ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

‌ʻಫಸ್ಟ್ ನೈಟ್ ವಿತ್ ದೆವ್ವʼ ಚಿತ್ರದ ರಿಲೀಸ್‌ ಡೇಟ್‌ ಘೋಷಣೆ ಮಾಡಿದ ‌ʻಬಿಗ್‌ ಬಾಸ್‌ʼ ಪ್ರಥಮ್‌

First Night With Devva: ಬಿಗ್ ಬಾಸ್ ವಿಜೇತ ಪ್ರಥಮ್ ನಾಯಕನಾಗಿ ನಟಿಸಿರುವ 'ಫಸ್ಟ್ ನೈಟ್ ವಿತ್ ದೆವ್ವ' ಸಿನಿಮಾ ಏಪ್ರಿಲ್ 3ರಂದು ತೆರೆಕಾಣಲಿದೆ. ಮದುವೆಯಾದ ಕೂಡಲೇ ಪತ್ನಿ ದೆವ್ವ ಎಂದು ತಿಳಿದ ನಾಯಕನ ಫಸ್ಟ್ ನೈಟ್ ನಡೆಯುತ್ತದೆಯೇ ಇಲ್ಲವೇ ಎಂಬ ಕಥಾಹಂದರವನ್ನು ಈ ಚಿತ್ರ ಹೊಂದಿದೆಯಂತೆ.

ʻಬಿಗ್‌ ಬಾಸ್ʼ ಕನ್ನಡ ಶೋನ ವಿನ್ನರ್‌ ಪ್ರಥಮ್ ಹೀರೋ ಆಗಿ ನಟಿಸಿರುವ ʻಫಸ್ಟ್ ನೈಟ್ ವಿತ್ ದೆವ್ವʼ ಸಿನಿಮಾವು ಯಾವಾಗ ಬಿಡುಗಡೆ ಆಗಲಿದೆ ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ. ಈ ಚಿತ್ರವನ್ನು ಏಪ್ರಿಲ್ 3 ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲಾಗುತ್ತಿದೆ ಎಂದು ಪ್ರಥಮ್‌ ತಿಳಿಸಿದ್ದಾರೆ. ಸದ್ಯ ಈ ಚಿತ್ರದ ಟ್ರೇಲರ್‌ ಅನ್ನು ರಿಲೀಸ್‌ ಮಾಡಲಾಗಿದ್ದು, ಹಿರಿಯ ನಟ ಶ್ರೀನಿವಾಸಮೂರ್ತಿ ಅವರು ಟ್ರೇಲರ್‌ ರಿಲೀಸ್‌ ಮಾಡಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಮನರಂಜನೆಯೇ ಪ್ರಧಾನ

ಒಳ್ಳೆ ಹುಡುಗ ಪ್ರಥಮ್‌ ಅವರು ಕಥೆ, ಚಿತ್ರಕಥೆ ಬರೆದಿರುವ ಈ ಸಿನಿಮಾಗೆ ಪಿ. ವಿ. ಆರ್. ಸ್ವಾಮಿ ಗೂಗಾರೆದೊಡ್ಡಿ ಅವರು ನಿರ್ದೇಶನ ಮಾಡಿದ್ದಾರೆ. "ನಮ್ಮ ʻಫಸ್ಟ್ ನೈಟ್ ವಿತ್ ದೆವ್ವʼ ಚಿತ್ರದ ಡಬ್ಬಿಂಗ್, ಸ್ಯಾಟಲೈಟ್ ರೈಟ್ಸ್ ಉತ್ತಮ ಮೊತ್ತಕ್ಕೆ ಮಾರಾಟವಾಗಿದೆ, ಮನರಂಜನೆಯನ್ನೇ ಪ್ರಧಾನವಾಗಿಟ್ಟುಕೊಂಡು ಮಾಡಿರುವ ಹಾರರ್ ಕಾಮಿಡಿ ಚಿತ್ರ ಇದು" ಎಂದು ʻಬಿಗ್‌ ಬಾಸ್‌ʼ ಪ್ರಥಮ್‌ ತಿಳಿಸಿದ್ದಾರೆ.

Actor Pratham: ನಟ ಪ್ರಥಮ್‌ಗೆ ಬೆದರಿಕೆ ಹಾಕಿದ್ದ ರೌಡಿಶೀಟರ್ ಬೇಕರಿ ರಘು, ಯಶಸ್ವಿನಿ ಅರೆಸ್ಟ್

ಫಸ್ಟ್ ನೈಟ್ ಆಗುತ್ತಾ ಇಲ್ವಾ ಅನ್ನೋದೇ ಕಥೆ

"ಈ ಚಿತ್ರದಲ್ಲಿ ನಾಯಕನಿಗೆ ಮದುವೆ ಆಗುತ್ತದೆ. ಆದರೆ ಆತನಿಗೆ ತನ್ನ ಹೆಂಡತಿ ದೆವ್ವ ಎಂಬುದು ಮದುವೆಯಾದ ಕೂಡಲೇ ಗೊತ್ತಾಗುತ್ತದೆ. ನಂತರ ಅವನ ಫಸ್ಟ್ ನೈಟ್ ಆಗುತ್ತಾ ಇಲ್ವಾ ಎನ್ನುವುದೇ ನಮ್ಮ ಚಿತ್ರದ ಕಥಾಹಂದರ. ನಾನೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದೇನೆ. ತುಂಬಾ ಸೊಗಸಾಗಿ ನಮ್ಮ ಸಿನಿಮಾ ಮೂಡಿಬಂದಿದೆ. ಚಿತ್ರಮಂದಿರದಲ್ಲಿ ಆಡಿಯೆನ್ಸ್‌ಗೆ ಈ ಚಿತ್ರವನ್ನು ತೋರಿಸಲು ನಾವೆಲ್ಲಾ ಕಾತರದಿಂದ ಕಾಯುತ್ತಿದ್ದೇವೆ" ಎನ್ನುತ್ತಾರೆ ಪ್ರಥಮ್.

Actor Darshan: ನಟ ಪ್ರಥಮ್‌ಗೆ ಕೊಲೆ ಬೆದರಿಕೆ, ದರ್ಶನ್‌ ಅಭಿಮಾನಿಗಳ ವಿರುದ್ಧ ದೂರು

"ಪ್ರಥಮ್ ಅವರು ಒಳ್ಳೆಯ ಮಾತುಗಾರ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಈ ಚಿತ್ರದಲ್ಲಿ ಅವರ ಪಾತ್ರಕ್ಕೆ ಮಾತು ತುಂಬಾ ಕಡಿಮೆ ಇಟ್ಟಿದ್ದೇವೆ. ಎಲ್ಲರ ಸಹಕಾರದಿಂದ ಒಂದೊಳ್ಳೆ ಚಿತ್ರ ನಿರ್ಮಾಣವಾಗಿದೆ. ನಾನು ಛಾಯಾಗ್ರಾಹಕನಾಗಿ ಬಹಳ ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿದ್ದೇನೆ. ಈ ಚಿತ್ರಕ್ಕೂ ನಾನೇ ಛಾಯಾಗ್ರಹಣ ಮಾಡಿದ್ದೇನೆ. ಜೊತೆಗೆ ನಿರ್ದೇಶನವನ್ನೂ ಮಾಡಿದ್ದೇನೆ. ಇದು ನಾನು ಛಾಯಾಗ್ರಾಹಕನಾಗಿ ಕಾರ್ಯ ನಿರ್ವಹಿಸಿರುವ 53ನೇ ಸಿನಿಮಾ ಮತ್ತು ನಿರ್ದೇಶನದ ಐದನೇ ಸಿನಿಮಾ" ಎನ್ನುತ್ತಾರೆ ನಿರ್ದೇಶಕ ಪಿ. ವಿ. ಆರ್. ಸ್ವಾಮಿ ಎನ್ನುತ್ತಾರೆ.

ನಾಯಕಿಯಾಗಿ ನಿಖಿತಾ ಸ್ವಾಮಿ ನಟನೆ

ʻಫಸ್ಟ್ ನೈಟ್ ವಿತ್ ದೆವ್ವʼ ಚಿತ್ರದಲ್ಲಿ ಜೀವಿತಾ, ಶ್ರೀನಿವಾಸಮೂರ್ತಿ, ರಮೇಶ್ ಭಟ್, ಮಿಮಿಕ್ರಿ ಗೋಪಿ, ತುಕಾಲಿ ಸಂತು, ಸುಶ್ಮಿತಾ ಮುಂತಾದವರು ನಟಿಸಿದ್ದಾರೆ. ಒಟ್ಟು 30 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ. ವಿಲನ್ ಪಾತ್ರದಲ್ಲಿ ಹರೀಶ್‌ ರಾಜ್ ನಟಿಸಿದ್ದಾರೆ ಮತ್ತು ನಟಿ ಸುಶ್ಮಿತಾ ಇಲ್ಲಿ ದೆವ್ವದ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಪ್ರಥಮ್‌ಗೆ ಜೋಡಿಯಾಗಿ ನಟಿ ನಿಖಿತಾ ಸ್ವಾಮಿ ಕಾಣಿಸಿಕೊಂಡಿದ್ದಾರೆ. "ಇದೊಂದು ಕಾಮಿಡಿ ಹಾರರ್ ಸಿನಿಮಾ. ನಾನಿಲ್ಲಿ ಪ್ರಥಮ್ ಅವರ ಪತ್ನಿಯಾಗಿ ನಾನು ಕಾಣಿಸಿಕೊಂಡಿದ್ದೇನೆ. ನನ್ನದು ಮುಗ್ಧ ಹುಡುಗಿಯ ಪಾತ್ರ. ಆದರೆ ಆ ಪಾತ್ರ ಹೇಗೆ ಬದಲಾವಣೆ ಆಗುತ್ತಾ ಹೋಗುತ್ತದೆ ಎನ್ನುವುದೇ ವಿಶೇಷ, ಎರಡು ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ" ಎನ್ನುತ್ತಾರೆ ನಿಖಿತಾ ಸ್ವಾಮಿ.

ಈ ಸಿನಿಮಾದ ಹಾಡುಗಳಿಗೆ ಅದ್ವಿಕ್ ವರ್ಮ ಅವರ ಸಂಗೀತ ನೀಡಿದ್ದಾರೆ. ಎರಡು ಸಾಹಸ ಸನ್ನಿವೇಶಗಳಿದ್ದು, ಥ್ರಿಲ್ಲರ್ ಮಂಜು ಸಾಹಸ ಸಂಯೋಜನೆ ಮಾಡಿದ್ದಾರೆ. ಸೆನ್ಸಾರ್ ಮಂಡಳಿಯು ಚಿತ್ರಕ್ಕೆ ಯು/ಎ ಪ್ರಮಾಣಪತ್ರ ನೀಡಿದೆ.