ಬಿಗ್ ಬಾಸ್ ಕನ್ನಡ 13ರ (Bigg Boss Kannada 13) ಸ್ಪರ್ಧಿಗಳು ವಿಮಾನದಲ್ಲೇ ಇರುವಂತಾಗಿದೆ. ಈ ಬಾರಿ 'ಏವಿಯೇಷನ್ ಥೀಮ್'ನಲ್ಲಿ (Aviation theme) ಶೋ ಆರಂಭವಾಗಿದ್ದು, ಸ್ಪರ್ಧಿಗಳಿನ್ನೂ ವಿಮಾನದಲ್ಲೇ ಇದ್ದಾರೆ. ಯಾರೂ ಮನೆಯೊಳಗೆ ಕಾಲಿಟ್ಟಿಲ್ಲ; ಆದರೆ ವಿಮಾನದಲ್ಲೇ ಕುಳಿತು ಜಟಾಪಟಿ ಶುರುಮಾಡಿಕೊಂಡಿದ್ದಾರೆ. ಇದರ ಜೊತೆಗೆ ವಮಾನದಲ್ಲಿಯೂ ಕೆಲವು ಸಂತೋಷಕರ ಸನ್ನಿವೇಶಗಳು ನಡೆದಿವೆ. ಈ ಹೊಸ ಪ್ರೋಮೋ (New Promo) ನೋಡಿ ಸಖತ್ ಖುಷಿ ಆಗಿದ್ದಾರೆ ವೀಕ್ಷಕರು.
ಹೌದು ಮಗವನ್ನು ಸಮಾಧಾನ ಪಡಿಸೋ ರೀತಿ ಟಾಸ್ಕ್ ಕೊಟ್ಟಿದ್ದಾರೆ ಸಂಗೀತಾ ಹಾಗೋ ಓಂ ಪ್ರಕಾಶ್ ಅವರು ಮಗುವನ್ನ ನಗಿಸೋದರಲ್ಲಿ ಸಕ್ಸೆಸ್ ಆದರು. ಇದರ ಜೊತೆಗೆ ಆಟ ಶುರು ಆಗುವುದಕ್ಕೂ ಮೊದಲೇ ಜಗಳ ಆರಂಭ ಆಗಿದೆ. ಸೆಪ್ಟೆಂಬರ್ 7ರ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ.
ಜನಸಾಮಾನ್ಯರಿಗೂ ಅವಕಾಶ
ಈ ಬಾರಿ ಬಿಗ್ ಬಾಸ್ ಮನೆಯೊಳಗೆ ಜನಸಾಮಾನ್ಯರಿಗೂ ಅವಕಾಶ ಸಿಕ್ಕಿದೆ. ಜೊತೆಗೆ ಸೆಲೆಬ್ರಿಟಿಗಳು ಕೂಡ ಇದ್ದಾರೆ. ಇಬ್ಬರ ನಡುವೆ ಒಂದು ರೀತಿಯ ಪೈಪೋಟಿ ಶುರು ಆಗಿದೆ. ಈಗಾಗಲೇ ಅಗ್ನಿಪರೀಕ್ಷೆಯ ವೇದಿಕೆಯಲ್ಲಿ ಪಳಗಿ ಬಂದಿರುವ ಜನಸಾಮಾನ್ಯ ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಆರಂಭದಲ್ಲೇ ಅಬ್ಬರಿಸಲು ಶುರುಮಾಡಿದ್ದಾರೆ.
ಅಂದಹಾಗೆ ಬಿಗ್ಬಾಸ್ ಆರಂಭವಾದ ಮೊದಲ ದಿನವೇ ಸುದೀಪ್ ಅವರು ಈ ಸೀಸನ್ನಿನ ತಮ್ಮ ಮೊದಲ ಚಪ್ಪಾಳೆ ನೀಡಿದ್ದಾರೆ. ಬಿಗ್ಬಾಸ್ ಮನೆಯನ್ನು ವೀಕ್ಷಕರಿಗೆ ಪರಿಚಯಿಸಿದ ಸುದೀಪ್ ಅವರು, ಈ ಬಾರಿ ಬಿಗ್ಬಾಸ್ ಮನೆಯನ್ನು ವಿನ್ಯಾಸ ಮಾಡಿರುವ ರೀತಿಯಿಂದ ಬಹಳ ಇಂಪ್ರೆಸ್ ಆದರು. ಮನೆಯಲ್ಲಿ ಐಫಿಲ್ ಟವರ್ ಸೇರಿದಂತೆ ವಿಶ್ವದ ಹಲವು ಜನಪ್ರಿಯ ಮಾನ್ಯುಮೆಂಟ್ಗಳನ್ನು ಮರು ಸೃಷ್ಟಿಸಲಾಗಿತ್ತು.
ಇದನ್ನೂ ಓದಿ: Panchayat Season 5: ʻಪಂಚಾಯತ್ 5’ ರಿಲೀಸ್ ಡೇಟ್ ಬಿಗ್ ಅಪ್‌ಡೇಟ್
ಮನೆಯ ವಿನ್ಯಾಸದಿಂದ ಖುಷಿಯಾದ ಸುದೀಪ್ ಅವರು, ಮನೆಯ ವಿನ್ಯಾಸಕಾರರಿಗೆ ತಮ್ಮ ಮೊದಲ ಕಿಚ್ಚನ ಚಪ್ಪಾಳೆ ನೀಡಿದರು.