ಬಿಗ್ ಬಾಸ್ ಅಗ್ನಿಪರೀಕ್ಷೆʼ (Bigg Boss agnipariskshe) ಎಂಬ ವಿಶೇಷ ಸೆಲೆಕ್ಷನ್ ಪ್ರಕ್ರಿಯೆ ಇದೆ. ಜಡ್ಜ್‌ಗಳಾಗಿ ಸಂಗೀತಾ ಶೃಂಗೇರಿ ಹಾಗೂ ವಿನಯ್ ಗೌಡ ಚಂದನ್ ಶೆಟ್ಟಿ ಶೃತಿ ಕಾಣಿಸಿಕೊಳ್ಳಲಿದ್ದಾರೆ. ಪ್ರೇಕ್ಷಕರಲ್ಲಿ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಾಗ್ತಿದೆ. ತೀರ್ಪುಗಾರರ ಮುಂದೆ ಪ್ರಬಲ ಪೈಪೋಟಿ ಏರ್ಪಟ್ಟಿದೆ. ವೇದಿಕೆಯ ಮೇಲೆ ಬಂದ ಸ್ಪರ್ಧಿಯೊಬ್ಬರು ಮಾಜಿ ಬಿಗ್‌ಬಾಸ್ ಸ್ಪರ್ಧಿ ವಿನಯ್ ಗೌಡ (Vinay Gowda) ಅವರ ಫೋಟೋವನ್ನು ಹಿಡಿದು, ವಿನಯ್ ಗೌಡ ಅಲ್ಲಿರೋದಕ್ಕೆ ಲಾಯಕ್ಕೇ ಇಲ್ಲ ಎಂದು ಅವರ ಫೋಟೋಗೆ ನೇರವಾಗಿ ಬೆಂಕಿ (Fire) ಹಚ್ಚಿದ್ದಾರೆ.
ವಿನಯ್ ಗೌಡ ಅಲ್ಲಿರೋದಕ್ಕೆ ಲಾಯಕ್ಕೇ ಇಲ್ಲ
ಮೊದಲಿಗೆ ಮಹಿಳಾ ಸ್ಪರ್ಧಿಯೊಬ್ಬರಿಗೆ ತೀರ್ಪುಗಾರರಿಂದ ತೀವ್ರ ವಿರೋಧ ವ್ಯಕ್ತವಾಯಿತು. ನಾನು ಪಕ್ಕಾ ಎಂಟರ್‌ಟೈನ್‌ಮೆಂಟ್ ಕೊಡ್ತೀನಿ ಎಂದ ಮಹಿಳಾ ಸ್ಪರ್ದಿ ನಡವಳಿಕೆ ಕಂಡು ಸಂಗೀತಾ ಗರಂ ಆದರು.
ಇದನ್ನೂ ಓದಿ: Vijay kumar: 'ಮಂಗಳಗೌರಿ ಮದುವೆ' ಸೀರಿಯಲ್ ಖ್ಯಾತಿಯ ನಟ ಇನ್ನಿಲ್ಲ
ಈ ಕ್ರಿಂಜ್ ನಡವಳಿಕೆಯನ್ನು ನಾವು ಎಂಟರ್‌ಟೈನ್‌ಮೆಂಟ್ ಅಂತ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಬಿಗ್‌ಬಾಸ್ ಮನೆಯಲ್ಲಿ ನೋಡಲು ನಾವು ಇಷ್ಟಪಡುವುದಿಲ್ಲ ಎಂದು ನೇರವಾಗಿ ಹೇಳಿದರು. ಮತ್ತೊಂದು ಕಡೆ ವಿನಯ್ ಹಾಗೂ ಚಂದನ್ ಪೋಟೋ ಕೂಡ ಸುಟ್ಟಿದ್ದಾರೆ. ವಿನಯ್ ಗೌಡ ಅಲ್ಲಿರೋದಕ್ಕೆ ಲಾಯಕ್ಕೇ ಇಲ್ಲ ಎಂದು ಅವರ ಫೋಟೋಗೆ ನೇರವಾಗಿ ಬೆಂಕಿ ಹಚ್ಚಿದ್ದಾರೆ. ಇದಲ್ಲ ಗಮನಿಸಿದರೆ ಟಾಸ್ಕ್ನ ಭಾಗ ಆಗಿರಬಹುದು ಎಂದು ಕಮೆಂಟ್ ಮಾಡ್ತಿದ್ದಾರೆ ವೀಕ್ಷಕರು.
ಬಿಗ್ ಬಾಸ್ ಮನೆ ಪ್ರವೇಶಿಸಲು 60 ಜನ ಸ್ಪರ್ಧಿಗಳ ನಡುವೆ ಕಠಿಣ ಸವಾಲುಗಳು ನಡೆಯುತ್ತಿದೆ. ಸ್ಪರ್ಧಿಗಳ ಸಹನೆ, ದೈಹಿಕ ಸಾಮರ್ಥ್ಯ, ಆಟದ ತಂತ್ರ ಹಾಗೂ ನಡೆನುಡಿಯನ್ನ ಪರೀಕ್ಷಿಸಲು ಜಡ್ಜ್‌ಗಳು ನೇರವಾಗಿ ವೇದಿಕೆಯಲ್ಲೇ ವಿಭಿನ್ನ ಟಾಸ್ಕ್‌ಗಳನ್ನ ನೀಡಿದ್ದಾರೆ.
ಇದೇ ಆಗಸ್ಟ್ 16ರ ರಾತ್ರಿ 9ಕ್ಕೆ ಬಿಗ್ ಮನೆಗೆ ಎಂಟ್ರಿ
ಈ ಟಾಸ್ಕ್‌ಗಳನ್ನ ಪೂರ್ಣಗೊಳಿಸಲು ಸ್ಪರ್ಧಿಗಳು ಹರಸಾಹಸ ಪಡ್ತಿರೋದು ಪ್ರೋಮೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಒಟ್ಟಾರೆಯಾಗಿ, ಈ 60 ಮಂದಿ ಸ್ಪರ್ಧಿಗಳಲ್ಲಿ ಅಂತಿಮವಾಗಿ ʻಬಿಗ್ ಬಾಸ್ʼ ಮುಖ್ಯ ಮನೆಗೆ ಅರ್ಹತೆ ಪಡೆಯುವವರು ಯಾರು? ಅನ್ನೋದೇ ಕುತೂಹಲ. ಈ ಬಾರಿ ದೊಡ್ಮನೆಗೆ ಎಂಟ್ರಿ ಕೊಡೋಕೆ ಅಗ್ನಿಪರೀಕ್ಷೆಯ ವೇದಿಕೆ ಸಜ್ಜಾಗಿದೆ.
ಇದನ್ನೂ ಓದಿ: Bigg boss Kannada 13: ಆಗಲ್ಲ ಅಂದ್ರೆ ಹೋಗ್ತಾ ಇರು! ಅಮುಕು ಡುಮುಕುಗೆ ಬೆಂಡೆತ್ತಿದ ವಿನಯ್ ಗೌಡ
ಇದೇ ಆಗಸ್ಟ್ 16ರ ರಾತ್ರಿ 9ಕ್ಕೆ ಬಿಗ್ ಮನೆಗೆ ಎಂಟ್ರಿ ಕೊಡೋಕೆ ಅಗ್ನಿಪರೀಕ್ಷೆಯ ವೇದಿಕೆ ಸಜ್ಜಾಗಿದೆ. ಈಗ ಆ ಕನಸುಗಳಿಗೆ ವೇದಿಕೆ ಸಜ್ಜಾಗ್ತಿದೆ. ಈ ಅಂತಿಮ ಪರೀಕ್ಷೆಯನ್ನು ಎದುರಿಸಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಡೋರು ಯಾರು?.. ಇದೆಲ್ಲದಕ್ಕೆ ಉತ್ತರ ಆಗಸ್ಟ್ 16ರ ರಾತ್ರಿ 9ಕ್ಕೆ ಸಿಗಲಿದೆ ಎಂದು ತಿಳಿಸಿದೆ.