ಸಾಮಾನ್ಯವಾಗಿ ಸುದೀಪ್ (Sudeep) ಅವರು ಭಾನುವಾರದ ಸಂಚಿಕೆಯನ್ನು ಸಖತ್ ಲವಲವಿಕೆಯಿಂದ ನಡೆಸಿಕೊಡುತ್ತಾರೆ. ಈ ಸಂಡೇ ಕೂಡ ಅದು ಮುಂದುವರಿಯಲಿದೆ. ‘ಕಲರ್ಸ್ ಕನ್ನಡ’ ವಾಹಿನಿ ಈ ಪ್ರೋಮೋವನ್ನು ಹಂಚಿಕೊಂಡಿದೆ. ಬಿಗ್ಬಾಸ್ ಮನೆಯಲ್ಲಿ ಮತ್ತೊಂದು ವಾರದ ಪಂಚಾಯಿತಿ ಚಾಲ್ತಿಯಲ್ಲಿದೆ. ನಿನ್ನೆ ನಡೆದ ಶನಿವಾರದ (Saturday episode) ಪಂಚಾಯಿತಿ ಶಾಂತವಾಗಿ ತಮಾಷೆಯಿಂದ ನಡೆಯಿತು. ಭಾನುವಾರ ಎಲಿಮಿನೇಷನ್ ದಿನವಾಗಿದ್ದು, ಇಂದು ಸಹ ಸುದೀಪ್ ಅವರು ಸ್ಪರ್ಧಿಗಳಿಂದ ಹಲವು ಆಕ್ಟಿವಿಟಿಗಳನ್ನು ಮಾಡಿಸಿದ್ದಾರೆ.
ಮನೆಯಲ್ಲಿ ಯಾರು ಶತ್ರು, ಯಾರು ಮಿತ್ರ ಎಂದು ಕಾರಣ ನೀಡಿ ಆಯ್ಕೆ ಮಾಡುವಂತೆ ಸುದೀಪ್ ಸೂಚಿಸಿದ್ದರು. ಈ ವೇಳೆ ಆಸಿಯಾ, ಗಗನ್ಗೆ ಸಖತ್ ಆಗಿ ಕೌಂಟರ್ ಕೊಟ್ಟಿದ್ದಾರೆ. ಇನ್ನು ಸೋನಿಕಾ, ಆಸಿಯಾಗೆ ಟಾಂಗ್ ಕೊಟ್ಟಿದ್ದಾರೆ. ಮೊದಲಿಗೆ ಯಶಸ್ ಅವರು ಪ್ರಶಾಂತ್ ಅವರು ಧನುಷ್ ಜೊತೆ ಕ್ಲೋಸ್ ಆಗಿದ್ದರೂ, ಆಗಾಗ ಸ್ಟೇಟ್ಮೆಂಟ್ ಪಾಸ್ ಮಾಡುತ್ತಾರೆ. ಇನ್ನು ನಾನೇ ಮಾಡಿದೆ, ನನ್ನಿಂದ ಎಲ್ಲ, ಎನ್ನುವ ಅಟೆನ್ಷನ್ ಸೀಕಿಂಗ್ ಆಸಿಯಾಗೆ ತುಂಬಾ ಇದೆ ಎಂದಿದ್ದಾರೆ ಸೋನಿಕಾ.
ಇದನ್ನೂ ಓದಿ: Bigg Boss Tamil: ಬಿಗ್ ಬಾಸ್ ತಮಿಳು ಶೋಗೆ ಹೊಸ ಹೋಸ್ಟ್ ರಮ್ಯಾ ಕೃಷ್ಣ! ವಿಜಯ್ ಸೇತುಪತಿ ಇನ್ಮುಂದೆ ಬರಲ್ವಾ?