ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮತ್ತೊಮ್ಮೆ ಸಾಹಸಕ್ಕಿಳಿದ ನಟ ಚಂದನ್‌ಕುಮಾರ್‌; ಹೊಸ ರೂಪದಲ್ಲಿ ಪುನಃ ಥಿಯೇಟರ್‌ಗೆ ಬರ್ತಿದೆ ʻಫ್ಲರ್ಟ್‌ʼ ಸಿನಿಮಾ

ಸ್ಯಾಂಡಲ್‌ವುಡ್ ನಟ ಚಂದನ್ ಕುಮಾರ್ ನಿರ್ದೇಶಿಸಿ, ನಟಿಸಿರುವ 'ಫ್ಲರ್ಟ್' ಸಿನಿಮಾ ಸದ್ಯದಲ್ಲೇ ಹೊಸ ರೂಪದಲ್ಲಿ ಚಿತ್ರಮಂದಿರಗಳಲ್ಲಿ ಮರು-ಬಿಡುಗಡೆಯಾಗಲಿದೆ. 'ಎ ಪ್ಯೂರ್ ಡವ್ ಸ್ಟೋರಿ' ಎಂಬ ಅಡಿಬರಹದ ಈ ಚಿತ್ರಕ್ಕೆ ಕಿಚ್ಚ ಸುದೀಪ್ ವಿಶೇಷ ಹಾಡೊಂದನ್ನು ಹಾಡುವ ಮೂಲಕ ಬೆಂಬಲ ನೀಡಿದ್ದಾರೆ.

ಸ್ಯಾಂಡಲ್‌ವುಡ್‌ ನಟ ಚಂದನ್ ಕುಮಾರ್ ಮೊದಲ ಬಾರಿಗೆ ಆ್ಯಕ್ಷನ್-ಕಟ್ ಹೇಳಿ, ನಟಿಸಿದ್ದ 'ಫ್ಲರ್ಟ್' (Flirt) ಸಿನಿಮಾ ಸದ್ಯದಲ್ಲೇ ಹೊಸ ರೂಪದೊಂದಿಗೆ ರೀ-ರಿಲೀಸ್ ಆಗಲು ಸಿದ್ಧತೆ ಮಾಡಿಕೊಳ್ಳುತ್ತಿದೆ.. ಕೆಲ ತಿಂಗಳ ಹಿಂದಷ್ಟೇ ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತಾದರೂ, ಅದೇ ಸಮಯದಲ್ಲಿ ಸಾಲು ಸಾಲು ಸಿನಿಮಾಗಳು ರಿಲೀಸ್ ಆದ ಕಾರಣ ಫ್ಲರ್ಟ್‌ ಚಿತ್ರವನ್ನು ಚಿತ್ರಮಂದಿರಗಳಿಂದ ಹಿಂಪಡೆಯಲಾಗಿತ್ತು.

ಹೊಸ ರೂಪದಲ್ಲಿ ತೆರೆಗೆ ‌ಬರ್ತಿದೆ ʻಫ್ಲರ್ಟ್‌ʼ

ಎಲ್ಲಾ ವರ್ಗದ ಪ್ರೇಕ್ಷಕರನ್ನು ತಲುಪಬೇಕು ಎಂಬ ಉದ್ದೇಶದಿಂದ ಚಿತ್ರದ ಕೆಲವು ದೃಶ್ಯಗಳನ್ನು ಟ್ರಿಮ್ ಮಾಡಿ, ಮತ್ತಷ್ಟು ರೋಚಕವಾಗಿ ಎಡಿಟ್‌ ಮಾಡಲಾಗಿದೆಯಂತೆ. ಇದೀಗ ಹೊಸ ರೂಪದಲ್ಲಿ ತೆರೆಗೆ ಬರಲು ಸಿದ್ಧವಾಗಿರುವ 'ಫ್ಲರ್ಟ್' ಚಿತ್ರವನ್ನು ರಾಜ್ಯಾದ್ಯಂತ ಮರು-ಬಿಡುಗಡೆ ಮಾಡಲು ಚಂದನ್ ಕುಮಾರ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ದಾಂಪತ್ಯ ಬದುಕಿಗೆ ಕಾಲಿಟ್ಟ ʻಶೇಕ್ ಇಟ್ ಪುಷ್ಪವತಿʼ ಖ್ಯಾತಿಯ ನಟಿ ನಿಮಿಕಾ ರತ್ನಾಕರ್;‌ ಹುಡುಗ ಯಾರು?

'ಎ ಪ್ಯೂರ್ ಡವ್ ಸ್ಟೋರಿ'ಗೆ ಕಿಚ್ಚ ಸುದೀಪ್ ಸಾಥ್

'ಎ ಪ್ಯೂರ್ ಡವ್ ಸ್ಟೋರಿ' ಎಂಬ ಅಡಿಬರಹ ಹೊಂದಿರುವ ಈ ಚಿತ್ರವನ್ನು ಚಂದನ್ ಅವರೇ 'ಎವರೆಸ್ಟ್ ಪಿಕ್ಚರ್ಸ್' ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಆರಂಭದಿಂದಲೂ ಚಂದನ್ ಅವರಿಗೆ ಬೆಂಬಲ ನೀಡುತ್ತಾ ಬಂದಿರುವ ಸುದೀಪ್ ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿಕೊಟ್ಟಿದ್ದಲ್ಲದೆ, ಸ್ನೇಹದ ಕುರಿತಾದ ವಿಶೇಷ ಹಾಡೊಂದನ್ನು ಹಾಡಿದ್ದಾರೆ. ಸುದೀಪ್ ಧ್ವನಿಯಲ್ಲಿ ಮೂಡಿಬಂದಿರುವ 'ನೀ ನನ್ನ ಜೀವ...' ಎಂಬ ಫ್ರೆಂಡ್‌ಶಿಪ್ ಹಾಡು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿತ್ತು.

'ಫ್ಲರ್ಟ್' ಅಂದರೆ ಬರೀ ಚುಡಾಯಿಸುವುದಲ್ಲ!

ಚಿತ್ರದ ಕುರಿತು ಮಾತನಾಡಿರುವ ಚಂದನ್ ಕುಮಾರ್, "ಇದೊಂದು ಕಂಪ್ಲೀಟ್ ರೊಮ್ಯಾಂಟಿಕ್ ಕಾಮಿಡಿ ಸಿನಿಮಾ. ಇಲ್ಲಿ ಫ್ರೆಂಡ್‌ಶಿಪ್, ಲವ್ ಸೇರಿದಂತೆ ಎಲ್ಲಾ ತರಹದ ಮನರಂಜನೆಯೂ ಇದೆ. ಫ್ಲರ್ಟ್ ಎಂದರೆ ಬರೀ ಚುಡಾಯಿಸುವುದು ಮಾತ್ರವಲ್ಲ, ಗಾಢವಾದ ಪ್ರೀತಿಯನ್ನೂ ಸಹ ಫ್ಲರ್ಟ್ ಎನ್ನಬಹುದು. ಎಲ್ಲರ 'ಡವ್'ನಲ್ಲೂ ಒಂದೊಂದು 'ಲವ್' ಇರುತ್ತದೆ. ಚಿತ್ರದಲ್ಲಿ ಬರೀ ಕಾಮಿಡಿ ಮಾತ್ರವಲ್ಲದೆ ಒಂದು ಸೈಕೋ ಕ್ಯಾರೆಕ್ಟರ್ ಕೂಡ ಇದ್ದು, ಪ್ರತಿ ಪಾತ್ರಕ್ಕೂ ತನ್ನದೇ ಆದ ತೂಕವಿದೆ. ಪ್ರೇಕ್ಷಕರು ಚಿತ್ರವನ್ನು ನೋಡಿ ಹರಸುತ್ತಾರೆ ಎಂಬ ನಂಬಿಕೆಯಿಂದ ರೀ-ರಿಲೀಸ್ ಮಾಡುತ್ತಿದ್ದೇನೆ" ಎಂದಿದ್ದಾರೆ.

ಯಾರೆಲ್ಲಾ ನಟಿಸಿದ್ದಾರೆ?

ʻಫ್ಲರ್ಟ್‌ʼ ಚಿತ್ರದಲ್ಲಿ ಚಂದನ್ ಅವರಿಗೆ ನಾಯಕಿಯರಾಗಿ ನಿಮಿಕಾ ರತ್ನಾಕರ್ ಹಾಗೂ ಅಕ್ಷತಾ ಬೋಪಣ್ಣ ಸಾಥ್ ನೀಡಿದ್ದಾರೆ. ಉಳಿದಂತೆ ಹಿರಿಯ ನಟ ಅವಿನಾಶ್ ಜಡ್ಜ್ ಪಾತ್ರದಲ್ಲಿ ಕಾಣಿಸಿಕೊಂಡರೆ, ಶ್ರುತಿ, ಸಾಧು ಕೋಕಿಲ, ವಿನಯ್ ಗೌಡ ಮತ್ತು ಸ್ನೇಹಿತನ ಪಾತ್ರದಲ್ಲಿ ಗಿರೀಶ್ ಶಿವಣ್ಣ ನಟಿಸಿದ್ದಾರೆ.

ಕಿಚ್ಚ ಸುದೀಪ್ ಹಾಡಿರುವ ಹಾಡಿಗೆ ನಕುಲ್ ಅಭಯಂಕರ್ ಸಂಗೀತ ಸಂಯೋಜಿಸಿದ್ದು, ಉಳಿದ ಮೂರು ಹಾಡುಗಳು ಹಾಗೂ ಹಿನ್ನೆಲೆ ಸಂಗೀತದ ಜವಾಬ್ದಾರಿಯನ್ನು ಸಂಗೀತ ನಿರ್ದೇಶಕ ಜಸ್ಸಿ ಗಿಫ್ಟ್ ಹೊತ್ತಿದ್ದಾರೆ. ಹೆಚ್.ಸಿ. ವೇಣು ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. 'ಫ್ಲರ್ಟ್' ಸಿನಿಮಾ ಸದ್ಯದಲ್ಲೇ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ.