ಬಿಗ್ ಬಾಸ್ ಕನ್ನಡ ಸೀಸನ್ 13ರ (Bigg Boss Kannada 13) ಗ್ರ್ಯಾಂಡ್ ಓಪನಿಂಗ್‌ನಲ್ಲಿ ಎರಡನೇ ಸ್ಪರ್ಧಿಯಾಗಿ ಸೌಂದರ್ಯ ಶೆಟ್ಟಿ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಬೋಲ್ಡ್, ಫ್ಯಾಷನ್ ಮೂಲಕ ವೀಕ್ಷಕರ ಮನ ಸೆಳೆದು ಸಖತ್ ಸದ್ದು ಮಾಡುತ್ತಿದ್ದಾರೆ. ಸೌಂದರ್ಯ ಶೆಟ್ಟಿ (Soundarya Shetty), ಅವರ ಪೂರ್ಣ ಹೆಸರು ಸೌಂದರ್ಯ ಯುವರಾಜ್ ಶೆಟ್ಟಿ, ಮೂಲತಃ ಕರ್ನಾಟಕದ ಮಂಗಳೂರಿನವರು.
ಯಾರಿವರು ಸೌಂದರ್ಯ?
ಇನ್ನು ವೇದಿಯಲ್ಲಿ ಸುದೀಪ್ ಕೂಡ ಸೌಂದರ್ಯ ಕಾಳೆದಿದ್ದಾರೆ. ಪಾರ್ಟಿ ಪ್ರಿಯೆ ಆದ ಸೌಂದರ್ಯಗೆ ಸ್ವಲ್ಪ ಯಾಮಾದ್ರೆ ನೈಟ್ ಔಟ್ ಎಂದಿದ್ದಾರೆ. ನಾನು ಪಾರ್ಟಿ ಪ್ರಿಯೆ ಎಂದಿದ್ದಕ್ಕಾಗಿ ಈ ಮಾತು ಹೇಳಿದ್ದಾರೆ. ಇನ್ನು ಸೌಂದರ್ಯ ಅವರಿಗೆ ಬೋರ್ಡಿಂಗ್ ಪಾಸ್ ಕೊಟ್ಟಿದ್ದಾರೆ ಸುದೀಪ್.
ಫ್ಯಾಷನ್, ಸೌಂದರ್ಯ ಮತ್ತು ಜೀವನಶೈಲಿಗೆ ಹೆಸರುವಾಸಿಯಾದ ಮಾಡೆಲ್ . ಸೌಂದರ್ಯ ಅವರು MTV ಸ್ಪ್ಲಿಟ್ಸ್‌ವಿಲ್ಲಾ ಸೀಸನ್ 16 - ಪ್ಯಾರ್ ಯಾ ಪೈಸಾ ಮೂಲಕ ಹಿಂದಿ ರಿಯಾಲಿಟಿ-ಶೋ ಪ್ರೇಕ್ಷಕರಲ್ಲಿ ಮನ್ನಣೆ ಗಳಿಸಿದರು, ಅಲ್ಲಿ ಅವರು ಗಮನಾರ್ಹ ಸ್ಪರ್ಧಿಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದರು ಮತ್ತು ಅಂತಿಮವಾಗಿ ಫೈನಲಿಸ್ಟ್ ಆದರು. ಈಗ, ಅವರು ಬಿಗ್ ಬಾಸ್ ಕನ್ನಡ 13 ರ ಮೂಲಕ ಕನ್ನಡ ದೂರದರ್ಶನಕ್ಕೆ ಪದಾರ್ಪಣೆ ಮಾಡಿದ್ದಾರೆ.
ಸೌಂದರ್ಯಾ ಸ್ಪ್ಲಿಟ್ಸ್‌ವಿಲ್ಲಾದಲ್ಲಿ ತಮ್ಮ ಆತ್ಮವಿಶ್ವಾಸ ಮತ್ತು ನೇರ ವ್ಯಕ್ತಿತ್ವಕ್ಕಾಗಿ ಎದ್ದು ಕಾಣುತ್ತಿದ್ದರು. ‘ಸ್ಪ್ಲಿಟ್ಸ್ ವಿಲ್ಲಾ’ ಅದರಲ್ಲಿ ಲವ್ ಟ್ರ್ಯಾಪ್‌ಗೆ ಸಿಲುಕದೆ ಆಟವನ್ನ ಆಟದ ತರಹ ಆಡಿದವರು ಸೌಂದರ್ಯ ಶೆಟ್ಟಿ. ಬಂದ ಅಡ್ವಾಂಟೇಜ್‌ಗಳನ್ನ ಚೆನ್ನಾಗಿ ಬಳಸಿಕೊಂಡು ಸೌಂದರ್ಯ ಶೆಟ್ಟಿ ‘ಕ್ವೀನ್’ ಪಟ್ಟ ಅಲಂಕರಿಸಿದ್ದರು. ಇದೀಗ ಬಿಗ್ ಬಾಸ್ ಮನೆಯಲ್ಲಿ ಹೇಗೆ ಆಟ ಆಡ್ತಾರೆ ಅನ್ನೋದು ವೀಕ್ಷಕರಲ್ಲಿ ಇರೋ ಕುತೂಹಲ.
ಇದನ್ನೂ ಓದಿ: Bigg Boss Kannada 13: ಈ ಬಾರಿ ಸ್ಪರ್ಧಿಗಳಿಗೆ ಇರಲಿದೆ ಈ ಹೊಸ ಟ್ವಿಸ್ಟ್! ಕಿಚ್ಚ ಕೊಟ್ಟ ಹಿಂಟ್ ಏನು?
ಸೀಸನ್ 13ರ ಮತ್ತೊಂದು ವಿಶೇಷತೆ ಎಂದರೆ ಕನ್ನಡದ ಜತೆಗೆ ಮಲಯಾಳಂ, ತೆಲುಗು ಮತ್ತು ತಮಿಳು ಭಾಷೆಗಳ ಬಿಗ್ ಬಾಸ್ ಕಾರ್ಯಕ್ರಮಗಳು ಕೂಡ ಏಕಕಾಲದಲ್ಲಿ ಆರಂಭವಾಗಿರುವುದು. ನಾಲ್ಕು ಭಾಷೆಗಳ ಬಿಗ್ ಬಾಸ್ ಶೋಗಳು ಒಂದೇ ಸಮಯದಲ್ಲಿ ಆರಂಭವಾಗಿರುವುದು ಅಪರೂಪದ ಬೆಳವಣಿಗೆಯಾಗಿದೆ.