ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bigg Boss Kannada Finale: ʻಬಿಗ್‌ ಬಾಸ್‌ ಕನ್ನಡ 12’ರ ʻಟಾಸ್ಕ್‌ ಮಾಸ್ಟರ್‌ʼ ಧನುಷ್‌ ಔಟ್‌!

Dhanush Gowda: ಬಿಗ್‌ ಬಾಸ್‌ ಸೀಸನ್‌ 12ರ ಪ್ರಬಲ ಸ್ಪರ್ಧಿ, ಟಾಸ್ಕ್‌ ಮಾಸ್ಟರ್ ಎನಿಸಿಕೊಂಡ ಧನುಷ್‌ ಔಟ್‌ ಆಗಿದ್ದಾರೆ. ಮೂರು ಬಾರಿ ಕ್ಯಾಪ್ಟನ್‌ ಆಗಿ ದಾಖಲೆ ಬರೆದು ʻಟಿಕೆಟ್‌ ಟು ಟಾಪ್‌ 6ʼ ಗೆದ್ದು ಮೊದಲ ಫೈನಲಿಸ್ಟ್‌ ಆಗಿದ್ದ ಧನುಷ್‌ ಈಗ ಔಟ್‌ ಆಗಿದ್ದು ಫ್ಯಾನ್ಸ್‌ಗೆ ಶಾಕ್‌ ಆಗಿದೆ. ವಿನ್ನರ್‌ ಆಗ್ತಾರೆ ಅಂತ ಫ್ಯಾನ್ಸ್‌ ಅಂದುಕೊಂಡಿದ್ದರು. ಸೀಸನ್‌ನಲ್ಲಿ ಸೈಲೆಂಟ್‌, ಆದರೆ ಸ್ಟ್ರಾಂಗ್‌ ಪ್ಲೇಯರ್‌ ಆಗಿ ಹೊರಹೊಮ್ಮಿದ ಧನುಷ್‌ ಎಲಿಮಿನೇಟ್‌ ಆಗಿರೋದು ಅಭಿಮಾನಿಗಳಿಗೆ ಬೇಸರ ತಂದಿದೆ.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ ಸೀಸನ್‌ 12ರ (Bigg Boss Kannada 12) ಪ್ರಬಲ ಸ್ಪರ್ಧಿ, ಟಾಸ್ಕ್‌ ಮಾಸ್ಟರ್ ಎನಿಸಿಕೊಂಡ ಧನುಷ್‌ ಔಟ್‌ (Dhanush Out) ಆಗಿದ್ದಾರೆ. ಮೂರು ಬಾರಿ ಕ್ಯಾಪ್ಟನ್‌ ಆಗಿ ದಾಖಲೆ ಬರೆದು ʻಟಿಕೆಟ್‌ ಟು ಟಾಪ್‌ 6ʼ ಗೆದ್ದು ಮೊದಲ ಫೈನಲಿಸ್ಟ್‌ ಆಗಿದ್ದ ಧನುಷ್‌ ಔಟ್‌ ಆಗಿದ್ದು ಫ್ಯಾನ್ಸ್‌ಗೆ ಶಾಕ್‌ ಆಗಿದೆ. ವಿನ್ನರ್‌ ಆಗ್ತಾರೆ ಅಂತ ಫ್ಯಾನ್ಸ್‌ ಅಂದುಕೊಂಡಿದ್ದರು. ಸೀಸನ್‌ನಲ್ಲಿ ಸೈಲೆಂಟ್‌, ಆದರೆ ಸ್ಟ್ರಾಂಗ್‌ ಪ್ಲೇಯರ್‌ ಆಗಿ ಹೊರಹೊಮ್ಮಿದ ಧನುಷ್‌ ಎಲಿಮಿನೇಟ್‌ (Eliminate) ಆಗಿರೋದು ಅಭಿಮಾನಿಗಳಿಗೆ ಬೇಸರ ತಂದಿದೆ. ಇದೀಗ ಟಾಪ್‌ 6 ಆಗಿ ಹೊರಹೊಮ್ಮಿದ್ದಾರೆ.

ಕ್ಯಾಪ್ಟನ್‌ ಆದ ಕೀರ್ತಿ

ಅಶ್ವಿನಿ ಗೌಡ, ಗಿಲ್ಲಿ ನಟ, ಕಾವ್ಯಾ, ರಘು, ಧನುಷ್, ರಕ್ಷಿತಾ ಶೆಟ್ಟಿ ಅವರು ಈಗ ಫಿನಾಲೆ ತಲುಪಿದ್ದರು. ಹಲವು ಬಾರಿ ಮನೆಯ ಕ್ಯಾಪ್ಟನ್‌ ಆದ ಕೀರ್ತಿ ಧನುಷ್‌ಗೆ ಸಲ್ಲುತ್ತದೆ. ಅಷ್ಟೇ ಅಲ್ಲ ಈ ಸೀಸನ್‌ ಕಟ್ಟ ಕಡೆಯ ಕ್ಯಾಪ್ಟನ್‌ ಕೂಡ ಧನುಷ್‌ ಆಗಿದ್ದರು. ಧನುಷ್ ಅವರು ಕ್ಯಾಪ್ಟನ್ ಆದರು. ಅವರು ಈ ಸೀಸನ್​ನ ಕೊನೇ ಕ್ಯಾಪ್ಟನ್ ಆದ್ದರಿಂದ ಅವರಿಗೆ ಕೆಲವು ವಿಶೇಷ ಅಧಿಕಾರಗಳು ಸಿಕ್ಕವು. ಟಾಪ್ 6 ಆಟದಲ್ಲಿ ನೇರವಾಗಿ ಸ್ಪರ್ಧಿಸುವ ಚಾನ್ಸ್ ಅವರಿಗೆ ಸಿಕ್ಕಿತ್ತು. ಅದನ್ನು ಅವರು ಚೆನ್ನಾಗಿ ಉಪಯೋಗಿಸಿಕೊಂಡರು. ಆರಂಭದಲ್ಲಿ ಧನುಷ್ ಅವರು ಹೆಚ್ಚು ಆ್ಯಕ್ಟೀವ್ ಆಗಿರಲಿಲ್ಲ.ಅವರಿಗೆ 1 ಕೋಟಿ 27 ಲಕ್ಷ ವೋಟ್ ಬಿದ್ದಿದೆ. ವಿನ್ನರ್ ವೋಟ್ 40 ಕೋಟಿ ಮೇಲಿದೆ. ಹೀಗಾಗಿ, ಅದಕ್ಕೆ ಹೋಲಿಸಿದರೆ ಇದು ಕಡಿಮೆಯೇ.

ಇದನ್ನೂ ಓದಿ: Bigg Boss Kannada 12: ಕಿಚ್ಚನ ಚಪ್ಪಾಳೆ ಬಗ್ಗೆ ತಲೆಕೆಡಿಸಿಕೊಳ್ಳೋಬೇಡಿ, ನಿಮ್ಮ ಜೀವನ ಮೇಲೆ ಗಮನ ಹರಿಸಿ ; ಕಿಚ್ಚ ಸುದೀಪ್‌

ಸೈಲೆಂಟ್‌ ಪ್ಲೇಯರ್‌

ಶುರುವಿನಿಂದಲೂ ಸೈಲೆಂಟ್‌ ಪ್ಲೇಯರ್‌ ಆಗಿ ಆಟ ಆಡಿದರು. ಮೊದಲ ವಾರದಲ್ಲಿಯೇ ಟಾಸ್ಕ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಧನುಷ್‌ ಗಮನ ಸೆಳೆದರು. ಸೀಸನ್‌ ಮುಂದುವರೆದಂತೆ, ಧನುಷ್‌ ಒಂದಲ್ಲ, ಎರಡಲ್ಲ, ಸತತ ಮೂರು ಬಾರಿ ಕ್ಯಾಪ್ಟನ್‌ ಆದರು.. ʻಬಿಗ್‌ ಬಾಸ್‌ ಕನ್ನಡ 12’ರಲ್ಲಿ ಟಾಸ್ಕ್‌ ಅಂತ ಬಂದರೆ, ಮೊದಲು ಧನುಷ್‌ ಅವರ ಹೆಸರು ಕೇಳಿ ಬರುತ್ತಿತ್ತು.



ಸ್ಟ್ರಾಂಗ್‌ ಕಂಟೆಸ್ಟೆಂಟ್‌

ಆದರೆ, ವೈಲ್ಡ್‌ ಕಾರ್ಡ್‌ ಮೂಲಕ ರಘು ಅವರ ಎಂಟ್ರಿಯ ನಂತರ, ರಘು ಅವರು ಕೂಡ ಸ್ಟ್ರಾಂಗ್‌ ಕಂಟೆಸ್ಟೆಂಟ್‌ ಆಗಿ ಭರವಸೆ ಮೂಡಿಸಿದ್ದರು. ಹೆಚ್ಚು ಮಾತನಾಡದೇ ಇರುವುದರಿಂದ ಟಾಸ್ಕ್‌ ಬಿಟ್ರೆ ಧನುಷ್‌ ಅವರು ಹೆಚ್ಚು ಕಾಣಿಸಿಕೊಂಡಿಲ್ಲ. ಇನ್ನೂ ಪದೇ ಪದೇ ಕಾವ್ಯಗೆ ಗಿಲ್ಲಿ ಬಗ್ಗೆ ಪಿನ್‌ ಇಡ್ತಿದ್ರು ಅನ್ನೋ ವಿಚಾರಕ್ಕೆ ವೀಕ್ಷಕರ ಅಸಮಾಧಾನಕ್ಕೆ ಧನುಷ್‌ ಗುರಿಯಾಗಿದ್ದುಂಟು. ʻಬಿಗ್‌ ಬಾಸ್‌ʼನಲ್ಲಿ ಮೇಜರ್‌ ಕಾನ್ಫ್ಲಿಕ್ಟ್‌ ಇಲ್ಲದೇ ಫಿನಾಲೆ ತಲುಪಿದ ಮೊದಲ ಸ್ಪರ್ಧಿ ಎಂದು ʻಬಿಗ್‌ ಬಾಸ್‌ʼ ಸ್ವತಃ ಹೇಳಿದ್ದಾರೆ.

ಇದನ್ನೂ ಓದಿ: Bigg Boss Kannada 12: ಈ ಸೀಸನ್‌ ವಿನ್ನರ್‌ಗೆ ಬಂದಿದೆ ಬರೋಬ್ಬರಿ 37 ಕೋಟಿಗೂ ಅಧಿಕ ವೋಟುಗಳು! ಯಾರದು?

ಎಲ್ಲಿಯೂ ಮಾತನಾಡದೇ, ತ್ಯಾಗ ಮಾಡಿರೋದನ್ನ ಕೂಡ ಹೇಳದೇ ಸೈಲೆಂಟ್‌ ಆಗಿ ಇದ್ದು, ವ್ಯಕ್ತಿತ್ವ ಗೆದ್ದಿರುವ ಧನುಷ್‌ ಅವರಿಗೆ ಕಿಚ್ಚನ ಚಪ್ಪಾಳೆ ಎಂದಿದ್ದರು ಕಿಚ್ಚ. ಈ ಕೈಯಲ್ಲಿ ಕೊಟ್ಟಿದ್ದು, ಮತ್ತೊಂದು ಕೈಗೆ ಗೊತ್ತಾಗದ ರೀತಿಯಲ್ಲಿ ನಡೆದುಕೊಂಡ್ರಿ. ಇದು ಇಷ್ಟವಾಯಿತು ಎಂದು ಕಿಚ್ಚ ಅವರು ಧನುಷ್‌ ಅವರನ್ನು ಹೊಗಳಿದ್ದರು ಕಿಚ್ಚ. ಆದರೀಗ ಧನುಷ್‌ ಬಿಗ್‌ ಬಾಸ್‌ ಜರ್ನಿ ಮುಗಿಸಿದ್ದಾರೆ.

Yashaswi Devadiga

View all posts by this author