ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ಪ್ರಶಾಂತ್ ನಡವಳಿಕೆಗೆ ಕಿಚ್ಚನ ಖಡಕ್ ಮಾತು!

Bigg Boss Kannada 13: ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಮನೆಯಲ್ಲಿ (Bigg Boss Kannada 13) ಪ್ರತಿ ವಾರ ನಡೆಯುವ ಉತ್ತಮ ಮತ್ತು ಕಳಪೆ ಪ್ರಕ್ರಿಯೆಗಳು ಸ್ಪರ್ಧಿಗಳ ನಡುವಿನ ಭಿನ್ನಾಭಿಪ್ರಾಯ ಹಾಗೂ ಅಸಮಾಧಾನಗಳನ್ನು ಹೊರಹಾಕುತ್ತಿವೆ. ಈ ವಾರದ ಕಳಪೆ (Kalape) ಪ್ರಕ್ರಿಯೆಯಲ್ಲಿ ನಟಿ ಸೌಂದರ್ಯ ಶೆಟ್ಟಿಗೆ ಮತ್ತೆ ಕಳಪೆ ಪಟ್ಟ ನೀಡಲಾಗಿದ್ದು, ಇದರಿಂದ ಅವರು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಇತ್ತ ವಾರಾಂತ್ಯದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಅವರು ಪ್ರಶಾಂತ್‌ಗೆ (Sudeep Prashanth) ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಬಿಗ್‌ ಬಾಸ್‌ ಕನ್ನಡ

‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಮನೆಯಲ್ಲಿ (Bigg Boss Kannada 13) ಪ್ರತಿ ವಾರ ನಡೆಯುವ ಉತ್ತಮ ಮತ್ತು ಕಳಪೆ ಪ್ರಕ್ರಿಯೆಗಳು ಸ್ಪರ್ಧಿಗಳ ನಡುವಿನ ಭಿನ್ನಾಭಿಪ್ರಾಯ ಹಾಗೂ ಅಸಮಾಧಾನಗಳನ್ನು ಹೊರಹಾಕುತ್ತಿವೆ. ಈ ವಾರದ ಕಳಪೆ (Kalape) ಪ್ರಕ್ರಿಯೆಯಲ್ಲಿ ನಟಿ ಸೌಂದರ್ಯ ಶೆಟ್ಟಿಗೆ ಮತ್ತೆ ಕಳಪೆ ಪಟ್ಟ ನೀಡಲಾಗಿದ್ದು, ಇದರಿಂದ ಅವರು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಇತ್ತ ವಾರಾಂತ್ಯದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಅವರು ಪ್ರಶಾಂತ್‌ಗೆ (Sudeep Prashanth) ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಸೌಂದರ್ಯ ಶೆಟ್ಟಿಗೆ ತಪ್ಪದ ಕಳಪೆ ಪಟ್ಟ!

ಬಿಗ್ ಬಾಸ್ ಮನೆಯಲ್ಲಿ ಈ ವಾರದ ಉತ್ತಮ ಮತ್ತು ಕಳಪೆ ಆಯ್ಕೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಸ್ಪರ್ಧಿಗಳು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಗಗನ್ ಚಿನ್ನಪ್ಪ, ಜಗ್ಗ ಮಮ್ಮಿ ಮತ್ತು ಕಿರಣ್ ಶಾಸ್ತ್ರಿ ಸೇರಿದಂತೆ ಹಲವು ಸ್ಪರ್ಧಿಗಳು ಸೌಂದರ್ಯ ಶೆಟ್ಟಿಗೆ ಕಳಪೆ ಪಟ್ಟ ನೀಡಲು ಕಾರಣಗಳನ್ನು ವಿವರಿಸಿದ್ದಾರೆ.

ಸೌಂದರ್ಯ ಅವರ ಕೆಲಸದ ವೈಖರಿ ಹಾಗೂ ಆಟದ ರೀತಿಯನ್ನು ಮುಂದಿಟ್ಟುಕೊಂಡು ಸ್ಪರ್ಧಿಗಳು ಅವರಿಗೆ ಕಳಪೆ ಪಟ್ಟ ನೀಡಿದ್ದಾರೆ. ವಿಶೇಷವೆಂದರೆ, ಕಳೆದ ವಾರವೂ ಸೌಂದರ್ಯ ಕಳಪೆ ಪಟ್ಟ ಪಡೆದಿದ್ದರು. ಸತತ ಎರಡನೇ ವಾರವೂ ಇದೇ ಪಟ್ಟ ಸಿಕ್ಕಿದ್ದರಿಂದ ಅವರು ತೀವ್ರ ಬೇಸರಗೊಂಡಿದ್ದಾರೆ. ಎಲ್ಲರ ಮುಂದೆ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ: Namit Malhotra: ರಾವಣನನ್ನು ವೈಭವೀಕರಿಸಿಲ್ಲ! ವಿವಾದಕ್ಕೆ ನಿರ್ಮಾಪಕ ನಮಿತ್ ಮಲ್ಹೋತ್ರಾ ಸ್ಪಷ್ಟನೆ

ಕಿರಣ್ ಮತ್ತು ಸೌಂದರ್ಯ ಮಾತ್ರ ಕಳಪೆಗೆ ಅರ್ಹರಾ?

ವಾರಾಂತ್ಯದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಅವರು ಈ ವಾರದ ಕಳಪೆ ಆಯ್ಕೆಯ ಬಗ್ಗೆ ಸ್ಪರ್ಧಿಗಳನ್ನು ಪ್ರಶ್ನಿಸಿದ್ದಾರೆ. ಕಿರಣ್ ಮತ್ತು ಸೌಂದರ್ಯ ಮಾತ್ರ ಕಳಪೆ ಪಟ್ಟಕ್ಕೆ ಅರ್ಹರಾ ಎಂದು ಮನೆಯ ಸದಸ್ಯರನ್ನು ಕೇಳಿದ್ದಾರೆ.



ಇದಕ್ಕೆ ಪ್ರತಿಕ್ರಿಯಿಸಿದ ಗಾನವಿ, ಈ ವಾರ ಕಿರಣ್ ಅವರಿಂದ ನಿರೀಕ್ಷಿತ ಮಟ್ಟದ ಪರ್ಫಾರ್ಮೆನ್ಸ್ ಬಂದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದೆಡೆ, ಸೌಂದರ್ಯ ಅವರು ಈ ವಾರ ತಮಗೆ ಕಳಪೆ ಪಟ್ಟ ಸಿಗಬಹುದು ಎಂದು ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.

ಸೌಂದರ್ಯಗೆ ಕಳಪೆ ಕೊಟ್ಟಿದ್ದು ತಪ್ಪು ಎಂದ ಪ್ರಶಾಂತ್!

ಇನ್ನು ಕಳಪೆ ಆಯ್ಕೆಯ ವಿಚಾರವಾಗಿ ಪ್ರಶಾಂತ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕಿರಣ್ ಶಾಸ್ತ್ರಿಗೆ ಕಳಪೆ ಪಟ್ಟ ನೀಡಿರುವುದು ಸರಿಯಾಗಿದೆ. ಆದರೆ ಸೌಂದರ್ಯಗೆ ಕಳಪೆ ನೀಡಿರುವುದು ತಪ್ಪು ಎಂದು ಹೇಳಿದ್ದಾರೆ.ಪ್ರಶಾಂತ್ ಅವರ ಈ ಮಾತಿಗೆ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದು, ಅವರ ನಡವಳಿಕೆಯ ಬಗ್ಗೆ ನೇರವಾಗಿ ಮಾತನಾಡಿದ್ದಾರೆ.

ಪ್ರಶಾಂತ್ ಅವರ ವ್ಯಕ್ತಿತ್ವದ ಬಗ್ಗೆ ಮಾತನಾಡಿದ ಕಿಚ್ಚ ಸುದೀಪ್, ಅವರ ನಗುವಿನ ಹಿಂದಿನ ವರ್ತನೆಯನ್ನು ಗಮನಿಸಿರುವುದಾಗಿ ಹೇಳಿದ್ದಾರೆ. “ಪ್ರಶಾಂತ್, ನಿಮ್ಮ ನಗು ನನಗೆ ಇಷ್ಟ. ಯಾರಾದರೂ ಜಗಳ ಮಾಡುತ್ತಿದ್ದರೆ ನೀವು ದೂರದಿಂದ ನಿಂತು ಸ್ಮೈಲ್ ಕೊಡುತ್ತೀರಿ. ಆಮೇಲೆ ನೀವೇ ಹೋಗಿ ಅವರನ್ನು ಸಮಾಧಾನ ಮಾಡುತ್ತೀರಿ” ಎಂದು ಖಡಕ್ ಆಗಿ ಹೇಳಿದ್ದಾರೆ.

ಇದನ್ನೂ ಓದಿ: Jungle Power: ಶೀಘ್ರದಲ್ಲೇ ʻಜಂಗಲ್ ಪವರ್ʼ ರಿಯಾಲಿಟಿ ಶೋ ಆರಂಭ

ಕಿಚ್ಚನ ಈ ಮಾತು ಪ್ರಶಾಂತ್‌ಗೆ ನೀಡಿದ ನೇರ ಎಚ್ಚರಿಕೆಯಂತಿತ್ತು. ಮನೆಯೊಳಗಿನ ಜಗಳ ಮತ್ತು ಅಸಮಾಧಾನಗಳ ಸಂದರ್ಭದಲ್ಲಿ ಪ್ರಶಾಂತ್ ನಡೆದುಕೊಳ್ಳುವ ರೀತಿಯ ಬಗ್ಗೆ ಸುದೀಪ್ ನೇರವಾಗಿ ಹೇಳಿದ್ದಾರೆ.

Yashaswi Devadiga

View all posts by this author