ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಬಿಗ್‌ ಬಾಸ್ ಕನ್ನಡ 13ʼರ ಮೊದಲ ಪೈಲಟ್ ಆದ ಸಂಗೀತಾ ಭಟ್; ಚಾನ್ಸ್‌ ಮಿಸ್‌ ಆಗಿದ್ದಕ್ಕೆ ಕಿರುಚಾಡಿ ರಂಪಾಟ ಮಾಡಿದ ಕಿರಣ್ ಶಾಸ್ತ್ರಿ!

Bigg Boss 13: ಟಾಸ್ಕ್‌ನಲ್ಲಿ ಗೆದ್ದು ನಟಿ ಸಂಗೀತಾ ಭಟ್ ಗೆದ್ದು ನೇರವಾಗಿ ಕ್ಯಾಪ್ಟನ್ಸಿ ರೇಸ್ ಪ್ರವೇಶಿಸಿದ್ದಾರೆ. ಅಂತಿಮ ಕ್ಷಣದಲ್ಲಿ ಅವಕಾಶ ವಂಚಿತರಾದ ಕಿರಣ್ ಶಾಸ್ತ್ರಿ ಆಕ್ರೋಶಗೊಂಡು ಮನೆಯವರ ವಿರುದ್ಧ ‘ಬಳೆ ತೊಟ್ಟು ಕೂತ್ಕೊಳ್ಳಿ’ ಎಂದು ಕೀಳಾಗಿ ಕೂಗಾಡಿದರು. ಇದಕ್ಕೆ ನಟಿ ವೈಷ್ಣವಿ, ತಾಂಡವ್ ಹಾಗೂ ಗಗನ್ ಚಿನ್ನಪ್ಪ ಖಡಕ್ ಎಚ್ಚರಿಕೆ ನೀಡಿದ್ದಾರೆ.

‘ಬಿಗ್ ಬಾಸ್’ ಮನೆಯಲ್ಲಿ ಕ್ಯಾಪ್ಟನ್ಸಿ ರೇಸ್‌ಗೆ ಸಂಬಂಧಿಸಿದ ಚಟುವಟಿಕೆಗಳು ರಂಗೇರಿದ್ದು, ನಟಿ ಸಂಗೀತಾ ಭಟ್ ಮೊದಲ ‘ಪೈಲಟ್’ ಆಗಿ ಆಯ್ಕೆಯಾಗಿದ್ದಾರೆ. ಅಂತಿಮ ಹಂತದ ಸ್ಪರ್ಧೆಯಲ್ಲಿದ್ದ ಧನುಷ್, ಲಿಖಿತ್, ಸಂಗೀತಾ ಹಾಗೂ ಕಿರಣ್ ಶಾಸ್ತ್ರಿ ಅವರ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಅಂತಿಮವಾಗಿ ವ್ಯವಸ್ಥಾಪಕರು ಸಂಗೀತಾ ಭಟ್ ಪರವಾಗಿ ತೀರ್ಪು ಪ್ರಕಟಿಸಿದ ಹಿನ್ನೆಲೆಯಲ್ಲಿ, ಅವರು ನೇರವಾಗಿ ಈ ವಾರದ ಕ್ಯಾಪ್ಟನ್ಸಿ ರೇಸ್‌ಗೆ ಪ್ರವೇಶ ಪಡೆದಿದ್ದಾರೆ.

ಆಟ ಆಡೋಕೂ ಬರಲ್ಲ.. ಆಟ ಆಡಿಸೋಕೂ ಬರಲ್ಲ

ಆದರೆ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತೆ ಕೊನೆಯ ಕ್ಷಣದಲ್ಲಿ ಪೈಲಟ್ ಆಗುವ ಸುವರ್ಣಾವಕಾಶವನ್ನು ಕಳೆದುಕೊಂಡ ಕಿರಣ್ ಶಾಸ್ತ್ರಿ ತೀವ್ರ ನಿರಾಶೆಗೊಂಡು ಮನೆಯವರ ವಿರುದ್ಧ ಸಿಡಿದೆದ್ದರು. ವ್ಯವಸ್ಥಾಪಕರ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ತಾಳ್ಮೆ ಕಳೆದುಕೊಂಡ ಅವರು, "ಬಳೆ ಹಾಕಿಕೊಂಡು ಕೂತ್ಕೊಳ್ಳಿ ನೀವು, ನಿಮಗೆ ತೀರ್ಪು ನೀಡೋಕೆ ಬರಲ್ಲ.. ದಡ್ಡರು ನೀವು. ನಿರ್ಧಾರ ತೆಗೆದುಕೊಳ್ಳೋಕೆ ಬರಲ್ಲ, ಆಟ ಆಡೋಕೂ ಬರಲ್ಲ.. ಆಟ ಆಡಿಸೋಕೂ ಬರಲ್ಲ" ಎಂದು ಏಕವಚನದಲ್ಲೇ ಕೂಗಾಡಿ ವಾಗ್ದಾಳಿ ನಡೆಸಿದರು.

Bigg Boss Kannada 13: ‘ಬಿಗ್‌ ಬಾಸ್‌ ಸೀಸನ್‌ 13’ ಎಂಟ್ರಿಗೂ ಮುನ್ನ ನಟಿ ಆಸಿಯಾ ಫಿರ್ದೋಸ್ ಸೀರಿಯಲ್‌ ತಂಡದ ಕುರಿತು ಹೇಳಿದ್ದೇನು?

‘ಬಳೆ ತೊಡುವುದು ಕೀಳಲ್ಲ’ ಎಂದ ವೈಷ್ಣವಿ

ಕಿರಣ್ ಅವರ ಕೀಳು ಮಟ್ಟದ ಮಾತುಗಳು ಮನೆಯಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಯಿತು. ‘ಬಳೆ ತೊಡುವುದು ಕೀಳಲ್ಲ’ ಎಂದು ಮನೆಯ ಮಹಿಳಾ ಸ್ಪರ್ಧಿಗಳು ಆಕ್ರೋಶ ಹೊರಹಾಕಿದರೆ, ನಟಿ ವೈಷ್ಣವಿ ಅವರು "ನೀನ್ಯಾವನೋ ಹೇಳೋಕೆ?" ಎಂದು ನೇರವಾಗಿಯೇ ಕಿರಣ್‌ಗೆ ಖಡಕ್ ಎಚ್ಚರಿಕೆ ನೀಡಿದರು. ಮತ್ತೊಂದೆಡೆ ಸ್ಪರ್ಧಿಗಳಾದ ತಾಂಡವ್ ಹಾಗೂ ಗಗನ್ ಚಿನ್ನಪ್ಪ ಕೂಡ ಕಿರಣ್ ಅವರ ಮಾತಿನ ಶೈಲಿಯನ್ನು ತೀವ್ರವಾಗಿ ಖಂಡಿಸಿ ಮುಖಾಮುಖಿ ಜಗಳಕ್ಕೆ ಇಳಿದರು.

ಸತ್ತ ಹೆಣದ ತರಹ ಬಿದ್ದಿರ್ತೀಯಾ

ಎಲ್ಲರೂ ಎಷ್ಟೇ ಸಮಾಧಾನ ಮಾಡಲು ಯತ್ನಿಸಿದರೂ ತಣ್ಣಗಾಗದ ಕಿರಣ್, ತಾಂಡವ್ ವಿರುದ್ಧ ತಿರುಗಿಬಿದ್ದು, "ನೀನು ಮೊದಲು ಸರಿಯಾಗಿ ರೂಲ್ಸ್‌ ಬುಕ್ ಓದು, ಸುಮ್ಮನೆ ದಡ್ಡ ಅನ್ನಿಸಿಕೊಳ್ಳಬೇಡ, ತಲೆ ಇಲ್ಲದವರು ನೀವು" ಎಂದು ಹೀಯಾಳಿಸಿದರು. ಕಿರಣ್ ಅವರ ಈ ಅತಿಯಾದ ವರ್ತನೆಯಿಂದ ತಾಳ್ಮೆ ಕಳೆದುಕೊಂಡ ಗಗನ್ ಚಿನ್ನಪ್ಪ, "ನಮ್ಮ ಹತ್ತಿರ ಇವೆಲ್ಲ ಮಾತನಾಡಬೇಡ.. ಒಂದು ಕೆಲಸ ಮಾಡಲ್ಲ, ಸತ್ತ ಹೆಣದ ತರಹ ಬಿದ್ದಿರ್ತೀಯಾ, ಹೋಗಲೇ" ಎಂದು ಕಿಡಿಕಾರುವ ಮೂಲಕ ಪರಿಸ್ಥಿತಿ ತಾರಕಕ್ಕೇರಿತು. ಸದ್ಯ ಬಿಗ್‌ ಬಾಸ್ ಮನೆಯಲ್ಲಿ ಈ ಜಗಳ ದೊಡ್ಡ ಮಟ್ಟದ ಬಿರುಗಾಳಿಯನ್ನೇ ಎಬ್ಬಿಸಿದೆ. ಕಿರಣ್‌ ಸಮಾಧಾನ ಆಗ್ತಾರಾ? ಪರಿಸ್ಥಿತಿ ಕೈಮೀರುತ್ತಾ? ಕಾದುನೋಡಬೇಕು.