ಬಿಗ್ ಬಾಸ್ ಕನ್ನಡ 13 (Bigg Boss Kannada 13) ಕೆಲವೇ ದಿನಗಳಲ್ಲಿ ಬರ್ತಿದೆ. 'ಅಗ್ನಿ ಪರೀಕ್ಷೆ'ಗೆ (Agniparikshe) ಒಟ್ಟು 60 ಮಂದಿ ಬಂದಿದ್ದರು. ಜನರ ವೋಟಿಂಗ್ ಮೂಲಕ ನಡೆಯಲಿದೆ ಆಯ್ಕೆ: ಮನೆಯೊಳಗೆ ಹೋಗೋದು ಮೂರೇ ಮಂದಿ. ಹೀಗಾಗಿ ಸ್ಪರ್ಧಿಗಳ ಮಧ್ಯೆ ಪೈಪೋಟಿ ಜೋರಾಗಿಯೇ ನಡೆಯುತ್ತಿದೆ. ಅಗ್ನಿಪರೀಕ್ಷೆ (Agniparikshe) ಅಖಾಡದಲ್ಲಿ ಗಂಡು-ಹೆಣ್ಣು ಭೇದನೇ ಇಲ್ಲ. ಹಾಗೇ ಅಗ್ನಿಪರೀಕ್ಷೆ ಎದುರಿಸೋಕೆ age ಯಾವ ಲೆಕ್ಕ? ಈ ಪ್ರೋಮೋಗೂ ವೀಕ್ಷಕರ ಗಮನ ಸೆಳೆಯುತ್ತಿವೆ.
ಸ್ಪರ್ಧಿಗಳ ಮಧ್ಯೆ ಹಣಾಹಣಿ
ಸ್ಪರ್ಧಿಗಳ ಮಧ್ಯೆ ಹಣಾಹಣಿ ಜೋರಾಗಿದೆ. ಪೂರ್ಣಿಮಾ ತಂಡದಲ್ಲೇ ಅಸಮಧಾನ ಶುರುವಾಗಿತ್ತು. ನಾಯಕಿ ನಿರ್ಧಾರಕ್ಕೆ ತಂಡದವರೇ Rebel ಆಗಿದ್ದಾರೆ. ಮತ್ತೊಂದು ಕಡೆ ಟೀಂ ಕಟ್ಟುವಾಗ ಗಂಡು , ಹೆಣ್ಣು ಎಂಬ ಭೇದ ಶುರುವಾಗಿದೆ. ಅಗ್ನಿಪರೀಕ್ಷೆ ಅಖಾಡದಲ್ಲಿ ಗಂಡು-ಹೆಣ್ಣು ಭೇದನೇ ಇಲ್ಲ ಎಂಬ ಅಂಶವು ಇದರಲ್ಲಿದೆ.
ಇದನ್ನೂ ಓದಿ: Om Prakash: 3.85 ಕೋಟಿ ರೂ ವಂಚನೆ ಆರೋಪ: ನಿರ್ದೇಶಕ ಓಂ ಪ್ರಕಾಶ್ ರಾವ್ ವಿರುದ್ಧ ದೂರು
ಇನ್ನು ರತ್ನಮ್ಮ ಸ್ಟ್ರಾಂಗ್ ಇಲ್ಲ ಅಂತ ಟಾರ್ಗೆಟ್ ಮಾಡಿದ್ದಾರೆ. ಅದಕ್ಕೆ ರಗಡ್ ಆಗಿಯೇ ಉತ್ತರ ನೀಡಿದ್ದಾರೆ. ನಾನು ಯಾವುದರಲ್ಲಿ ಸ್ಟ್ರಾಂಗ್ ಇಲ್ಲ? ವಯಸ್ಸು ವಯಸ್ಸು ಅಂತೀರಾ! ನಾನು ಮಾಡೇ ಇರೋದು ನೀವು ಮಾಡಿ ತೋರಿಸಿ. ಅಂತ ಆಸನ ಮಾಡಿ ತೋರಿಸಿದ್ದಾರೆ. ಇದೆಲ್ಲ ಕಂಡ ಎಲ್ಲರೂ ಅಚ್ಚರಿಗೊಳಗಾದರು. ಒಟ್ಟಾರೆಯಾಗಿ ಪ್ರೋಮೋ ಕಂಡು ವೀಕ್ಷಕರು ಥ್ರಿಲ್ ಆಗಿದ್ದಾರೆ.
ಈ ಬಾರಿ ವಿಭಿನ್ನ ರೀತಿಯಲ್ಲಿ ವಾಹಿನಿ ಬಿಗ್ ಬಾಸ್ ಸೀಸನ್ 13ರ ಗ್ರ್ಯಾಂಡ್ ಓಪನಿಂಗ್ ಪ್ರೋಮೋವನ್ನು ಹಂಚಿಕೊಂಡಿದೆ. ಆ.16ರಿಂದ ಬಿಗ್ ಮನೆಗೆ ಎಂಟ್ರಿ ಕೊಡಲು ಸ್ಪರ್ಧಿಗಳ ಆಯ್ಕೆ ಪ್ರಕ್ರಿಯೆಗಾಗಿ ಅಗ್ನಿಪರೀಕ್ಷೆ ನಡೆಯುತ್ತಿದೆ. ಇದೀಗ ಆಯ್ಕೆಯಾದ ಸ್ಪರ್ಧಿಗಳನ್ನು ದೊಡ್ಮನೆಗೆ ಕಳುಹಿಸಲು ವೇದಿಕೆ ಸಜ್ಜಾಗಿದ್ದು,
View this post on Instagram A post shared by Colors Kannada Official (@colorskannadaofficial)
ಸೆ.6ರಂದು ಸಂಜೆ 7 ಗಂಟೆಗೆ Grand Opening ನಡೆಯಲಿದೆ. ಈ ಬಾರಿ ಕಿಚ್ಚ ಸುದೀಪ್ ವಿಮಾನ ಹತ್ತುವ ಮೂಲಕ ಗ್ರ್ಯಾಂಡ್ ಓಪನಿಂಗ್ ಡೇಟ್ ಅನ್ನು ಅನೌನ್ಸ್ ಮಾಡಿದ್ದಾರೆ. ಪೈಲಟ್ ಆದ ಸುದೀಪ್, ಬಿಗ್ ಬಾಸ್ 13ರ ವಿಮಾನವನ್ನು ಆಗಸಕ್ಕೆ ಕೊಂಡೊಯ್ಯಲಿದ್ದಾರೆ.
ಇದನ್ನೂ ಓದಿ: Bigg Boss Kannada 13: ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ; ಯಾರು best? ಯಾರು worst?
ಈವರೆಗೆ ವಾಹಿನಿ ಯಾವುದೇ ಸ್ಪರ್ಧಿಯ ಹೆಸರನ್ನು ಅಧಿಕೃತವಾಗಿ ಘೋಷಿಸಿಲ್ಲ. ಸುದೀಪ್ ನಿರೂಪಣೆಯೇ ಬಿಗ್ ಬಾಸ್ ಕನ್ನಡ ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಹಲವು ಸೀಸನ್‌ಗಳಿಂದ ಕಾರ್ಯಕ್ರಮವನ್ನು ಮುನ್ನಡೆಸಿಕೊಂಡು ಬರುತ್ತಿರುವ ಸುದೀಪ್ ಹೊಸ ಲುಕ್ ಈ ಬಾರಿಯೂ ವಿಶೇಷವಾಗಿರಲಿದೆ ಎನ್ನಲಾಗುತ್ತಿದೆ.