ಈ ವಾರ ಬಿಗ್ ಬಾಸ್ (Bigg Boss Kannada 13) ಮನೆಯಲ್ಲಿ ಲೂಟಿಕೋರರು ಮತ್ತು ಕಾವಲುಗಾರರು ಎಂಬ ಥೀಮ್ನಲ್ಲಿ ಟಾಸ್ಕ್ ನೀಡಲಾಗಿದೆ. ಮ್ಯೂಸಿಯಂ ಒಳಗೆ ಕೆಲವು ಅಮೂಲ್ಯವಾದ ವಸ್ತುಗಳನ್ನು ಇಡಲಾಗಿದೆ. ನಾಮಿನೇಟ್ (Nominate) ಆಗಿರುವವರು ಲೂಟಿಕೋರರ ತಂಡದಲ್ಲಿದ್ದು, ವಸ್ತುಗಳನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಕಾವಲುಗಾರರಿಗೆ ನೀಡಲಾಗಿದೆ. ಈ ಆಟದಲ್ಲಿ ಗಗನ್ ಚಿನ್ನಪ್ಪ ಅವರು ಉಸ್ತುವಾರಿ ಆಗಿದ್ದಾರೆ. ರಕ್ಷಕರ ಜಗಳದಲ್ಲಿ ಲೂಟಿಗಾರರಿಗೆ ಲಾಭ ಆಗಿದೆ.
ತಾಂಡವ್ ರಾಮ್ ಅವರು ಲೂಟಿಕೋರರ ತಂಡದಲ್ಲಿ ಇದ್ದಾರೆ. ಅವರ ಜೊತೆ ಸೌಂದರ್ಯಾ ಶೆಟ್ಟಿ, ಆಸಿಯಾ, ಲಕ್ಷ್ಮಿ ಗೌಡ, ಕುಮಾರಿ ಹಾಗೂ ಸೋನಿಕಾ ಅವರು ಇದ್ದಾರೆ. ಈ ಆಟದಲ್ಲಿ ಗಾನವಿ, ಯಶಸ್, ಕಿರಣ್, ಪ್ರಶಾಂತ್, ಜಗದೀಶ್, ಧನುಷ್ ಅವರು ಕಾವಲುಗಾರರ ತಂಡದಲ್ಲಿ ಇದ್ದಾರೆ. ಕಿರಣ್ ಹಾಗೂ ಗಾನವಿ ಗಲಾಟೆ ಮಧ್ಯೆ ತಾಂಡವ್ ಕಿರೀಟಗಳನ್ನು ಎಕ್ಸ್ಚೇಂಜ್ ಮಾಡಿದ್ದಾರೆ. ಈ ಪ್ರೋಮೋ ಈಗ ಔಟ್ ಆಗಿದೆ.