಷ್ಟಗಳು ಇದರಲ್ಲಿ ಇತ್ತು. ಆಗಸ್ಟ್ 15ರಂದು ಕೊನೆಯ ಸಂಚಿಕೆಗಳು ಪ್ರಸಾರವಾಗಲಿವೆ.
View this post on Instagram A post shared by Colors Kannada Official (@colorskannadaofficial)
ಭಾರ್ಗವಿ ಎಲ್‌ಎಲ್‌ಬಿ
ರಾತ್ರಿ 10 ಗಂಟೆಗೆ ಪ್ರಸಾರವಾಗುತ್ತಿರುವ ‘ಭಾರ್ಗವಿ ಎಲ್‌ಎಲ್‌ಬಿ’ ಧಾರಾವಾಹಿ ಸಹ ಮುಕ್ತಾಯವಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇದನ್ನೂ ಓದಿ: Bigg Boss Kannada 13: ಹೊಸ ಸೀಸನ್‌ಗೆ ಜಡ್ಜ್‌ಗಳಾಗಿ ಬರಲಿದ್ದಾರಾ ಗಿಲ್ಲಿ, ಸಂಗೀತಾ? ಏನಿದು ಹೊಸ ಟ್ವಿಸ್ಟ್?
'ಗೀತಾ ಎಲ್‌ಎಲ್‌ಬಿ' ರಿಮೇಕ್ ಆಗಿ ಮೂಡಿಬಂದಿದ್ದ 'ಭಾರ್ಗವಿ ಎಲ್‌ಎಲ್‌ಬಿ' ಸ್ವಪ್ನ ಕೃಷ್ಣ ಅವರ ಕಲ್ಪನೆಯಲ್ಲಿ ರೂಪಗೊಂಡಿದ್ದ ಈ ಸೀರಿಯಲ್‌ನಲ್ಲಿ ರಾಧಾ ಭಗವತಿ, ಮನೋಜ್ ಕುಮಾರ್, ಕೀರ್ತಿ ಭಾನು, ಅರುಣಾ ಬಾಲರಾಜ್ ಹಾಗೂ ಚೈತ್ರಾ ರಾವ್ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದರು.