Chhaava OTT Release: ಒಟಿಟಿಗೆ ಬಂತಾ ಛಾವಾ? ಯಾವ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ರಿಲೀಸ್?
ಛಾವಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಲಕ್ಷ್ಮಣ್ ಉಟೇಕರ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರವು ಮೂರೇ ದಿನಗಳಲ್ಲಿ 100 ಕೋಟಿ ರೂಪಾಯಿ ಕಬ್ಲ್ ಪ್ರವೇಶಿಸಿದೆ. ಪ್ರೇಕ್ಷಕರು ಛಾವಾ OTT ರಿಲೀಸ್ ಯಾವಾಗ ಎಂದು ಕೇಳುತ್ತಿದ್ದಾರೆ. ಸದ್ಯ ಅದಕ್ಕೆ ಈಗ ಉತ್ತರ ದೊರೆಕಿದೆ.

ಛಾವಾ ಸಿನಿಮಾ

ಮುಂಬೈ: ಬಾಲಿವುಡ್ ನಟ ವಿಕ್ಕಿ ಕೌಶಲ್ (Vicky Kaushal) ಹಾಗೂ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅಭಿನಯದ ರಶ್ಮಿಕಾ ಮಂದಣ್ಣ (Rashmika Mandanna) ಅಭಿನಯದ 'ಛಾವಾ' ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಲಕ್ಷ್ಮಣ್ ಉಟೇಕರ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರವು ಮೂರೇ ದಿನಗಳಲ್ಲಿ 100 ಕೋಟಿ ರೂಪಾಯಿ ಬಾಚಿಕೊಂಡಿದೆ. ವಿಕ್ಕಿ ಕೌಶಲ್ ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದು, ಪ್ರೇಕ್ಷಕರು ವಿಕ್ಕಿ ಅಭಿನಯಕ್ಕೆ ಮನಸೋತಿದ್ದಾರೆ. ಇನ್ನು ಥಿಯೇಟರ್‌ಗೆ ಹೋಗದೆ ಮನೆಯಲ್ಲೇ ಕುಳಿತು ಚಿತ್ರ ನೋಡಬೇಕು ಎಂದು ಕೊಂಡ ಪ್ರೇಕ್ಷಕರು ಛಾವಾ (Chhaava OTT Release) OTT ರಿಲೀಸ್ ಯಾವಾಗ ಮತ್ತು ಯಾವ ಫ್ಲ್ಯಾಟ್‌ಫಾರ್ಮ್‌ನಲ್ಲಿ ತೆರೆ ಕಾಣಲಿದೆ ಎಂದು ಕಾತರದಿಂದ ಕಾಯುತ್ತಿದ್ದಾರೆ. ಸದ್ಯ ಅದಕ್ಕೆ ಈಗ ಉತ್ತರ ದೊರೆಕಿದೆ.
ವರದಿಗಳ ಪ್ರಕಾರ ಛಾವಾ ಚಿತ್ರ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಆಗಲಿದೆ. ಈಗಾಗಲೇ ಅತ್ಯುತ್ತಮ ಗಳಿಕೆ ಕಾಣುತ್ತಿದೆ. ಚಿತ್ರದ ನಿರ್ದೇಶಕ ಲಕ್ಷ್ಮಣ್ ಉಟೇಕರ್ ನೆಟ್‌ಫ್ಲಿಕ್ಸ್‌ನಲ್ಲಿ ಯಾವ ದಿನಾಂಕದಂದು ಬಿಡುಗಡೆ ಮಾಡುತ್ತಾರೆ ಎಂಬುದನ್ನು ಸ್ಪಷ್ಟಪಡಿಸಿಲ್ಲ. ಆದರೆ ಸಿನಿಮಾವನ್ನು 30-60 ದಿನಗಳಲ್ಲಿ ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಆದರೆ ಚಿತ್ರಕ್ಕೆ ಸಿಕ್ಕಿರುವ ಉತ್ತಮ ಪ್ರತಿಕ್ರಿಯೆ ನೋಡುವುದಾದರೆ ಚಿತ್ರವು ಕನಿಷ್ಠ 50 ದಿನಗಳ ನಂತರ OTT ಅಲ್ಲಿ ಬಿಡುಗಡೆ ಮಾಡಬಹುದು ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ: Chhaava Movie Review: ಛಾವಾ ಸಿನಿಮಾ ಅಲ್ಲ.. ಇತಿಹಾಸದ ಅಸಲಿ ಪುಟಗಳ ಸಾರಾಂಶ ಅಷ್ಟೆ!
ಛಾವಾ ಚಿತ್ರದ ಬಾಕ್ಸ್ ಆಫೀಸ್ ಪ್ರದರ್ಶನದ ಬಗ್ಗೆ ನೋಡುವುದಾದರೆ, ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಚಿತ್ರವು ಮೊದಲ ದಿನ ಸುಮಾರು 31 ಕೋಟಿ ರೂ ಗಳಿಸಿ ಎಂದು ಹೇಳಲಾಗಿದೆ. ಈ ಚಿತ್ರವು ಮೂರೇ ದಿನಗಳಲ್ಲಿ 100 ಕೋಟಿ ರೂಪಾಯಿಯ ಕ್ಲಬ್ ಪ್ರವೇಶಿಸಿದ 2025ರ ಮೊದಲ ಹಿಂದಿ ಚಿತ್ರವಾಗಿ ಹೊರಹೊಮ್ಮಿದೆ. ಚಿತ್ರಸದಲ್ಲಿ ದೊಡ್ಡ ತಾರಾ ಗಣವೇ ನಟಿಸಿದ್ದು, ರಶ್ಮಿಕಾ ಮಂದಣ್ಣ , ಅಕ್ಷಯ್ ಖನ್ನಾ, ಅಶುತೋಷ್ ರಾಣಾ, ಡಯಾನಾ ಪೆಂಟಿ, ಸಂತೋಷ್ ಜುವೇಕರ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು ಎಆರ್ ರೆಹಮಾನ್ ಸಂಯೋಜಿಸಿದ್ದಾರೆ.