ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ (Bigg Boss Kannada 13) ದಿನದಿಂದ ದಿನಕ್ಕೆ ಆಟದ ಕಾವು ಹೆಚ್ಚಾಗುತ್ತಿದೆ. ಅದರಲ್ಲೂ ಬುದ್ಧಿವಂತಿಕೆಯಿಂದ ಆಡುವ ಸ್ಪರ್ಧಿಗಳು ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ. ಈ ಪೈಕಿ ಯಶಸ್ (Yashas) ತಮ್ಮ ಚಾಣಾಕ್ಷ ಆಟದ ಮೂಲಕ ಎಲ್ಲರಿಗಿಂತ ಒಂದು ಹೆಜ್ಜೆ ಮುಂದಿದ್ದಾರೆ. ಇದೀಗ ನಡೆದಿರುವ ಟಾಸ್ಕ್ನಲ್ಲೂ ಯಶಸ್ ತಮ್ಮ ಬುದ್ಧಿವಂತಿಕೆ ಪ್ರದರ್ಶಿಸಿದ್ದು, ಮನೆಯ ಇತರ ಸದಸ್ಯರನ್ನು ಗೊಂದಲಕ್ಕೆ ಸಿಲುಕಿಸಿದ್ದಾರೆ.
ಕನ್ನಡಿಯಲ್ಲಿ ಪ್ರಶಾಂತ್ ಹೆಸರು ಬರೆದಿದ್ದು ಯಾರು?
ಬಿಗ್ ಬಾಸ್ ಮನೆಯಲ್ಲಿ ನಡೆದಿರುವ ಹೊಸ ಟಾಸ್ಕ್ನಲ್ಲಿ ಕನ್ನಡಿಯ ಮೇಲೆ ಪ್ರಶಾಂತ್ ಎಂಬ ಹೆಸರನ್ನು ಬರೆಯಲಾಗಿದೆ. ಈ ಹೆಸರು ಬರೆದವರು ಯಾರು ಎಂಬುದನ್ನು ಪತ್ತೆಹಚ್ಚಲು ಮನೆಯ ಸದಸ್ಯರೆಲ್ಲರೂ ಪ್ರಯತ್ನಿಸುತ್ತಿದ್ದಾರೆ. ಆದರೆ, ಅಸಲಿ ಆಟಗಾರ ಯಶಸ್ ಎಂಬುದು ತಿಳಿಯದ ಮನೆಯ ಮಂದಿ ಬೇರೆ ಸ್ಪರ್ಧಿಗಳ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: Bigg Boss Kannada 13: ಬಿಗ್ ಬಾಸ್ ಮನೆಯಲ್ಲಿ ಈ ಗುಳ್ಳೆನರಿಯ ಆಟ ಶುರು! ಸ್ಪರ್ಧಿಗಳಿಗೆ ಢವ ಢವ
ಹೆಸರು ಬರೆದಿರುವ ಯಶಸ್ ಮಾತ್ರ ತಮ್ಮ ಮೇಲಿನ ಅನುಮಾನ ಬಾರದಂತೆ ಜಾಣತನದಿಂದ ವರ್ತಿಸುತ್ತಿದ್ದಾರೆ. ಮನೆಯವರ ಗಮನವನ್ನು ಬೇರೆಡೆಗೆ ಸೆಳೆಯುವಲ್ಲಿ ಯಶಸ್ ಯಶಸ್ವಿಯಾಗಿರುವಂತೆ ಕಾಣುತ್ತಿದೆ. ಇದರಿಂದಾಗಿ ಮನೆಯೊಳಗೆ ಅನುಮಾನ ಮತ್ತು ಕುತೂಹಲ ಹೆಚ್ಚಾಗಿದೆ.
ಮತ್ತೆ ಮುನ್ನೆಲೆಗೆ ಬಂದ ಗುಳ್ಳೆನರಿ ಆಟ!
'ಬಿಗ್ ಬಾಸ್ ಕನ್ನಡ ಸೀಸನ್ 13'ರಲ್ಲಿ ಇದೀಗ ಹೊಸ ಅಲೆಯನ್ನೇ ಸೃಷ್ಟಿಸಿರುವುದು ಗುಳ್ಳೆನರಿ ಟಾಸ್ಕ್. ಈ ಹಿಂದೆ ನಡೆದ ಕಿರೀಟ ಮತ್ತು ಡೈಮಂಡ್ ಕದಿಯುವ ಟಾಸ್ಕ್ಗಳ ಮಾದರಿಯಲ್ಲೇ ಈ ಆಟವೂ ಕುತೂಹಲ ಮೂಡಿಸುತ್ತಿದೆ. ಯಾರು ನಿಜವಾದ ಆಟಗಾರರು? ಯಾರು ಯಾರನ್ನು ಯಾಮಾರಿಸುತ್ತಿದ್ದಾರೆ? ಎಂಬ ಪ್ರಶ್ನೆಗಳು ವೀಕ್ಷಕರಲ್ಲಿ ಮೂಡಿವೆ.
ಯಶಸ್ ಆಟಕ್ಕೆ ಮನೆಯವರು ಫಿದಾ ಆಗ್ತಾರಾ?
ಈ ಟಾಸ್ಕ್ ನಿಧಾನವಾಗಿ ಸಾಗುತ್ತಿರುವುದರಿಂದ ಮನೆಯ ಸದಸ್ಯರು ಗುಳ್ಳೆನರಿಯನ್ನು ಪತ್ತೆಹಚ್ಚಲು ಹರಸಾಹಸ ಪಡುತ್ತಿದ್ದಾರೆ. ಆದರೆ, ಎಲ್ಲರ ಕಣ್ಣೆದುರೇ ಆಟವಾಡುತ್ತಿರುವ ಯಶಸ್ ಮಾತ್ರ ತಮ್ಮ ಬುದ್ಧಿವಂತಿಕೆಯಿಂದ ಅನುಮಾನ ಬಾರದಂತೆ ನೋಡಿಕೊಳ್ಳುತ್ತಿದ್ದಾರೆ.