ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಬಿಗ್ ಬಾಸ್ʼ ಮನೆಗೆ ‘ಮಾಡರ್ನ್ ಮಹಾಕವಿ ಮಂಜ’ ಎಂಟ್ರಿ; ಅಗ್ನಿಪರೀಕ್ಷೆಯ ಜ್ಯೂರಿಗಳಿಂದ ಸಿಕ್ತು ಬಂಪರ್‌ ಆಫರ್!‌

ಬಿಗ್‌ ಬಾಸ್‌ ಕನ್ನಡ ಸೀಸನ್ 13ಕ್ಕೆ 16ನೇ ಸ್ಪರ್ಧಿಯಾಗಿ ಮಾಡರ್ನ್ ಮಹಾಕವಿ ಮಂಜ ಪ್ರವೇಶಿಸಿದ್ದಾರೆ. ಅಗ್ನಿಪರೀಕ್ಷೆಯ ತೀರ್ಪುಗಾರರಾಗಿದ್ದ ನಟಿ ಶ್ರುತಿ ನೇತೃತ್ವದ ತಂಡ ಇವರಿಗೆ ಈ ಮಹತ್ವದ ಅವಕಾಶ ನೀಡಿದೆ. ಮಾತೆತ್ತಿದರೆ ಪ್ರಾಸಬದ್ಧವಾಗಿ ಮಾತನಾಡುವ, ಅರ್ಧ ತಲೆ ಬೋಳಿಸಿಕೊಂಡು ಗಮನ ಸೆಳೆದ ಈ ಪ್ರತಿಭೆ, ಜನಸಾಮಾನ್ಯರ ಕೋಟಾದಡಿ ನಾಲ್ಕನೇ ಸ್ಪರ್ಧಿಯಾಗಿ ಮನೆಗೆ ಕಾಲಿಟ್ಟಿದ್ದಾರೆ.

ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ’ ಸೀಸನ್ 13ಕ್ಕೆ ಮತ್ತೊಬ್ಬ ವಿಶಿಷ್ಟ ಸ್ಪರ್ಧಿಯ ಪ್ರವೇಶವಾಗಿದೆ. ಈಗಾಗಲೇ 12 ಮಂದಿ ಸೆಲೆಬ್ರಿಟಿಗಳು ಹಾಗೂ 'ಅಗ್ನಿಪರೀಕ್ಷೆ' ಮೂಲಕ ಆಯ್ಕೆಯಾಗಿದ್ದ ಮೂವರು ಸಾಮಾನ್ಯ ಸ್ಪರ್ಧಿಗಳು ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು. ಇದೀಗ 16ನೇ ಸ್ಪರ್ಧಿಯಾಗಿ, ಮಾತೆತ್ತಿದರೆ ಪ್ರಾಸದಲ್ಲೇ ಮಾತನಾಡುವ ‘ಮಾಡರ್ನ್ ಮಹಾಕವಿ ಮಂಜ’ ಅವರನ್ನು ಜ್ಯೂರಿಗಳು ಅಂತಿಮವಾಗಿ ಬಿಗ್ ಬಾಸ್ ಮನೆಗೆ ಆಯ್ಕೆ ಮಾಡಿದ್ದಾರೆ.

ಮಾಡರ್ನ್ ಮಹಾಕವಿ ಮಂಜಗೆ ಚಾನ್ಸ್!

ಜನಸಾಮಾನ್ಯರಿಗಾಗಿ ನಡೆಸಲಾದ ಅಗ್ನಿಪರೀಕ್ಷೆಯಲ್ಲಿ ಅಂತಿಮ ಟಾಪ್ 10 ಸ್ಪರ್ಧಿಗಳ ಪೈಕಿ ವೀಕ್ಷಕರ ಮತಗಳ ಆಧಾರದ ಮೇಲೆ ಧನುಷ್, ಕಿರಣ್ ಮತ್ತು ಲಿಖಿತ್ ಈಗಾಗಲೇ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದರು. ಉಳಿದ ಏಳು ಮಂದಿ ಸ್ಪರ್ಧಿಗಳಲ್ಲಿ ಒಬ್ಬರನ್ನು ಆಯ್ಕೆ ಮಾಡುವ ವಿಶೇಷ ಅಧಿಕಾರವನ್ನು ಶೋನ ಜಡ್ಜ್‌ಗಳಿಗೆ ನೀಡಲಾಗಿತ್ತು. ಈ ಜವಾಬ್ದಾರಿಯನ್ನು ಹೊತ್ತಿದ್ದ ನಟಿ ಶ್ರುತಿ ನೇತೃತ್ವದ ಜ್ಯೂರಿ ತಂಡವು, ಎಲ್ಲರ ಗಮನ ಸೆಳೆದಿದ್ದ ಮಾಡರ್ನ್ ಮಹಾಕವಿ ಮಂಜ ಅವರನ್ನು ಅಧಿಕೃತವಾಗಿ ಬಿಗ್ ಬಾಸ್ ಮನೆಗೆ ಕಳುಹಿಸಿಕೊಟ್ಟಿದೆ. ವಿಶೇಷವೆಂದರೆ, ಅಗ್ನಿಪರೀಕ್ಷೆಯ ಮೂಲಕ ಈ ಬಾರಿ ಆಯ್ಕೆಯಾದ ನಾಲ್ಕೂ ಸ್ಪರ್ಧಿಗಳೂ ಪುರುಷರೇ ಆಗಿದ್ದಾರೆ.

ವಿಶಿಷ್ಟ ಶೈಲಿಯಲ್ಲಿ ಪರಿಚಯ ಮಾಡಿಕೊಂಡಿದ್ದ ಮಂಜ

ಅಗ್ನಿಪರೀಕ್ಷೆ ವೇದಿಕೆಗೆ ಕಾಲಿಡುತ್ತಲೇ "ಉಘೇ ಮಾದಪ್ಪ..." ಎಂದು ಜೈಕಾರ ಹಾಕಿ ತಮ್ಮ ವಿಶಿಷ್ಟ ಶೈಲಿಯಲ್ಲಿ ಪರಿಚಯ ಮಾಡಿಕೊಂಡಿದ್ದ ಮಂಜ, ಆರಂಭದಲ್ಲೇ ಜಡ್ಜ್‌ಗಳಿಗೆ ದಿಗಿಲು ಬಡಿಸಿದ್ದರು. ರ್ಯಾಪರ್ ಚಂದನ್ ಶೆಟ್ಟಿ ಅವರ ಮುಂದೆಯೇ ವಿವಿಧ ನಟರ ಧ್ವನಿಯಲ್ಲಿ ಮಿಮಿಕ್ರಿ ಮಾಡುತ್ತಾ, ಅದ್ಭುತ ರ್ಯಾಪ್ ಹಾಗೂ ಪ್ರಾಸಬದ್ಧ ಪಂಚ್‌ಗಳ ಮೂಲಕ ರಂಜಿಸಿದ್ದರು.

BBK 13: ಅಗ್ನಿಪರೀಕ್ಷೆಯಲ್ಲಿ ಗೆದ್ದು ʻಬಿಗ್‌ ಬಾಸ್‌ʼ ವಿಮಾನ ಏರಿದ ಕಿರಣ್‌ ಶಾಸ್ತ್ರಿ; ʻಕಾಮನ್‌ ಮ್ಯಾನ್‌ʼ ಕ್ಯಾಂಪ್‌ನಿಂದ ದೊಡ್ಮನೆಗೆ ಬಂದ ಮೊದಲ ಸ್ಪರ್ಧಿ!

"ನನ್ನ ಹೆಸರು ಮಾಡರ್ನ್ ಮಹಾಕವಿ ಮಂಜ ಅಂತ... ತರಹೇವಾರಿ ಜನಗಳ ನಡುವೆ ನಾನೊಂತರ ನೆಕ್ಸ್ಟ್ ಲೆವೆಲ್ ಬರಹಗಾರ! ಅಚ್ಚ ಕನ್ನಡದ ಸ್ವಚ್ಛ ಮನಸ್ಸಿನ ಪದ ಬಳಕೆಗಾರ ನಾನು. ನನ್ನ ಮಾತಲ್ಲಿ ರೈಮಿಂಗ್, ಟೈಮಿಂಗ್, ಮೀನಿಂಗ್ ಎಲ್ಲವೂ ಇರುತ್ತೆ, ಯಾಕಂದ್ರೆ ನನ್ನ ಥಿಂಕಿಂಗ್ ಹಂಗಿರುತ್ತೆ..." ಎಂದು ಹೇಳಿ ಮಂಜ ಹೇಳಿದ್ದರು.

ಸ್ಪರ್ಧಿಗಳಿಗೆ ಪೈಪೋಟಿ ನೀಡ್ತಾರಾ?

ಮಾತೇ ಬಂಡವಾಳವಾಗಿರುವ ಮಂಜ, ಬಿಗ್ ಬಾಸ್ ಶೋಗಾಗಿ ತಮ್ಮ ಅರ್ಧ ತಲೆಯನ್ನೇ ಬೋಳಿಸಿಕೊಂಡಿದ್ದರು. "ಬರ್ಗೆಟ್ಟ ಬಾಳಲ್ಲಿ ಬೇಜಾನ್ ಬೆಂದೋಗಿದ್ದೀನಿ, ಕನಸು ನನಸಾಗದೆ ಕಣ್ಣೀರಲ್ಲೇ ನೆಂದೋಗಿದ್ದೀನಿ...', 'ಎಲ್ಲರಿಗೂ ಆಸೆ ಉಂಟು, ಆದರೆ ಪೇರೆಂಟ್ಸ್ ಪ್ರೀತಿ ಮಾತ್ರ ಪರ್ಮನೆಂಟ್' ಎಂಬಂತಹ ಪ್ರಾಸಬದ್ಧ ಸಾಲುಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿದ್ದರು. ಈತ ಬಿಗ್ ಬಾಸ್ ಮನೆಗೆ ಹೋದರೆ ಭರ್ಜರಿ ಎಂಟರ್‌ಟೈನ್‌ಮೆಂಟ್ ಗ್ಯಾರಂಟಿ ಎಂದಿದ್ದ ವೀಕ್ಷಕರ ನಿರೀಕ್ಷೆ ಈಗ ನಿಜವಾಗಿದ್ದು, ಟಾಸ್ಕ್‌ಗಳಲ್ಲೂ ಸಖತ್ ಪೈಪೋಟಿ ನೀಡುವ ಇವರ ಪ್ರವೇಶ ಬಿಗ್ ಬಾಸ್ ಮನೆಯಲ್ಲಿ ಮತ್ತಷ್ಟು ರಂಗು ತುಂಬಲಿದೆ ಎಂಬ ಮಾತುಗಳು ಕೇಳಿಬಂದಿದೆ.