ಕಿಚ್ಚ ಸುದೀಪ್ ಸಾರಥ್ಯದ ಬಿಗ್ ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೆ ಇನ್ನೇನು 48 ಗಂಟೆಗಳಷ್ಟೇ ಬಾಕಿ ಇದೆ. ಈ ಯಾರು ಗೆಲ್ಲಬಹುದು? ಯಾರು ರನ್ನರ್ ಅಪ್ ಪಟ್ಟ ಪಡೆಯಬಹುದು ಎಂಬ ಲೆಕ್ಕಾಚಾರ ಶುರುವಾಗಿದೆ. ಅಂದಹಾಗೆ, ಈ ವಾರ ಮಿಡ್ ವೀಕ್ ಎಲಿಮಿನೇಷನ್ ನಡೆದಿದೆ. ಹಾಗಾಗಿ, ಬಿಗ್ ಬಾಸ್ ವೀಕ್ಷಕರು ಈ ವಾರ ಒಂದು ವೋಟಿಂಗ್ ಮುಗಿಸಿದ್ದಾರೆ. ಅದು ಮಿಡ್ ವೀಕ್ ಎಲಿಮಿನೇಷನ್ ಕುರಿತ ವೋಟಿಂಗ್. ಇದೀಗ ಎಲ್ಲರ ಕಣ್ಣು ಫಿನಾಲೆ ವೋಟಿಂಗ್ ಮೇಲೆ!
ಫಿನಾಲೆ ವೋಟಿಂಗ್ ಯಾವಾಗ?
ಧ್ರುವಂತ್ ಅವರು ಮಿಡ್ ವೀಕ್ ಅಲ್ಲಿ ಎಲಿಮಿನೇಟ್ ಆದಮೇಲೆ ಬಿಗ್ ಬಾಸ್ ಮನೆಯಲ್ಲಿ ಧನುಷ್, ಅಶ್ವಿನಿ ಗೌಡ, ಗಿಲ್ಲಿ ನಟ, ರಕ್ಷಿತಾ ಶೆಟ್ಟಿ, ರಘು ಮತ್ತು ಕಾವ್ಯ ಉಳಿದುಕೊಂಡಿದ್ದಾರೆ. ಇವರೆಲ್ಲರೂ ಫೈನಲಿಸ್ಟ್ ಆಗಿದ್ದು, ಇವರಲ್ಲಿ ಯಾರಿಗೆ ಜಾಸ್ತಿ ವೋಟ್ ಬರಲಿದೆಯೋ, ಅವರೇ ಈ ಸೀಸನ್‌ನ ವಿನ್ನರ್. ಈಗಾಗಲೇ ವೋಟಿಂಗ್ ಲೈನ್ಸ್ ಓಪನ್ ಆಗಿದ್ದು, ಬಿಗ್ ಬಾಸ್ ವೀಕ್ಷಕರು ತಮ್ಮ ನೆಚ್ಚಿನ ಸ್ಪರ್ಧಿಗೆ ವೋಟ್ ಮಾಡುತ್ತಿದ್ದಾರೆ.
Bigg Boss Kannada 12: ಬಿಗ್ ಬಾಸ್ ಶೋಗೆ ಬಿಗ್ ಸಂಕಷ್ಟ, ಪ್ರತಿಭಟನೆ, ಪೊಲೀಸ್ ಅನುಮತಿಯೂ ಇಲ್ಲ
ವೋಟಿಂಗ್ ಡೆಡ್ ಲೈನ್ ಯಾವಾಗ?
ಜಿಯೋ ಹಾಟ್‌ಸ್ಟಾರ್ ಆಪ್ ಮೂಲಕ ಒಬ್ಬ ಸ್ಪರ್ಧಿಗೆ ಒಬ್ಬ ಬಳಕೆದಾರರು 99 ವೋಟ್‌ಗಳನ್ನು ಹಾಕಬಹುದಾಗಿದೆ. ಸದ್ಯ ವೋಟಿಂಗ್ ಆರಂಭವಾಗಿದ್ದು, ಜನವರಿ 18ರ ಭಾನುವಾರ ಬೆಳಗ್ಗೆ 10 ಗಂಟೆವರೆಗೂ ವೋಟಿಂಗ್ ಮಾಡಲು ಅವಕಾಶ ಇರುತ್ತದೆ. ಹಾಗಾಗಿ, ಸೋಶಿಯಲ್ ಮೀಡಿಯಾದಲ್ಲಿ ನೆಚ್ಚಿನ ಸ್ಪರ್ಧಿಗಳಿಗೆ ವೋಟ್ ಹಾಕಿ ಎಂದು ಅವರ ಬೆಂಬಲಿಗರು ಪ್ರಚಾರ ಮಾಡುತ್ತಿದ್ದಾರೆ. ಈ ಬಾರಿ ಅಂತೂ ಈ ವೋಟಿಂಗ್ ಪ್ರಚಾರ ಭಾರಿ ತಾರಕಕ್ಕೇರಿದೆ.
Bigg Boss Kannada 12: ಬಿಗ್ ಬಾಸ್ ಫಿನಾಲೆ ಯಾವಾಗ? ಫಿನಾಲೆಗೆ ಎಂಟ್ರಿ ಕೊಡೋದು ಎಷ್ಟು ಸ್ಪರ್ಧಿಗಳು?
ಅಂದಹಾಗೆ, ಕಳೆದ ಸೀಸನ್‌ನಲ್ಲಿ ಹನುಮಂತ ಲಮಾಣಿ ಅವರು ವಿನ್ನರ್ ಆಗಿದ್ದರು. ಅವರು ದಾಖಲೆಯ 5.23 ಕೋಟಿ ಮತಗಳನ್ನು ಪಡೆದುಕೊಂಡಿದ್ದರು. ಇದು ಬಿಗ್ ಬಾಸ್ ಕನ್ನಡ ಇತಿಹಾಸದಲ್ಲೇ ಸ್ಪರ್ಧಿಯೊಬ್ಬರು ಪಡೆದ ಅತಿ ಹೆಚ್ಚು ಮತಗಳ ದಾಖಲೆಯಾಗಿದೆ. ರನ್ನರ್ ಅಪ್ ಆಗಿದ್ದ ತ್ರಿವಿಕ್ರಮ್ ಅವರು ಸುಮಾರು 2.53 ಕೋಟಿ ಮತಗಳನ್ನು ಪಡೆದಿದ್ದರು. ಸದ್ಯದ ಕ್ರೇಜ್ ನೋಡಿದರೆ, ಹನುಮಂತು ದಾಖಲೆಯನ್ನು ಗಿಲ್ಲಿ ನಟ ಬ್ರೇಕ್ ಮಾಡುವ ಸಾಧ್ಯತೆಗಳಿವೆ. ಕೊನೇ ಕ್ಷಣದಲ್ಲಿ ಗೆಲುವು ಯಾರಿಗೆ ಸಿಗಬಹುದು ಎಂಬ ಕುತೂಹಲವಂತೂ ಇದೆ.