ʻಬಿಗ್ ಬಾಸ್ ಕನ್ನಡ ಸೀಸನ್ 13ʼರಲ್ಲಿ (Bigg Boss Kannada 13) ಈ ವಾರ ʻರಾಜಕುಮಾರಿʼ ಪಟ್ಟಕ್ಕಾಗಿ ನಡೆಯುತ್ತಿರುವ ಪೈಪೋಟಿ ತಾರಕಕ್ಕೇರಿದೆ. ಸೌಂದರ್ಯ ಶೆಟ್ಟಿಯನ್ನ ಆಟದಿಂದ ಹೊರಗಿಡಲು ಗಾನವಿ ಮತ್ತು ಆಸಿಯಾ ತಂಡಗಳು ಮಾಡಿದ ಸೀಕ್ರೆಟ್ ಮಾಸ್ಟರ್ ಪ್ಲ್ಯಾನ್ ಈ ಬಾರಿಯ ಹೈಲೈಟ್ ಆಗಿದೆ.ಗಾನವಿ ಪರವಾಗಿ ಧನುಷ್ (Ganavi Dhanush) ಮಂಜುನಾಥ್ ಹಾಗೂ ಗಗನ್ ಚಿನ್ನಪ್ಪ. ಸೌಂದರ್ಯ ಶೆಟ್ಟಿ ಪರವಾಗಿ ಯಶಸ್ ಹಾಗೂ ತಾಂಡವ್ ರಾಮ್, ಆಸಿಯಾ ಪರವಾಗಿ ಕಿರಣ್ ಶಾಸ್ತ್ರಿ ಹಾಗೂ ಪ್ರಶಾಂತ್ ಆಡಿದ್ದರು. ‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಜಗ್ಗಿ ಹಾಗೂ ಮಂಜು ಮಧ್ಯೆ ಜಗಳ ನಡೆದಿದೆ.
ಗಾನವಿ ಹಾಗೂ ಜಗ್ಗಿ ಮಧ್ಯೆ ಕಿತ್ತಾಟ ಕಿತ್ತಾಟಕ್ಕೆ ಮಂಜು ಎಂಟ್ರಿ ಆಗಿದೆ. ಗಾನವಿ ಪರ ವಹಿಸಿಕೊಂಡು ಮಾತನಾಡಿದ ಮಂಜು, ಜಗದೀಶ್ ವಿರುದ್ಧ ಸಿಡಿದೆದ್ದಿದ್ದಾರೆ. ‘ಮಾಡಿರೋದು ಒಂದೇ ಒಂದು ಸಿನಿಮಾ. ಗಂಡಸರ ಹಾಗೆ ನಡೆದುಕೋ’ ಎಂದು ಜಗದೀಶ್ಗೆ ಮಂಜು ಅವಾಜ್ ಹಾಕಿದ್ದಾರೆ. ನಿನ್ನೆಯ ಗಾನವಿಯ ಚಾಣಾಕ್ಷ ತಂತ್ರ ಮತ್ತು ಕಿರಣ್-ಪ್ರಶಾಂತ್ ಅವರ ಪರಿಶ್ರಮದಿಂದ ಆಸಿಯಾ ತಂಡ ಈ ಟಾಸ್ಕ್‌ನಲ್ಲಿ ಜಯ ಸಾಧಿಸಿದೆ.
ಇದನ್ನೂ ಓದಿ: Mirnalini Ravi: ಮಲೇಷ್ಯಾದ ದ್ವೀಪದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಮೃಣಾಲಿನಿ ರವಿ