ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಿಗ್ ಬಾಸ್ ಮನೆಯಲ್ಲಿ ವೈಲ್ಡ್ ಕಾರ್ಡ್ ಕಿಚ್ಚು: 'ಘಾಟಿ' ಗಾನವಿ ಎಂಟ್ರಿಗೆ ಬೆದರದ ಯಶಸ್‌ ಕೃಷ್ಣ, ಸೈಲೆಂಟ್ ಆಗಿದ್ದ ಹುಡುಗ ಈಗ ಫುಲ್ ರೆಬೆಲ್!

Bigg Boss Kannada 13: ಬಿಗ್‌ ಬಾಸ್‌ ಅಖಾಡಕ್ಕೆ ವೈಲ್ಡ್ ಕಾರ್ಡ್ ಸ್ಪರ್ಧಿಗಳ ಆಗಮನದಿಂದ ಸಂಘರ್ಷದ ಕಿಡಿ ಹೊತ್ತಿಕೊಂಡಿದೆ. ‘ಘಾಟಿ’ ಗಾನವಿ ನೀಡಿದ ಕಟು ಮಾತುಗಳ ಹೊಡೆತಕ್ಕೆ ಕುದ್ದುಹೋದ ಯಶಸ್‌ ಕೃಷ್ಣ ಬಿಗ್ ಬಾಸ್ ನಿಯಮಗಳನ್ನೇ ಗಾಳಿಗೆ ತೂರಿದ್ದಾರೆ.

‘ಬಿಗ್ ಬಾಸ್ ಕನ್ನಡ 13’ ಮನೆಯಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಗಳ ಎಂಟ್ರಿಯ ಬೆನ್ನಲ್ಲೇ ಆಟದ ಸ್ವರೂಪವೇ ಬದಲಾಗಿದೆ. ಭಾನುವಾರದ ಸಂಚಿಕೆಯಲ್ಲಿ ‘ಘಾಟಿ’ ಖ್ಯಾತಿಯ ಗಾನವಿ, ಹಾಸ್ಯನಟ ಪ್ರಶಾಂತ್ ಹಾಗೂ ನಟಿ ಸೋನಿಕಾ ಗೌಡ ಅವರನ್ನು ಬಿಗ್ ಬಾಸ್ ಮನೆಗೆ ಅಧಿಕೃತವಾಗಿ ಕಳುಹಿಸಿಕೊಡಲಾಗಿದೆ.

ಮನೆ ಪ್ರವೇಶಿಸುತ್ತಿದ್ದಂತೆಯೇ ಇತರ ಸ್ಪರ್ಧಿಗಳ ಆಟವನ್ನು ಹೈಜಾಕ್ ಮಾಡುವ ಟಾಸ್ಕ್‌ನಲ್ಲಿ ತೊಡಗಿಕೊಂಡ ಗಾನವಿ, ಮೊದಲ ವಾರದಿಂದಲೂ ಸೈಲೆಂಟ್ ಆಗಿದ್ದ ಯಶಸ್‌ ಕೃಷ್ಣ ಹಾಗೂ ಕಿರಣ್ ಶಾಸ್ತ್ರಿ ಅವರ ಸ್ಥಾನವನ್ನು ಕಸಿದುಕೊಂಡು ಅವರನ್ನು ಮತ್ತೆ ವಿಮಾನದೊಳಕ್ಕೆ ಕಳುಹಿಸಿ ನೇರ ಪೈಪೋಟಿಗಿಳಿದಿದ್ದಾರೆ.

‌ಉಗ್ರ ರೂಪ ತಾಳಿದ ಯಶಸ್

ಈ ಹಿಂದೆ ‘ಹಳ್ಳಿ ಪವರ್’ ರಿಯಾಲಿಟಿ ಶೋನಲ್ಲಿ ಮೊದಲ ರನ್ನರ್ ಅಪ್ ಆಗಿ, ನೇರ ನುಡಿಯಿಂದ ಗುರುತಿಸಿಕೊಂಡಿದ್ದ ಗಾನವಿ, ಬಿಗ್ ಬಾಸ್ ಮನೆಯೊಳಗೆ ಬಂದ ತಕ್ಷಣ ಯಶಸ್‌ ಹಾಗೂ ಕಿರಣ್‌ಗೆ ಖಡಕ್ ಟಕ್ಕರ್ ನೀಡಿದ್ದರು. "ಯಶಸ್‌ ಅತಿಯಾಗಿ ಡ್ರಾಮಾ ಮಾಡುತ್ತಾರೆ. ಇನ್ನು ಕಿರಣ್ ಅಕ್ಕ ಅಕ್ಕ ಎಂದು ಬೇಡುತ್ತಾ ಕಾಲ ಕಳೆಯುತ್ತಾರೆ, ನಿಮ್ಮನ್ನು ನೋಡಿದರೆ ಕಿರಿಕಿರಿ ಆಗುತ್ತದೆ" ಎಂದು ಟೀಕಿಸಿ ಇಬ್ಬರನ್ನೂ ಫ್ಲೈಟ್‌ಗೆ ತಳ್ಳಿದ್ದರು. ಆದರೆ ಗಾನವಿಯ ಈ ತಂತ್ರ ಇದೀಗ ಉಲ್ಟಾ ಹೊಡೆದಂತೆ ಕಾಣುತ್ತಿದ್ದು, ಫ್ಲೈಟ್‌ನಿಂದ ವಾಪಸ್ ಬಂದಿರುವ ಯಶಸ್‌ ಕೃಷ್ಣ ಬಿಗ್ ಬಾಸ್ ನಿಯಮಗಳನ್ನೇ ಗಾಳಿಗೆ ತೂರಿ ಉಗ್ರ ರೂಪ ತಾಳಿದ್ದಾರೆ.

ತಾಕತ್ ಇದ್ರೆ ತಡೆಯಿರಿ

ಬಿಗ್ ಬಾಸ್ ಆದೇಶವನ್ನು ಉಲ್ಲಂಘಿಸಿರುವ ಯಶಸ್‌, “ನಾನು ಏನಾದರೂ ಮಾಡಬೇಕು, ಅದು ಎಲ್ಲರಿಗೂ ತಟ್ಟಬೇಕು” ಎಂದು ಹಠಕ್ಕೆ ಬಿದ್ದಿದ್ದಾರೆ. ಯಶಸ್‌ ಅವರ ಈ ನಿಯಮ ಉಲ್ಲಂಘನೆಯಿಂದಾಗಿ ಇಡೀ ಮನೆಗೆ ದೊರೆತಿದ್ದ ಅರ್ಧದಷ್ಟು ಮೊಟ್ಟೆಗಳನ್ನು ವಾಪಸ್ ಕೊಡುವಂತೆ ಬಿಗ್ ಬಾಸ್ ಕಠಿಣ ಶಿಕ್ಷೆ ವಿಧಿಸಿದ್ದಾರೆ.

ಯಶಸ್‌ ವರ್ತನೆಯಿಂದ ಮೊಟ್ಟೆ ಕಳೆದುಕೊಳ್ಳುತ್ತಿದ್ದೇವೆ ಎಂದು ಲಿಖಿತ್ ಸೇರಿದಂತೆ ಇತರ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದಾಗ, “ನನ್ನ ಪಾಲಿನ ಮೊಟ್ಟೆ ಕೊಟ್ಟರೆ ರೇಷನ್, ಹಣ್ಣು ಎಲ್ಲವೂ ವಾಪಸ್ ಹೋಗುವಂತೆ ಮಾಡುತ್ತೇನೆ. ಇನ್ನೊಮ್ಮೆ ರೂಲ್ಸ್ ಬ್ರೇಕ್ ಮಾಡುತ್ತೇನೆ, ತಾಕತ್ ಇದ್ದವರು ತಡೆಯಿರಿ” ಎಂದು ಮನೆಯವರಿಗೆ ಬಹಿರಂಗ ಸವಾಲು ಹಾಕಿದ್ದಾರೆ. ಸದಾ ಸೈಲೆಂಟ್‌ ಆಗಿರುತ್ತಿದ್ದ ಯಶಸ್‌ ದಿಢೀರ್ ಅಂತ ರೆಬೆಲ್ ಆಗಿರುವುದು ಮನೆಯ ಸದಸ್ಯರಲ್ಲಿ ತೀವ್ರ ಗೊಂದಲ ಮೂಡಿಸಿದೆ.

Bigg boss Kannada 13: BBK 13: ಶೋ ಎಂಟ್ರಿ ಕೊಡ್ತಿದ್ದಂಗೆ ಬಿಗ್‌ ಬಾಸ್‌ಗೇ ಕೌಂಟರ್‌ ಕೊಟ್ಟ ಓಂ ಪ್ರಕಾಶ್‌ ರಾವ್; ಈ ಡೈರೆಕ್ಟರ್‌ ಮಾತಿಗೆ ಬೀಪ್‌ ಹಾಕ್ತಾರಾ?

ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳಿಗೆ ನೆಟ್ಟಿಗರ ಕಿವಿಮಾತು

ಮತ್ತೊಂದೆಡೆ, ವೈಲ್ಡ್ ಕಾರ್ಡ್ ಸ್ಪರ್ಧಿಗಳ ಈ ಅತಿಯಾದ ಆಕ್ರಮಣಕಾರಿ ವರ್ತನೆಗೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಹೊರಗಿನಿಂದ ಇಡೀ ಆಟವನ್ನು ನೋಡಿಕೊಂಡು ಬಂದು ಒಳಗೆ ಪ್ರವೇಶಿಸುತ್ತಿದ್ದಂತೆಯೇ ಸ್ಪರ್ಧಿಗಳನ್ನು ಜಡ್ಜ್ ಮಾಡುವುದನ್ನು ಬಿಗ್ ಬಾಸ್ ವೀಕ್ಷಕರು ಖಂಡಿಸಿದ್ದಾರೆ. "ಹೊರಗಿದ್ದು ಮಾತಾಡುವುದು ಸುಲಭ, ಒಳಗೆ 24 ಗಂಟೆ ಇದ್ದು ಆಡುವುದು ಸವಾಲಿನ ಕೆಲಸ. ಸುಮ್ಮನೆ ಮಾತಿನಲ್ಲೇ ಕಮಾಲ್ ಮಾಡದೆ ಟಾಸ್ಕ್‌ಗಳಲ್ಲಿ ತಾಕತ್ತು ತೋರಿಸಿ" ಎಂದು ನೆಟ್ಟಿಗರು ಟ್ವೀಟ್ ಮಾಡುತ್ತಿದ್ದಾರೆ.