`ಬಿಗ್ ಬಾಸ್ ಕನ್ನಡ ಸೀಸನ್ 12’ರ (Bigg Boss Kannada 12) ಸ್ಪರ್ಧಿ ಹಾಗೂ ʻಮನದ ಕಡಲುʼ (Manada Kadalu) ಸಿನಿಮಾ ನಟಿ ರಾಶಿಕಾ ಶೆಟ್ಟಿ (Rashika Shetty) ತಮ್ಮ ಜೀವನದ ಫಸ್ಟ್ ಲವ್ ಬಗ್ಗೆ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಬಾಲ್ಯದಲ್ಲಿಯೇ ರಮ್ಯಾ ಮತ್ತು ರಕ್ಷಿತಾ ಅಭಿನಯದ ''ತನನಂ ತನನಂ'' ಚಿತ್ರದ ''ಕಂಡೆ ಕಂಡೆ ಗೋವಿಂದನಾ'' ಹಾಡಿನಲ್ಲಿಕಾಣಿಸಿಕೊಂಡಿದ್ದ ರಾಶಿಕಾ ಆ ನಂತರ ''ದೊರೆಸಾನಿ'' ಮೂಲಕ ಕಿರುತೆರೆಗೆ ಬಂದರು. ರಾಶಿಕಾ ಕರುನಾಡಿನೆಲ್ಲೆಡೆ ಮನೆ ಮಾತಾಗಿದ್ದು "ಬಿಗ್ ಬಾಸ್" ಮೂಲಕ. ಇದೀಗ ಲವ್ ಸ್ಟೋರಿ (Love Story) ಬಗ್ಗೆ ಮಾತನಾಡಿ ಅತ್ತಿದ್ದಾರೆ ನಟಿ.
ಇದನ್ನೂ ಓದಿ: Varun Dhawan: ವರುಣ್ ಧವನ್ ಮಗಳಿಗೆ ಗಂಭೀರ ಕಾಯಿಲೆ! ನಟ ಹೇಳಿದ್ದೇನು?
23 ವರ್ಷಕ್ಕೆ ಪ್ರೀತಿ!
ರಾಶಿಕಾ ಮಾತನಾಡಿ, ʻ23 ವರ್ಷಕ್ಕೆ ಅನ್ಸತ್ತೆ ಲವ್ ಆಗಿದ್ದು. ಏಲ್ಲರಿಗೂ ಪ್ರೀತಿ ಆಗೇ ಆಗುತ್ತೆ. ಬ್ರೇಕಪ್ ಆಗೇ ಇಲ್ಲ ಅನ್ನೋದು ಸುಳ್ಳು ಆಗುತ್ತೆ. ಶೋ ಮೂಲಕ ನನಗೆ ಪರಿಚಯ ಆಯ್ತು. ನಾನು ಪ್ರೀತಿನ ನೋಡೋ ದೃಷ್ಟಿ ಬೇರೆ. ನನಗೆ ಪ್ರೀತಿ ಅಂದರೆ ಎಲ್ಲವೂ. ಪ್ರೀತಿಯಲ್ಲಿ ಬೀಳೋಕೆ ಹುಡುಗ ಹೀಗೆ ಇರಬೇಕು ಅಂತ ಏನಿರಲಿಲ್ಲ. ಇಷ್ಟು ಚಂದ, ದುಡ್ಡು ಇರಬೇಕು ಅಂತೆಲ್ಲ ಇರ್ತಾರೆ. ಅದೆಲ್ಲ ಅಲ್ಲ. ಪ್ರೀತಿ ನನಗೆ ಒಂಥರ ದೇವರು. ಚಿಕ್ಕ ವಯಸ್ಸಿನಿಂದ ಪ್ರೀತಿ ನೋಡಿಕೊಂಡು ಬೆಳೆದವಳು. ನನಗೆ ನನ್ನ ಲೈಫ್ ಬರೋ ಹುಡುಗ ಗೌರವ ಜಾಸ್ತಿ ಆಗಬೇಕು. ನಾನು ದುಡಿತೀನಿ, ನೀನು ದುಡಿ, ನಾನು ನೀನು, ಚಿಕ್ಕ ಫ್ಯಾಮಿಲಿ ಸಾಕು ಅನ್ನೋ ಹುಡುಗಿ. ತುಂಬಾ ಬೇಡಿಕೆ ಇಲ್ಲ. ನೆಮ್ಮದಿ ಇರಬೇಕು ಅಷ್ಟೇ. ಅಪ್ಪ ಅಮ್ಮ ಪಕ್ಕ ಕೂತಾಗ ಹೇಗೆ ಫೀಲ್ ಆಗತ್ತೆ,ಹಾಗೇ ಹುಡುಗ ಪಕ್ಕ ಕೂತಾಗ ಅದೇ ಫೀಲ್ ಆಗಬೇಕುʼ ಎಂದಿದ್ದಾರೆ.
ಅವನ ಹೇಟ್ ಮಾಡೋಕೆ ಸಾಧ್ಯ ಇಲ್ಲ
ʻನನ್ನ ಲೈಫ್‌ನಲ್ಲಿ ಒಂದು ಸಮಸ್ಯೆ ಅಂದರೆ ಒಬ್ಬರನ್ನ ಹಚ್ಚಿಕೊಂಡರೆ, ತುಂಬಾ ಇಷ್ಟ ಪಡ್ತೀನಿ. ನಾನು ಎಲ್ಲ ಲೈಫ್‌ನ ಅಪ್‌ಡೇಟ್ ಕೋಡ್ತೀನಿ. ನಾನು ಅಪ್ಪ ಅಮ್ಮ ಹೇಗೆ ನೋಡ್ತೀನಿ, ಹಾಗೇ ನಾನು ಅವನಲ್ಲಿ ನೋಡ್ತೀನಿ. ತುಂಬಾ ಚೆನ್ನಾಗಿ ಇರ್ತಿತ್ತು. ಅವನ ಹೇಟ್ ಮಾಡೋಕೆ ಸಾಧ್ಯ ಇಲ್ಲ. ನಮ್ಮ ಜೊತೆ ಇಲ್ಲ. ಕಳೆದ ಕ್ಷಣಗಳು ಅದೆಲ್ಲ ಮರೆಯೋಕೆ ಸಾಧ್ಯ ಇಲ್ಲ. ಪ್ರೀತಿ ಅಷ್ಟು ಕೊಟ್ಟಿರ್ತೀವಿ. ಬ್ರೇಕಪ್ ಆದ ಬಳಿಕ ನಾನು ಪಾಠ ಕಲಿತೆ ಈ ವಾಗ ಆ ಪ್ರೀತಿ ಇರಬೇಕಿತ್ತಾ? ಅಂದರೆ ಖಂಡಿತ ಬೇಡ. ಬೇಡ ಅಂದರೂ ನಾನೇ ಮೆಸೇಜ್ ಮಾಡುತ್ತಿದ್ದೆ.ಆದರೆ ಒಂದು ಪಾಯಿಂಟ್ ಅಲ್ಲಿ self respect ಇಲ್ವಾ ಅನ್ನಿಸುತ್ತೆʼ . ಎಂದರು.
ʻನನಗೆ ಅಷ್ಟೇ ಹರ್ಟ್ ಆಗಿದ್ದರೂ ನಾನು ಬಿಟ್ಟುಕೊಡಲ್ಲ. ಈಗ ಜಗಳ ಬರೋದು ಸಹಜ. ಆದರೆ ನಾನು ಆ ಜಗಳ ನೋಡಲ್ಲ.ನಾವು ಇದ್ದಿದ್ದು ಕ್ಷಣ ನೆನೆಸಿಕೊಳ್ತೀವಿ. ಬೇಜಾರ್ ಆದಾಗ ಅವನು ಜೊತೆಗಿದ್ದ ಅಂದಿಕೊಳ್ತೀವಿ. ಒಂದು ವೇಳೆ ಕಟ್ ಮಾಡಿದ್ದರೂ ಬೇರೆ ನಂಬರ್ ಹುಡುಕಿ ಮೆಸೇಜ್ ಮಾಡ್ತೀನಿ. ನನಗೆ ಬೇಡ್ವೇ ಬೇಡ ಲೈಫ್‌ನಲ್ಲಿ ಅಂದಾಗ, ಆರಾಮ್ ಇರು ಅಂತ ಸುಮ್ಮನೇ ಆದೆ. ಅದಕ್ಕೆ ಪ್ರೀತಿ ಮಾಡುವಾಗ ತುಂಬಾ ಯೋಚನೆ ಮಾಡಿ ಪ್ರೀತಿ ಮಾಡಬೇಕು. ನಾನು ತುಂಬಾ ಹೇಟ್ ಕೂಡ ಮಾಡಲ್ಲ. ಇವತ್ತಿಗೂ ಆ ಒಂದು ನಂಬಿಕೆ ಹೋಗಿದೆ. ಪ್ರೀತಿಲಿ ಇದ್ದರೂ ಮಾಡಿಲ್ಲ ಅಂತ ಓಡಾಡಿಕೊಂಡು ಇರ್ತಾರಾ? ಅನ್ನೋ ಥರ ಫಿಲ್ ಆಗತ್ತೆʼ ಎಂದಿದ್ದಾರೆ.
ಅವಳಿಗೆ ಕೋಪ ಜಾಸ್ತಿ ಅನ್ನೋದೇ ಒಂದು ಕಾರಣ
ʻಇನ್ನು ಯಾರೇ ಆಗಲಿ ಇವರನ್ನ ಹ್ಯಾಂಡಲ್ ಮಾಡೋಕೆ ಆಗಲ್ಲ ಅಂತ ಬಿಟ್ಟುಕೊಡಬಾರದು. ನಮ್ಮನ್ನು ಅರ್ಥ ಮಾಡಿಕೊಳ್ಳೋರು ಬೇಕು. ಎಲ್ಲರೂ ಒಳ್ಳೆಯವರೇ. ಆದರೆ ಸಂದರ್ಭ ಹಾಗೇ ಮಾಡತ್ತೆ. ಪ್ರೀತಿ ಹ್ಯಾಂಡಲ್ ಮಾಡಕ್ಕಾಗಿಲ್ಲ ಅಂದರೆ ಅದು ಬೇಡವೇ ಬೇಡ.
ಇದನ್ನೂ ಓದಿ: Ustaad Bhagat Singh OTT : ಕೆಲವೇ ದಿನಗಳಲ್ಲಿ ಒಟಿಟಿಗೆ ಉಸ್ತಾದ್ ಭಗತ್ ಸಿಂಗ್? ಸ್ಟ್ರೀಮಿಂಗ್ ಎಲ್ಲಿ?
ನಾನು ಅಷ್ಟೆಲ್ಲ ಕೇರ್ ಮಾಡ್ತೀನಿ, ಆದರೆ ಅವರಿಗೆ ಕಾಣಿಸೋದು ಒಂದೇ. ಅದು ನನ್ನ ಕೋಪ. ಅವಳಿಗೆ ಕೋಪ ಜಾಸ್ತಿ ಅನ್ನೋದೇ ಒಂದು ಕಾರಣ. ಎಲ್ಲರಿಗೂ ಕೋಪ ಬಂದೇ ಬರತ್ತೆ. ಪ್ರೀತಿ ಬಗ್ಗೆ ಮಾತನಾಡುವಾಗ ನನಗೆ ಈಗಲೂ ಅಳು ಬರತ್ತೆʼ ಎಂದು ಭಾವುಕರಾಗಿದ್ದಾರೆ.