ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss kannada 13: ಅಮ್ಮ, ತಮ್ಮನನ್ನು ಹುಡುಕಲು ಬಂದ ಸ್ಪರ್ಧಿಯೇ ರಿಜೆಕ್ಟ್‌!

Bigg Boss kannada 13: 60 ಮಂದಿಯಲ್ಲಿ ಕೆಲವರು 'ಅಗ್ನಿ ಪರೀಕ್ಷೆಯನ್ನು ದಾಟಿ 'ಬಿಗ್ ಬಾಸ್' ಮನೆಗೆ ಸ್ಪರ್ಧಿಗಳಾಗಿ ಎಂಟ್ರಿ ಕೊಡಲಿದ್ದಾರೆ. ಜಿಯೋ ಹಾಟ್‌ ಸ್ಟಾರ್‌ನಲ್ಲಿ ಈಗಾಗಲೇ ಸ್ಟ್ರೀಮಿಂಗ್‌ (Straeming) ಶುರುವಾಗಿದೆ. ತೀರ್ಪುಗಾರರು ಕೊಟ್ಟ ಟಾಸ್ಕ್‌ ನಿಭಾಯಿಸಿ ಗೆದ್ದವರು ಮುಂದಿನ ರೌಂಡ್‌ಗೆ ಆಯ್ಕೆ ಆಗುತ್ತಾರೆ. ಜಡ್ಜ್‌ಗಳು ಮುಂದಿನ ಸುತ್ತಿಗೆ ಆಯ್ಕೆ ಮಾಡಿದ್ದಾರೆ. ಇನ್ನು ಕೆಲವರು ನೇರವಾಗಿ ರಿಜೆಕ್ಟ್ ಆಗಿದ್ದಾರೆ.

ಬಿಗ್‌ ಬಾಸ್‌ ಕನ್ನಡ

'ಬಿಗ್ ಬಾಸ್ ಅಗ್ನಿ ಪರೀಕ್ಷೆ' (Bigg Boss agnipariskha) ಶುರುವಾಗಿದೆ. 60 ಮಂದಿಯಲ್ಲಿ ಕೆಲವರು 'ಅಗ್ನಿ ಪರೀಕ್ಷೆಯನ್ನು ದಾಟಿ 'ಬಿಗ್ ಬಾಸ್' ಮನೆಗೆ ಸ್ಪರ್ಧಿಗಳಾಗಿ ಎಂಟ್ರಿ ಕೊಡಲಿದ್ದಾರೆ. ಜಿಯೋ ಹಾಟ್‌ ಸ್ಟಾರ್‌ನಲ್ಲಿ ಈಗಾಗಲೇ ಸ್ಟ್ರೀಮಿಂಗ್‌ (Straeming) ಶುರುವಾಗಿದೆ. ತೀರ್ಪುಗಾರರು ಕೊಟ್ಟ ಟಾಸ್ಕ್‌ ನಿಭಾಯಿಸಿ ಗೆದ್ದವರು ಮುಂದಿನ ರೌಂಡ್‌ಗೆ ಆಯ್ಕೆ ಆಗುತ್ತಾರೆ. ಜಡ್ಜ್‌ಗಳು ಮುಂದಿನ ಸುತ್ತಿಗೆ ಆಯ್ಕೆ ಮಾಡಿದ್ದಾರೆ. ಇನ್ನು ಕೆಲವರು ನೇರವಾಗಿ ರಿಜೆಕ್ಟ್ ಆಗಿದ್ದಾರೆ.

ಹಾಸನ ಮೂಲದ ಅವಳಿ ಸಹೋದರಿಯರು 'ಅಗ್ನಿ ಪರೀಕ್ಷೆ'ಗೆ ಬಂದಿದ್ದಾರೆ. ಭವಿಷ್ಯದಲ್ಲಿ ನಮಗೆ ಅವಳಿಗಳು ಸಿಕ್ಕಿಲ್ಲ ಅಂದ್ರೆ ನಾವು ಒಬ್ಬರನ್ನೇ ಮದುವೆ ಆಗುತ್ತೇವೆ. ಇಲ್ಲದಿದ್ರೆ ಸಿಂಗಲ್ ಆಗಿಕೊಂಡೇ ಇರುತ್ತೇವೆ ಎಂದಿದ್ದಾರೆ.

ಜೀವನದಲ್ಲಿ ಭಯ ಎಂದರೇನು ಎಂಬುದೇ ಗೊತ್ತಿಲ್ಲ! ರಣವೀರ್ ಸಿಂಗ್ ಸಿನಿಮಾ ಕ್ಲ್ಯಾಶ್‌ ಬಗ್ಗೆ ಯಶ್‌ ಖಡಕ್‌ ರಿಪ್ಲೈ

ನಿಮ್ಮ ಇಬ್ಬರಲ್ಲಿ ನಾವು ಒಬ್ಬರನ್ನು ಮಾತ್ರ ಆಯ್ಕೆ ಮಾಡಲು ಸಾಧಯ ಎಂದಿದ್ದಾರೆ ತೀರ್ಪುಗಾರರು, ಬಳಿಕ ಅವರಲ್ಲೇ ಚರ್ಚಿಸಿ ಯೋಗಿತಾ ಉಳಿದರು. ಅವರನ್ನು ಬಿಟ್ಟು ಇಲ್ಲಿ ಇರೋಕೆ ಆಗುತ್ತಾ? ಎಂದು ಕೇಳಿದ್ದಾರೆ. ಸಾಧ್ಯ ಇಲ್ಲ ಆದರೆ ಮದುವೆಯಾದ ಮೇಲೆ ಬೇರೆ ಆಗಿರಬೇಕು.

ಟಾಸ್ಕ್ ತುಂಬಾ ಚೆನ್ನಾಗಿ ಆಡುತ್ತೇನೆ ಎನ್ನುವ ಭರವಸೆಯಿದೆ ಎಂದಿದ್ದಾರೆ. ಆದರೆ ಕೊನೆಗೂ ಅವರು ರೆಜೆಕ್ಟ್‌ ಆಗಿದ್ದಾರೆ. ಇನ್ನಾ ಕಬಾಬ್ ಮಂಜ 'ಅಗ್ನಿ ಪರೀಕ್ಷೆ'ಗೆ ಬಂದಿದ್ದಾರೆ. ಎಮ್ಮೆ ಮೇಯಿಸುವುದರಿಂದ ಹಿಡಿದು ಈ ಸ್ಟೇಜ್‌ವರೆಗೆ ಬಂದಿದೆ. ಸದ್ಯಕ್ಕೆ ನಾನು ಕಬಾಬ್ ಹಾಕುತ್ತಿದ್ದೇನೆ ಎಂದಿದ್ದಾರೆ.

25 ವರ್ಷ ಆಯಿತು. ಚಿಕ್ಕ ಮಗಳೂರಿನಲ್ಲಿ ಎಮ್ಮೆ ಮೇಯಿಸೋಕೆ ನನ್ನನ್ನು ಬಿಟ್ಟು ಹೋದ್ರು ಅಲ್ಲಿ ಹೊಡೆಯುತ್ತಾರೆ ಎನ್ನುವ ಕಾರಣಕ್ಕೆ ಅಲ್ಲಿಂದ ಓಡಿಬಂದೆ. ಅವರನ್ನು ಹುಡುಕೋಕೆಗೋಸ್ಕರ ನಾನು ಸೋಶಿಯಲ್ ಮೀಡಿಯಾಕ್ಕೆ ಬಂದೆ ಎಂದಿದ್ದಾರೆ. ನಮ್ಮ ತಾಯಿ, ತಮ್ಮನನ್ನು ಹುಡುಕಲೆಂದೇ ಇಲ್ಲಿಗೆ ಬಂದಿದ್ದೇನೆ. ಆದರೆ ತಾಯಿ ತಮ್ಮ ಕಾರಣ ಮಾತ್ರ ಹೇಳಿದ ಕಾರಣ ರೆಜೆಕ್ಟ್‌ ಆದರು.

ಇದನ್ನೂ ಓದಿ: Ananya Raj : ಟಾಲಿವುಡ್‌ ನಟಿ ಅನನ್ಯಾ ರಾಜ್‌ ನಿಧನ; 27ರ ನಟಿಗೆ ಏನಾಯಿತು?

ಮಾಡರ್ನ್‌ ಬರಹಗಾರ ಮಹಾಕವಿ ಮಂಜ ಎಂಟ್ರಿಯೇ ಮಸ್ತಾಗಿತ್ತು. ಉಗೇ ಮಾದಪ್ಪ ಅಂತ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ. ನಾನು ಆ ಥರ ಈ ಥರ ಅಂತ ಥರಾ ಥರಾ ಜನಗಳ ನಡುವೆ ಅಚ್ಚ ಕನ್ನಡ ಪದ ಬಳಕೆಕಾರ ಅಂತ ಶುರು ಮಾಡಿದ್ದಾರೆ. ಈಗಾಗಲೇ 60 ಮಂದಿಯನ್ನು ಶಾರ್ಟ್‌ಲಿಸ್ಟ್ ಮಾಡಿ ಅಗ್ನಿಪರೀಕ್ಷೆಗೆ ಆಯ್ಕೆ ಮಾಡಲಾಗಿದೆ.ಇವರಲ್ಲಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡಲು ಯಾರು ಅಸಾಮಾನ್ಯರು ಎಂಬುದನ್ನು ಆಯ್ಕೆ ಮಾಡಲು ಸಂಗೀತಾ ಶೃಂಗೇರಿ, ವಿನಯ್ ಗೌಡ, ಚಂದನ್ ಶೆಟ್ಟಿ ಮತ್ತು ಶ್ರುತಿ ಜ್ಯೂರಿಗಳ ಸೀಟ್ ಅಲಂಕರಿಸಿದ್ದಾರೆ.

Yashaswi Devadiga

View all posts by this author