ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ ಸೀಸನ್ 13 (Bigg Boss kannada 13), ʻಕಿಚ್ಚʼ ಸುದೀಪ್ ಅವರ ಸಾರಥ್ಯದಲ್ಲಿ ಅದ್ಧೂರಿಯಾಗಿ ಆರಂಭಗೊಂಡಿದೆ. ಮನೆಯೊಳಗೆ ಕಾಲಿಡುತ್ತಿದ್ದಂತೆ ಸ್ಪರ್ಧಿಗಳಿಗೆ ಇಡೀ ವಿಶ್ವವನ್ನು ಪರ್ಯಟನೆ ಮಾಡಿದ ಅನುಭವ ನೀಡುವ ರೀತಿಯಲ್ಲಿ ಪ್ರತಿಯೊಂದು ಮೂಲೆಯನ್ನೂ ಅತಿ ಸೂಕ್ಷ್ಮವಾಗಿ, ಕಲಾತ್ಮಕವಾಗಿ ವಿನ್ಯಾಸಗೊಳಿಸಲಾಗಿದೆ.ಈ ಬಾರಿ ಬಿಗ್ಬಾಸ್ನಲ್ಲಿ ಅಪರೂಪದ ಘಟನೆ ನಡೆಯಲಿದೆ. ನಾಲ್ಕು ಭಾಷೆಯ ಬಿಗ್ಬಾಸ್ ಶೋ (Bigg boss New Twist) ಒಟ್ಟಿಗೆ ಆರಂಭ ಆಗುತ್ತಿದ್ದು, ಕನ್ನಡ, ಮಲಯಾಳಂ, ತೆಲುಗು ಮತ್ತು ತಮಿಳು ಭಾಷೆಯ ಬಿಗ್ಬಾಸ್ ಏಕಕಾಲಕ್ಕೆ ಪ್ರಾರಂಭ ಆಗುತ್ತಿದೆ. ಇದೀಗ ಕಿಚ್ಚ ಈ ಬಾರಿಯ ಬಿಗ್ ಬಾಸ್ ಬಗ್ಗೆ ಒಂದು ಸುಳಿವು ನೀಡಿದ್ದಾರೆ. ಏನದು?
ಆ ಪ್ರಯಾಣ ಎಲ್ಲಿಗೆ ಹೋಗತ್ತೆ?
ಸುದೀಪ್ ಅವರು ವೇದಿಕೆಯಲ್ಲಿ ಮಾತನಾಡಿದ್ದು ಹೀಗೆ. ಈ ಸಲ ಟ್ವಿಸ್ಟ್ ಇದೆ. ಈ ವೇದಿಕೆ ಮೇಲೆ ನಮ್ಮ ಕಂಟೆಸ್ಟ್‌ಗೆ ಟ್ವಿಸ್ಟ್ ಫ್ರೀ ಇರುತ್ತದೆ. ಆದರೆ ಮಧ್ಯದ ಹಾದಿ ನೋಡಿಲ್ಲ. ಮಧ್ಯದಲ್ಲಿ ದಾರಿಯಲ್ಲಿ ಬಹಳ ಟ್ವಿಸ್ಟ್ ಇಟ್ಟಿದ್ದಾರೆ. ಇಂದು ಕೂಡ ಟ್ವಿಸ್ಟ್ ಇದೆ. ಆದರೆ ಸ್ಪರ್ಧಿಗಳು ಇಲ್ಲಿಂದ ಮನೆಗೆ ಹೋಗಲ್ಲ. ಎಲ್ಲಿ ಹೋಗ್ತಾರೆ? ಆ ಪ್ರಯಾಣ ಎಲ್ಲಿಗೆ ಹೋಗತ್ತೆ? ಇಲ್ಲಿಂದ ಸದ್ಯ ಟಿಕೆಟ್ ಕೊಡುತ್ತೇವೆ. ಕಳಿಸುತ್ತೇವೆ. ಆದರೆ ಮುಂದಿನ ಜರ್ನಿ ಬಗ್ಗೆ ಕಾದು ನೋಡಿ ಎಂದಿದ್ದಾರೆ.
ಖ್ಯಾತ ಸಿನಿಮಾ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಸಹ ಈ ಬಾರಿ ಬಿಗ್ಬಾಸ್ ಸ್ಪರ್ಧಿ ಆಗಿ ಬಿಗ್ಬಾಸ್ ಮನೆಗೆ ಹೋಗುತ್ತಿದ್ದಾರೆ. ಈ ಹಿಂದೆಯೂ ಒಮ್ಮೆ ಬಿಗ್ಬಾಸ್ ಮನೆಗೆ ಓಂ ಪ್ರಕಾಶ್ ಹೋಗಿದ್ದರು ಆದರೆ ಅನಾರೋಗ್ಯದಿಂದ ಹೊರಗೆ ಬಂದಿದ್ದರು. ಬಿಗ್ಬಾಸ್ ಕನ್ನಡ ಸೀಸನ್ 13 ಶುರುವಾಗಿದೆ. ಸುದೀಪ್ ಅವರು ಅಧಿಕೃತವಾಗಿ ಬಿಗ್ಬಾಸ್ಗೆ ಆರಂಭ ನೀಡಿದ್ದು, ಜಾಲಿವುಡ್ನ ಸ್ಟುಡಿಯೋದ ಒಳಗೆ ನಿರ್ಮಾಣ ಮಾಡಲಾಗಿರುವ ಬಿಗ್ಬಾಸ್ ಮನೆಗೆ ಸ್ಪರ್ಧಿಗಳನ್ನು ಒಬ್ಬೊಬ್ಬರನ್ನಾಗಿ ಕಳಿಸುತ್ತಿದ್ದಾರೆ. ಈ ಬಾರಿ ಫ್ಲೈಟ್ ಥೀಮ್ನಲ್ಲಿ ಬಿಗ್ಬಾಸ್ ಮನೆ ವಿನ್ಯಾಸ ಮಾಡಲಾಗಿದ್ದು, ಪ್ರಪಂಚದ ಏಳು ಅಚ್ಚರಿಗಳನ್ನು ಬಿಗ್ಬಾಸ್ ಮನೆಯೊಳಗೆ ನಿರ್ಮಿಸಲಾಗಿದೆ.
ಕಳೆದ ಬಾರಿಯ ಮೈಸೂರು ಅರಮನೆಯ ವಿನ್ಯಾಸದ ಬದಲು ಈ ಬಾರಿ ಪ್ರವೇಶ ದ್ವಾರಕ್ಕೆ ‘ನ್ಯೂಯಾರ್ಕ್ ಸಿಟಿ’ಯ ಅತ್ಯಾಧುನಿಕ ರೂಪ ನೀಡಲಾಗಿದೆ. ಮುಖ್ಯದ್ವಾರದ ಮೇಲ್ಭಾಗದಲ್ಲೇ ವಿಮಾನದ ಕಾಕ್‌ಪಿಟ್ ರೂಪಿಸಲಾಗಿದ್ದು, ಅಲ್ಲಿಂದ ಒಳಗೆ ಇಳಿದುಬರಲು ಮೆಟ್ಟಿಲುಗಳನ್ನು ಜೋಡಿಸಿರುವುದು ಪ್ರಮುಖ ಆಕರ್ಷಣೆಯಾಗಿದೆ.
ಇದರ ಜೊತೆಗೆ, ಸ್ಪರ್ಧಿಗಳ ಆರೋಗ್ಯ ರಕ್ಷಣೆ ಮತ್ತು ತುರ್ತು ಚಿಕಿತ್ಸೆಗಾಗಿ 24 ಗಂಟೆಯೂ ಕಾರ್ಯನಿರ್ವಹಿಸುವ ವೈದ್ಯಕೀಯ ತಂಡದೊಂದಿಗೆ ಸುಸಜ್ಜಿತ ‘ಪ್ರಥಮ ಚಿಕಿತ್ಸಾ ಕೇಂದ್ರ’ವನ್ನು ಪ್ರವೇಶ ದ್ವಾರದ ಬಳಿಯೇ ಸ್ಥಾಪಿಸಲಾಗಿದೆ. ಇನ್ನು ಇಡೀ ಮನೆಯ ಸಂಚಾರಕ್ಕೆ ಸಾಂಕೇತಿಕವಾಗಿ ದಾರಿ ತೋರಲು ಒಳಗೊಂದು ದೊಡ್ಡ ದಿಕ್ಸೂಚಿಯನ್ನು ಅಳವಡಿಸಲಾಗಿದೆ.