ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ಸತತ 3 ಗಂಟೆಗಳ ಕಾಲ ಸುದೀರ್ಘ ಪ್ರಸಾರ; ಮತ್ತಿಬ್ಬರು ಔಟ್‌ ಗ್ಯಾರಂಟಿ!

Bigg Boss Kannada 13:ಬಿಗ್‌ ಬಾಸ್‌ ರೋಚಕ ಟ್ವಿಸ್ಟ್‌ ಪಡೆದು ಸಾಗುತ್ತಿದೆ. ಅದರಲ್ಲೂ ಈಗ ತಾಂಡವ್‌ ರಾಮ್‌ ಔಟ್‌ ಆಗಿದ್ದಾರೆ. ಇದು ಅನ್‌ಫೇರ್‌ ಎಂದು ವೀಕ್ಷಕರು ಕಮೆಂಟ್‌ ಮಾಡುತ್ತಿದ್ದಾರೆ. ಈಗ ಹೊಸ ಪ್ರೋಮೋ (New Promo) ಔಟ್‌ ಆಗಿದ್ದು, ಮತ್ತಿಬ್ಬರು ಹೊರ ಹೋಗೋದು ಕನ್‌ಫರ್ಮ್‌ ಆಗಿದೆ.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ (Bigg Boss Kannada 13) ರೋಚಕ ಟ್ವಿಸ್ಟ್‌ ಪಡೆದು ಸಾಗುತ್ತಿದೆ. ಅದರಲ್ಲೂ ಈಗ ತಾಂಡವ್‌ ರಾಮ್‌ ಔಟ್‌ ಆಗಿದ್ದಾರೆ. ಇದು ಅನ್‌ಫೇರ್‌ ಎಂದು ವೀಕ್ಷಕರು ಕಮೆಂಟ್‌ ಮಾಡುತ್ತಿದ್ದಾರೆ. ಈಗ ಹೊಸ ಪ್ರೋಮೋ (New Promo) ಔಟ್‌ ಆಗಿದ್ದು, ಮತ್ತಿಬ್ಬರು ಹೊರ ಹೋಗೋದು ಕನ್‌ಫರ್ಮ್‌ ಆಗಿದೆ.

3 ಗಂಟೆಗಳ ಕಾಲ ಸುದೀರ್ಘವಾಗಿ ಪ್ರಸಾರ

ರಿಯಾಲಿಟಿ ಶೋ ‘ಬಿಗ್ ಬಾಸ್’ ಶನಿವಾರ ಮತ್ತು ಭಾನುವಾರದ ಸಂಚಿಕೆಯಲ್ಲಿ ಪ್ರೇಕ್ಷಕರಿಗೆ ‘ಡಬಲ್ ಧಮಾಕಾ’ ರಸದೌತಣ ನೀಡಲು ಸಜ್ಜಾಗಿದೆ. ಕಿಚ್ಚ ಸುದೀಪ್ ನಡೆಸಿಕೊಡುವ ‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮವು ಈ ಬಾರಿ ಸತತ 3 ಗಂಟೆಗಳ ಕಾಲ ಸುದೀರ್ಘವಾಗಿ ಪ್ರಸಾರವಾಗಲಿದೆ.

ಇದನ್ನೂ ಓದಿ: Bigg Boss Kannada 13: ಬಿಗ್‌ ಬಾಸ್‌ ಮನೆಯಿಂದ ತಾಂಡವ್‌ ರಾಮ್‌ ಔಟ್‌! ಬಿಕ್ಕಿ ಬಿಕ್ಕಿ ಅತ್ತ ಗಗನ್‌

ಮನೆಗೆ ಮತ್ತೊಂದು ‘ಎಮರ್ಜೆನ್ಸಿ ಎಕ್ಸಿಟ್’ ಎದುರಾಗಿದ್ದು, ಮತ್ತಿಬ್ಬರು ಸ್ಪರ್ಧಿಗಳು ಹೊರಹೋಗುವ ಸೂಚನೆ ಸಿಕ್ಕಿದೆ. ವೋಟಿಂಗ್ ಆಧಾರದ ಮೇಲೆ ಸ್ಪರ್ಧಿಗಳ ಭವಿಷ್ಯ ನಿರ್ಧಾರವಾಗಲಿದೆ. ಈ ರೋಚಕ ಸಂಚಿಕೆಯನ್ನು ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಕಲರ್ಸ್ ಕನ್ನಡ ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು.

ಇದುವರೆಗೆ ಮನೆಯೊಳಗಿನ ಆಟ, ವ್ಯಕ್ತಿತ್ವ ಹಾಗೂ ವಿವಿಧ ಸಂದರ್ಭಗಳಲ್ಲಿ ಸ್ಪರ್ಧಿಯ ನಡೆ-ನುಡಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ ಈ ಎಕ್ಸಿಟ್ ಕೇವಲ ಮನೆಯ ಸದಸ್ಯರಿಗೆ ಮಾತ್ರವಲ್ಲದೆ,ತಮ್ಮ ನೆಚ್ಚಿನ ಸ್ಪರ್ಧಿಯನ್ನು ವಿನ್ನರ್ ಆಗಿ ನೋಡಲು ಬಯಸಿದ್ದ ವೀಕ್ಷಕರಿಗೂ ಶಾಕ್ ನೀಡಲಿದೆ.



ಬಿಗ್‌ಬಾಸ್ ಕನ್ನಡ ಸೀಸನ್ 7ರ ಸ್ಪರ್ಧಿಯಾಗಿದ್ದ ಕಿಶನ್, ಮತ್ತೊಮ್ಮೆ ದೊಡ್ಮನೆ ರಿಯಾಲಿಟಿ ಶೋಗೆ ಬರುತ್ತಿದ್ದಾರೆ. ಈ ಬಗ್ಗೆ ಇನ್‌ಸ್ಟಗ್ರಾಂನಲ್ಲಿ ಸೀಸನ್ 7ರ ವಿಡಿಯೋ ಝಲಕ್‌ ಹಂಚಿಕೊಂಡಿರುವ ಕಿಶನ್, ಮುಂದಿನ ಮೂರು ದಿನಗಳಲ್ಲಿ ಬಿಗ್‌ಬಾಸ್ ಜೀವನಕ್ಕೆ ಬರುತ್ತಿರೋದಾಗಿ ಹೇಳಿದ್ದಾರೆ. ಈ ಹಿಂದೆ ನಟ ಅರುಣ್ ಸಾಗರ್ ಎರಡು ಬಾರಿ ಬಿಗ್‌ಬಾಸ್ ಮನೆ ಸ್ಪರ್ಧಿಯಾಗಿದ್ದರು.

ಅರುಣ್ ಸಾಗರ್ ಅವರು ಬಿಗ್‌ಬಾಸ್ ಸೀಸನ್ ಮೊದಲ ಮತ್ತು ಒಂಬತ್ತರ ಸ್ಪರ್ಧಿಯಾಗಿದ್ದರು. ಇನ್ನು ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಸೀಸನ್ 4 ಮತ್ತು 13ರಲ್ಲಿಯೂ ಇದ್ದರು. ಎರಡು ಬಾರಿಯೂ ಅನಾರೋಗ್ಯದಿಂದ ಹೊರಗೆ ಬಂದಿದ್ದಾರೆ.

ಇದನ್ನೂ ಓದಿ: Mango Pachha OTT: ಒಟಿಟಿಗೆ ಕಾಲಿಟ್ಟ 'ಮ್ಯಾಂಗೋ ಪಚ್ಚ'; ಸ್ಟ್ರೀಮಿಂಗ್‌ ಎಲ್ಲಿ?

ಕಿಚ್ಚ ಸುದೀಪ್ ಅವರ ಘೋಷಣೆಯ ನಂತರ ಮನೆಯಲ್ಲಿ ಎಲಿಮಿನೇಷನ್ ಕುರಿತ ಕುತೂಹಲ ಹೆಚ್ಚಾಗಿದ್ದರೂ, ಅಂತಿಮವಾಗಿ ಹೊರಬರುವ ಸ್ಪರ್ಧಿ ಯಾರು ಎಂಬುದನ್ನು ಕೊನೆಯ ಕ್ಷಣದವರೆಗೂ ಊಹಿಸಲು ಸಾಧ್ಯವಾಗದಂತೆ ಪರಿಸ್ಥಿತಿ ಬದಲಾಗಿದೆ.

Yashaswi Devadiga

View all posts by this author