ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಗಿಲ್ಲಿ ಜೊತೆಗಿನ ಫ್ರೆಂಡ್‌ಶಿಪ್‌ಗೆ ಫುಲ್‌ಸ್ಟಾಪ್‌ ಇಡ್ತಾರಾ ಕಾವ್ಯ? ಪರ್ಫಾಮೆನ್ಸ್ ಮುಖ್ಯ ಅಂದಿದ್ದೇಕೆ ಕಾವು?

Gilli Nata: ಉಗ್ರಂ ಮಂಜುಗೆ ಗಿಲ್ಲಿ ಕಂಡರೆ ಅಷ್ಟಕಷ್ಟೇ ಆದರೂ ಗಿಲ್ಲಿ ಬೆಸ್ಟ್‌ ಫ್ರೆಂಡ್‌ ಕಾವ್ಯ ಅಂದರೆ ಅಚ್ಚುಮೆಚ್ಚು ಅನ್ನುವಂತಿದೆ. ಬಿಗ್‌ ಬಾಸ್‌ ಪ್ರೋಮೋ ಒಂದನ್ನ ಶೇರ್‌ ಮಾಡಿಕೊಂಡಿದ್ದು, ಕಾವ್ಯ ಅವರು ವಾಕ್‌ ಮಾಡುತ್ತ ಉಗ್ರಂ ಮಂಜು ಅವರ ಹೆಗಲ ಮೇಲೆ ಕೈ ಹಾಕಿ, ಫ್ರೆಂಡ್‌ಶಿಪ್‌ ಬಗ್ಗೆ ಮಾತನಾಡಿದ್ದಾರೆ. ಫ್ರೆಂಡ್‌ಶಿಪ್‌ಗಿಂತ ಪರ್ಫಾಮೆನ್ಸ್ ಮುಖ್ಯ ಎಂದು ನೇರವಾಗಿ ಹೇಳಿದ್ದಾರೆ. ಅಸಲಿಗೆ ಕಾವ್ಯ ಹೇಳಿರೋದು ಯಾರ ಬಗ್ಗೆ?

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ನಲ್ಲಿ ಸೀಸನ್‌ 11ರ (Bigg Boss Kannada 12) ಸ್ಪರ್ಧಿಗಳು ಗಿಲ್ಲಿ ಹೊರತಾಗಿ, ಉಳಿದ ಸ್ಪರ್ಧಿಗಳ ಜೊತೆ ಚೆನ್ನಾಗಿಯೇ ಮಾತನಾಡುತ್ತಿದ್ದಾರೆ. ಉಗ್ರಂ ಮಂಜುಗೆ (Ugram Manju) ಗಿಲ್ಲಿ ಕಂಡರೆ ಅಷ್ಟಕಷ್ಟೇ ಆದರೂ ಗಿಲ್ಲಿ ಬೆಸ್ಟ್‌ ಫ್ರೆಂಡ್‌ ಕಾವ್ಯ (Kavya Shaiva) ಅಂದರೆ ಅಚ್ಚುಮೆಚ್ಚು ಅನ್ನುವಂತಿದೆ. ಬಿಗ್‌ ಬಾಸ್‌ ಪ್ರೋಮೋ ಒಂದನ್ನ ಶೇರ್‌ ಮಾಡಿಕೊಂಡಿದ್ದು, ಕಾವ್ಯ ಅವರು ವಾಕ್‌ ಮಾಡುತ್ತ ಉಗ್ರಂ ಮಂಜು ಅವರ ಹೆಗಲ ಮೇಲೆ ಕೈ ಹಾಕಿ, ಫ್ರೆಂಡ್‌ಶಿಪ್‌ (Friendship) ಬಗ್ಗೆ ಮಾತನಾಡಿದ್ದಾರೆ. ಫ್ರೆಂಡ್‌ಶಿಪ್‌ಗಿಂತ ಪರ್ಫಾಮೆನ್ಸ್ ಮುಖ್ಯ ಎಂದು ನೇರವಾಗಿ ಹೇಳಿದ್ದಾರೆ. ಅಸಲಿಗೆ ಕಾವ್ಯ ಹೇಳಿರೋದು ಯಾರ ಬಗ್ಗೆ?

ಫ್ರೆಂಡ್‌ಶಿಪ್‌ಗಿಂತ ಪರ್ಫಾಮೆನ್ಸ್ ಮುಖ್ಯ!

ಬಿಗ್‌ ಬಾಸ್‌ ಮನೆಯಲ್ಲಿ ನನಗೆ ಫ್ರೆಂಡ್‌ಶಿಪ್‌ಗಿಂತ ಪರ್ಫಾಮೆನ್ಸ್ ಮುಖ್ಯ. ಇವರೆಲ್ಲ (ಅಭಿ-ಧನುಷ್‌) ಫ್ರೆಂಡ್‌ಶಿಪ್‌ ಪರಿಗಣಿಸಿದ್ರೆ ಬಾತ್‌ರೂಮ್‌, ಕಿಚನ್‌ ಕೊಡ್ತಾ ಇರಲಿಲ್ಲ. ಫ್ರೆಂಡ್‌ಶಿಪ್‌ ಎಲ್ಲ ನೋ.. ಉಳಿದವರಂತೆ ನಾನು ಕೂಡ ಪ್ರಾಕ್ಟಿಕಲ್‌ ಆಗಿ ಆಡ್ತೀನಿ ಅಂತ ಕಾವ್ಯ ಹೇಳ್ತಾರೆ.

ಇದನ್ನೂ ಓದಿ: Bigg Boss Kannada 12: ಯಾವುದೇ ವ್ಯಕ್ತಿಗೆ, ಪ್ರಾಣಿಗೆ ಸಂಬಂಧಿಸಿದ್ದಲ್ಲ ಅಂತ ಗಿಲ್ಲಿ ಹೇಗೆ ಡೈಲಾಗ್‌ ಹೇಳಿದ್ರು ಗೊತ್ತಾ? ಎಂಜಾಯ್ ಮಾಡಿದ್ರು ಗೆಸ್ಟ್‌ಗಳು

ಹಾಗಾದ್ರೆ, ನೀನೊಬ್ಬಳೆ ಬಿಗ್‌ ಬಾಸ್‌ ಕಪ್‌ ಗೆಲ್ಬೇಕು ಅಂತ ಡಿಸೈಡ್‌ ಮಾಡಿದ್ದೀಯಾ ಅಂತ ಉಗ್ರಂ ಮಂಜು ಕೇಳ್ತಾರೆ. ಅದಕ್ಕೆ ಕಾವ್ಯ, ನನಗೆ ಕಪ್‌ಗಿಂತ ಪರ್ಸನಾಲಿಟಿ ಮ್ಯಾಟರ್‌. ನನಗೆ ವಿಲ್‌ ಪವರ್‌ ಇದೆ. ಯಾವುದೇ ಕಾರಣಕ್ಕೂ ಬಿಟ್ಟುಕೊಡಲ್ಲ ಅಂತ ಹೇಳ್ತಾರೆ. ಉಗ್ರಂ ಮಂಜು ಮತ್ತು ಕಾವ್ಯ ಮಾತುಕತೆ ವೇಳೆ ಗಿಲ್ಲಿ ಒಮ್ಮೆ ‘ಕಾವು’ ಅಂತ ಕೂಗ್ತಾರೆ. ಆದರೆ, ಗಿಲ್ಲಿ ಕಡೆ ಕಾವ್ಯ ಗಮನ ಕೊಡಲ್ಲ.

ಕಾವ್ಯ ಶೈವ ಹಾಗೂ ಮಂಜು ಒಳಗೆ ಮಾತನಾಡ್ತಿದ್ದರು. ಆದರೆ, ಗಿಲ್ಲಿ ನಟ ಹೊರಗಡೆ ಇದ್ದರು. ಹಾಗಾಗಿ ಮಂಜು ಮತ್ತು ಕಾವ್ಯ ಮಾತನಾಡೋ ಸಮಯದಲ್ಲಿ ಗಿಲ್ಲಿ ಹೊರಗಡೆ ಇರೋ ವಿಡಿಯೋ ಕೂಡ ಈ ಪ್ರೋಮೋದಲ್ಲಿದೆ.

ಕಲರ್ಸ್‌ ಕನ್ನಡ ಪ್ರೋಮೋ



ಅಭಿ ಮತ್ತು ಧನುಷ್‌ಗೆ ಟಾಂಗ್‌ ?

ಆದರೆ ಕಾವ್ಯ ಈ ಮಾತನ್ನ ಗಿಲ್ಲಿ ಬಗ್ಗೆ ಹೇಳಿಲ್ಲ. ಅಭಿ ಮತ್ತು ಧನುಷ್‌ಗೆ ಟಾಂಗ್‌ ಕೊಟ್ಟಿದ್ದಾರೆ ಅನ್ನೋದು ನೆಟ್ಟಿಗರ ಅಭಿಪ್ರಾಯ. ಇನ್ನೂ ಕೆಲವರು ರಘು ಮತ್ತು ಗಿಲ್ಲಿ ಫ್ರೆಂಡ್‌ಶಿಪ್‌ ಬಗ್ಗೆಯೂ ಮಾತನಾಡಿರಬಹುದು ಎಂದು ಕಮೆಂಟ್‌ ಮಾಡಿದ್ದಾರೆ.

12ನೇ ಸೀಸನ್ ಆರಂಭ ಆದಾಗಿನಿಂದಲೂ ಕಾವ್ಯ ಮತ್ತು ಗಿಲ್ಲಿ ನಟ ಕ್ಲೋಸ್ ಆಗಿದ್ದಾರೆ. ಅವರಿಬ್ಬರ ನಡುವೆ ಆಪ್ತತೆ ಬೆಳೆದಿದೆ. ಆದರೆ ಕಾವ್ಯ ಅವರು ಬೇರೆ ಸ್ಪರ್ಧಿಗಳ ಜೊತೆ ಸ್ನೇಹ ಬೆಳೆಸಿದಾಗ ಗಿಲ್ಲಿ ನೊಂದುಕೊಳ್ಳುತ್ತಾರೆ. ಇಂದಿನ ಪ್ರೋಮೋ ನೋಡಿ ಗಿಲ್ಲಿ ನೊಂದಿಕೊಂಡಿರಬಹುದು ಎಂದು ಕಮೆಂಟ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ: Bigg Boss Kannada 12: ಗಿಲ್ಲಿ ನಟನಿಗೆ ವಿಜಯ ತಿಲಕ ಸಿಕ್ತು ; ʻಉಗ್ರಂʼ ಮಂಜು ಬಾಯಲ್ಲೇ ಬಂತು ʻನೀನೇ ಗೆಲ್ಲುʼ ಎಂಬ ಮಾತು!

ಕಾವ್ಯ ಇನ್ಮುಂದೆ ಬಿಗ್‌ ಬಾಸ್‌ ಮನೆಯಲ್ಲಿ ಸೀರಿಯಸ್‌ ಆಗಿ ಆಟಕ್ಕಷ್ಟೇ ಗಮನ ಕೊಡ್ತಾರಾ? ಗಿಲ್ಲಿ ಜೊತೆಗಿನ ಫ್ರೆಂಡ್‌ಶಿಪ್‌ಗೆ ಬ್ರೇಕ್‌ ಹಾಕ್ತಾರಾ? ಅನ್ನೋದೇ ವೀಕ್ಷರಲ್ಲಿ ಇರೋ ಕುತೂಹಲ.

Yashaswi Devadiga

View all posts by this author