ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಆಕೆಯ ದೇಹ, ಆಕೆಯ ದೇವರು, ಕೇಳಲು ನೀನ್ಯಾರುʼ; ಬೆನ್ನಿನ ಮೇಲೆ ದೇವರ ಟ್ಯಾಟೂ ಹಾಕಿಸಿಕೊಂಡ‌ ʻಕಿಚ್ಚʼ ಸುದೀಪ್‌ ಪುತ್ರಿ ಸಾನ್ವಿಗೆ ಚಕ್ರವರ್ತಿ ಚಂದ್ರಚೂಡ್ ಬೆಂಬಲ

ʻಕಿಚ್ಚʼ ಸುದೀಪ್ ಪುತ್ರಿ ಸಾನ್ವಿ ತಮ್ಮ ಬೆನ್ನಿನ ಮೇಲೆ ಗಣೇಶನ ಟ್ಯಾಟೂ ಹಾಕಿಸಿಕೊಂಡಿರುವುದು ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧದ ಚರ್ಚೆಗೆ ನಾಂದಿ ಹಾಡಿದೆ. ಮಡಿ-ಮೈಲಿಗೆಯ ಹೆಸರಿನಲ್ಲಿ ಟ್ರೋಲ್ ಮಾಡುತ್ತಿರುವವರಿಗೆ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಖಡಕ್ ಉತ್ತರ ನೀಡಿದ್ದಾರೆ.

ನಟ ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದಾರೆ. ಇತ್ತೀಚೆಗೆ ಹೈದರಾಬಾದ್‌ನ ಟ್ಯಾಟೂ ಸ್ಟುಡಿಯೋವೊಂದರಲ್ಲಿ ತಮ್ಮ ಬೆನ್ನಿನ ಮೇಲೆ ವಿಘ್ನ ವಿನಾಶಕ ಗಣೇಶನ ಭವ್ಯವಾದ ಟ್ಯಾಟೂ ಹಾಕಿಸಿಕೊಂಡಿದ್ದರು ಸಾನ್ವಿ. ಇದನ್ನು ಹಾಕುವುದಕ್ಕೆ ಸುಮಾರು 8 ಗಂಟೆಗಳು ಬೇಕಾಯಿತು. ಆನಂತರ ಟ್ಯಾಟೂ ವಿಡಿಯೋವನ್ನು ಸಾನ್ವಿ ಹಂಚಿಕೊಂಡಿದ್ದರು. ಆದರೆ, ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪರ-ವಿರೋಧದ ಚರ್ಚೆಗಳು ಶುರುವಾಗಿದ್ದವು.

ಸೋಶಿಯಲ್‌ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ

ಸಾನ್ವಿ ಅವರ ಬೆನ್ನ ಮೇಲಿನ ದೇವರ ಚಿತ್ರವನ್ನು ಕಂಡು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದರು. "ಪೂಜೆ ಮಾಡುವಾಗ ಮಡಿ-ಮೈಲಿಗೆ ಎಂದು ಸಂಪ್ರದಾಯ ಪಾಲಿಸುತ್ತೇವೆ, ಆದರೆ ದೇಹದ ಮೇಲೆ ದೇವರ ಚಿತ್ರ ಬರಿಸಿಕೊಂಡರೆ ಹೇಗೆ?", "ದೇವರ ಚಿತ್ರವನ್ನು ಮೈ ಮೇಲೆ ಹಾಕಿಸಿಕೊಳ್ಳುವುದು ನಮ್ಮ ಸಂಸ್ಕೃತಿ ಅಲ್ಲ", "ಬೆನ್ನ ಮೇಲೆ ಗಣಪತಿಯನ್ನು ಹಾಕಿಸಿಕೊಂಡು ಆ ದೇವರಿಗೇ ವಿಘ್ನ ತಂದರು.." ಎಂಬಿತ್ಯಾದಿ ಕಾಮೆಂಟ್‌ಗಳ ಮೂಲಕ ಟ್ರೋಲ್ ಮಾಡಿದ್ದರು. ಇದೀಗ ಸಾನ್ವಿ ಸುದೀಪ್ ಅವರ ಪರವಾಗಿ ಪತ್ರಕರ್ತ ಹಾಗೂ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್ ಧ್ವನಿ ಎತ್ತಿದ್ದಾರೆ.

Sanvi Sudeep: ಬೆನ್ನಿನ ಮೇಲೆ ದೇವರ ಚಿತ್ರ ಟ್ಯಾಟೂ ಹಾಕಿಸಿಕೊಂಡ ಸುದೀಪ್ ಮಗಳು ಸಾನ್ವಿ!

ಚಕ್ರವರ್ತಿ ಚಂದ್ರಚೂಡ್‌ ಪೋಸ್ಟ್‌ನಲ್ಲಿ ಏನಿದೆ?

ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಚಕ್ರವರ್ತಿ ಚಂದ್ರಚೂಡ್‌, "ಆಕೆಯ ದೇಹ.. ಆಕೆಯ ದೇವರು.. (ದೇವರು ಎಂಬುದೇ ಅತ್ಯಂತ ಖಾಸಗಿ ಅದು ಅಂತರಂಗ ಸಾರ್ವಜನಿಕ ಅಲ್ಲ) ಆಕೆಯ ದೇವರನ್ನು ಎಲ್ಲಾದರೂ ಬರೆದುಕೊಳ್ಳುತ್ತಾಳೆ. ಶಕ್ತಿಪೀಠ ಗಳಲ್ಲಿ ಶಿವೆಯ ಯೋನಿಗೆ ಪೂಜಿಸುವುದು ಅಂತರ್ಯದ ಭಕ್ತಿ. ಆದನ್ನು ಕೇಳಲು ನೀನು ಯಾರು?

ಅಕ್ಕ ಮಹಾದೇವಿಯನ್ನು ಶಾಂಪೂ ಜಾಹಿರಾತು ಎಂದು ಕೊಳ್ಳುವ ನೀನು, ನಿನ್ನಂಥವರಿಗೆ ಎಲ್ಲಿ ದೇವರು ಕಂಡರೂ ಕೈ ಮುಗಿಯುವುದನ್ನು ನಿನ್ನ ಧರ್ಮ ಇನ್ನು ಕಲಿಸಿಲ್ಲವೇ...? ಪಕ್ಕದಲ್ಲಿದ್ಧ ಪತ್ನಿಯ ಕುಚಗಳನ್ನೇ ಶಿವಲಿಂಗ ಎಂದು ನಂಬಿ ಪೂಜಿಸಿದ ಪರಮ ಭಕ್ತಿ ಯ ಕಥೆಯು ನಿನಗೆ, ನಿನ್ನಂಥವರಿಗೆ ಇನ್ನು ಅರಿವು ತರಲಿಲ್ಲವೆಂದರೆ..." ಎಂದು ಬರೆದುಕೊಂಡಿದ್ದಾರೆ.

ಚಕ್ರವರ್ತಿ ಚಂದ್ರಚೂಡ್‌ ಹಂಚಿಕೊಂಡಿರುವ ಈ ಪೋಸ್ಟ್‌ಗೆ ಸಾಕಷ್ಟು ಮಂದಿ ಲೈಕ್‌ ಒತ್ತಿದ್ದಾರೆ. ಜೊತೆಗೆ, "ಅಂತರಂಗದ ದೇವರನ್ನು ಕೇಳುವ ಅದಿಕಾರ ಯಾರಿಗೂ ಇಲ್ಲ.. ಟಿಕೀಸುವ ಕಿಡಿಗೇಡಿಗಳಿಗೆ ನೀವೇ ಸರಿ ಅಣ್ಣ.. ಅಂಥವರಿಗೆ ನಿಮ್ಮ ಸಾಲುಗಳೇ ಅವರಿಗೆ ಚಪಲಿಯಲ್ಲಿ ಸುತ್ತೊಡೆದ ಶಾಲುಗಳು..." ಎಂದೆಲ್ಲಾ ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ.

ಚಕ್ರವರ್ತಿ ಚಂದ್ರಚೂಡ್‌ ಫೇಸ್‌ ಬುಕ್‌ ಪೋಸ್ಟ್



ಗಾಯಕಿಯಾಗಿ ಮಿಂಚುತ್ತಿರುವ ಸಾನ್ವಿ

ಸುದೀಪ್‌ ಪುತ್ರಿ ಸಾನ್ವಿ ಅವರು ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಗಾಯಕಿಯಾಗಿ ಮಿಂಚುತ್ತಿದ್ದಾರೆ. ಇತ್ತೀಚೆಗೆ 'ಮಾರ್ಕ್' ಚಿತ್ರದ 'ಮಸ್ತ್ ಮಲೈಕಾ' ಹಾಡನ್ನು ಹಾಡಿ ಸಖತ್‌ ಫೇಮಸ್‌ ಕೂಡ ಆಗಿದ್ದರು ಸಾನ್ವಿ. ಈ ಹಾಡು ದೊಡ್ಡ ಹಿಟ್‌ ಆಗಿ ಸಾನ್ವಿಗೆ ಒಳ್ಳೆಯ ಹೆಸರನ್ನು ತಂದುಕೊಟ್ಟಿದೆ.