ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‌Bigg Boss Kannada 13ಬಿಗ್‌ಬಾಸ್ ಮನೆಗೆ ಮತ್ತೆ ಬರ್ತಿದ್ದಾರೆ ಈ ಡ್ಯಾನ್ಸರ್!

‌Bigg Boss Kannada 13: ಮತ್ತೊಂದೆಡೆ ಬಿಗ್ ಬಾಸ್ ನೀಡುತ್ತಿರುವ ಅನಿರೀಕ್ಷಿತ ಟ್ವಿಸ್ಟ್‌ಗಳು ವೀಕ್ಷಕರ ಕುತೂಹಲವನ್ನು ಇನ್ನಷ್ಟು ಹೆಚ್ಚಿಸುತ್ತಿವೆ. ‘ಎಮರ್ಜೆನ್ಸಿ ಎಕ್ಸಿಟ್’ ವಿಚಾರ ಇದೀಗ ಬಿಗ್ ಬಾಸ್ ಮನೆಯಲ್ಲಿ ಮಾತ್ರವಲ್ಲ, ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಚರ್ಚೆಗೆ ಕಾರಣವಾಗಿದೆ. ಬಿಗ್‌ಬಾಸ್ ಕನ್ನಡ ಸೀಸನ್ 13ಕ್ಕೆ ಮೂವರು ವೈಲ್ಡ್ ಕಾರ್ಡ್ ಮೂಲಕ ಪ್ರವೇಶಿಸಲಿದ್ದಾರೆ ಎಂಬ ಮಾತುಗಳ ನಡುವೆ, ಸೀಸನ್ 7ರ ಸ್ಪರ್ಧಿ ಕಿಶನ್ ಬಿಳಗಲಿ ಮತ್ತೆ ದೊಡ್ಮನೆಗೆ ಬರುತ್ತಿರುವ ಸುಳಿವು ನೀಡಿದ್ದಾರೆ.

ಬಿಗ್‌ ಬಾಸ್‌ ಕನ್ನಡ

ಬಿಗ್ ಬಾಸ್ ಕನ್ನಡ ಸೀಸನ್ 13’ (Bigg Boss Kannada 13) ದಿನದಿಂದ ದಿನಕ್ಕೆ ಮತ್ತಷ್ಟು ರೋಚಕವಾಗುತ್ತಲೇ ಇದೆ. ಒಂದೆಡೆ ಮನೆಯೊಳಗಿನ ಸ್ಪರ್ಧಿಗಳ ನಡುವೆ ಜಗಳ, ವಾದ-ವಿವಾದ, ಟಾಸ್ಕ್‌ಗಳ ಪೈಪೋಟಿ ಮತ್ತು ಮೈತ್ರಿಗಳ ಆಟ ಜೋರಾಗಿದ್ದರೆ, ಮತ್ತೊಂದೆಡೆ ಬಿಗ್ ಬಾಸ್ ನೀಡುತ್ತಿರುವ ಅನಿರೀಕ್ಷಿತ ಟ್ವಿಸ್ಟ್‌ಗಳು ವೀಕ್ಷಕರ ಕುತೂಹಲವನ್ನು ಇನ್ನಷ್ಟು ಹೆಚ್ಚಿಸುತ್ತಿವೆ. ‘ಎಮರ್ಜೆನ್ಸಿ ಎಕ್ಸಿಟ್’ (Emergency Twist) ವಿಚಾರ ಇದೀಗ ಬಿಗ್ ಬಾಸ್ ಮನೆಯಲ್ಲಿ ಮಾತ್ರವಲ್ಲ, ಸಾಮಾಜಿಕ ಜಾಲತಾಣಗಳಲ್ಲೂ ಭಾರೀ ಚರ್ಚೆಗೆ ಕಾರಣವಾಗಿದೆ. ಬಿಗ್‌ಬಾಸ್ ಕನ್ನಡ ಸೀಸನ್ 13ಕ್ಕೆ ಮೂವರು ವೈಲ್ಡ್ ಕಾರ್ಡ್ ಮೂಲಕ ಪ್ರವೇಶಿಸಲಿದ್ದಾರೆ ಎಂಬ ಮಾತುಗಳ ನಡುವೆ, ಸೀಸನ್ 7ರ ಸ್ಪರ್ಧಿ ಕಿಶನ್ ಬಿಳಗಲಿ (Kishan Biligali) ಮತ್ತೆ ದೊಡ್ಮನೆಗೆ ಬರುತ್ತಿರುವ ಸುಳಿವು ನೀಡಿದ್ದಾರೆ.

ಎಲಿಮಿನೇಷನ್ ಇರಲಿದೆ ಎಂದು ಪ್ರೇಕ್ಷಕರು ನಿರೀಕ್ಷಿಸಿದ್ದರೂ, ಜನರ ಮನ ಗೆದ್ದಿದ್ದ, ಬಿಗ್ ಬಾಸ್ ಮನೆಯೊಳಗೆ ತನ್ನದೇ ಆದ ಛಾಪು ಮೂಡಿಸಿದ್ದ ಮತ್ತು ವಿನ್ನರ್ ರೇಸ್‌ನಲ್ಲಿದ್ದಾರೆ ಎಂದು ವೀಕ್ಷಕರು ಭಾವಿಸಿದ್ದ ಸ್ಪರ್ಧಿಯೇ ಎಮರ್ಜೆನ್ಸಿ ಎಕ್ಸಿಟ್ ಪಡೆಯುವುದು ಅಚ್ಚರಿಯ ಬೆಳವಣಿಗೆಯಾಗಿದೆ.

ಇದನ್ನೂ ಓದಿ: Bigg Boss Kannada 13: ಈ ಎಕ್ಸಿಟ್‌ ಯಾರೂ ಊಹಿಸಿರಲಿಲ್ಲ! ಎಲಿಮಿನೇಟ್ ಆಗಿದ್ದು ಯಾರು?

ಇದುವರೆಗೆ ಮನೆಯೊಳಗಿನ ಆಟ, ವ್ಯಕ್ತಿತ್ವ ಹಾಗೂ ವಿವಿಧ ಸಂದರ್ಭಗಳಲ್ಲಿ ಸ್ಪರ್ಧಿಯ ನಡೆ-ನುಡಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ ಈ ಎಕ್ಸಿಟ್ ಕೇವಲ ಮನೆಯ ಸದಸ್ಯರಿಗೆ ಮಾತ್ರವಲ್ಲದೆ,ತಮ್ಮ ನೆಚ್ಚಿನ ಸ್ಪರ್ಧಿಯನ್ನು ವಿನ್ನರ್ ಆಗಿ ನೋಡಲು ಬಯಸಿದ್ದ ವೀಕ್ಷಕರಿಗೂ ಶಾಕ್ ನೀಡಲಿದೆ.

ಬಿಗ್‌ಬಾಸ್ ಕನ್ನಡ ಸೀಸನ್ 7ರ ಸ್ಪರ್ಧಿಯಾಗಿದ್ದ ಕಿಶನ್, ಮತ್ತೊಮ್ಮೆ ದೊಡ್ಮನೆ ರಿಯಾಲಿಟಿ ಶೋಗೆ ಬರುತ್ತಿದ್ದಾರೆ. ಈ ಬಗ್ಗೆ ಇನ್‌ಸ್ಟಗ್ರಾಂನಲ್ಲಿ ಸೀಸನ್ 7ರ ವಿಡಿಯೋ ಝಲಕ್‌ ಹಂಚಿಕೊಂಡಿರುವ ಕಿಶನ್, ಮುಂದಿನ ಮೂರು ದಿನಗಳಲ್ಲಿ ಬಿಗ್‌ಬಾಸ್ ಜೀವನಕ್ಕೆ ಬರುತ್ತಿರೋದಾಗಿ ಹೇಳಿದ್ದಾರೆ.

ಈ ಹಿಂದೆ ನಟ ಅರುಣ್ ಸಾಗರ್ ಎರಡು ಬಾರಿ ಬಿಗ್‌ಬಾಸ್ ಮನೆ ಸ್ಪರ್ಧಿಯಾಗಿದ್ದರು. ಅರುಣ್ ಸಾಗರ್ ಅವರು ಬಿಗ್‌ಬಾಸ್ ಸೀಸನ್ ಮೊದಲ ಮತ್ತು ಒಂಬತ್ತರ ಸ್ಪರ್ಧಿಯಾಗಿದ್ದರು. ಇನ್ನು ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಸೀಸನ್ 4 ಮತ್ತು 13ರಲ್ಲಿಯೂ ಇದ್ದರು. ಎರಡು ಬಾರಿಯೂ ಅನಾರೋಗ್ಯದಿಂದ ಹೊರಗೆ ಬಂದಿದ್ದಾರೆ.

ಕಿಚ್ಚ ಸುದೀಪ್ ಅವರ ಘೋಷಣೆಯ ನಂತರ ಮನೆಯಲ್ಲಿ ಎಲಿಮಿನೇಷನ್ ಕುರಿತ ಕುತೂಹಲ ಹೆಚ್ಚಾಗಿದ್ದರೂ, ಅಂತಿಮವಾಗಿ ಹೊರಬರುವ ಸ್ಪರ್ಧಿ ಯಾರು ಎಂಬುದನ್ನು ಕೊನೆಯ ಕ್ಷಣದವರೆಗೂ ಊಹಿಸಲು ಸಾಧ್ಯವಾಗದಂತೆ ಪರಿಸ್ಥಿತಿ ಬದಲಾಗಿದೆ.

ಇದನ್ನೂ ಓದಿ: BBK 13: ಅಗ್ನಿಪರೀಕ್ಷೆಯಲ್ಲಿ ಗೆದ್ದು ದೊಡ್ಮನೆಯೊಳಗೆ ಎಂಟ್ರಿ ಕೊಡೋದು ಯಾರು? 'ಬಿಗ್‌ ಬಾಸ್‌ ಕನ್ನಡ‌' ಟೀಮ್‌ನಿಂದ ಬಿಗ್‌ ಅಪ್ಡೇಟ್‌!

ಎಲಿಮಿನೇಷನ್ ಇದೆ ಅನ್ನೋದು ಗೊತ್ತಿತ್ತು… ಆದರೆ ಇವರೇ ಹೊರಹೋಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ!” ಎಂಬ ಮಾತು ಈಗ ದೊಡ್ಮನೆಯಿಂದ ಹೊರಗೆ ಪ್ರೇಕ್ಷಕರ ನಡುವೆಯೂ ಚರ್ಚೆಯಾಗುತ್ತಿದೆ.

Yashaswi Devadiga

View all posts by this author