'ದಳಪತಿ' ವಿಜಯ್ (Vijay Joseph) ಅವರು ಮೊದಲ ಬಾರಿಗೆ ಕರ್ನಾಟಕದ ಕಡೆ ಮುಖ ಮಾಡಿದ್ದಾರೆ. ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ (kollur shri mookambika devi temple) ಭೇಟಿ ನೀಡಿ, ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ದೇವಿಗೆ ಭಕ್ತಿಪೂರ್ವಕವಾಗಿ ಬೆಳ್ಳಿಯ ಖಡ್ಗ ಅರ್ಪಿಸಿದರು. ಇದಕ್ಕೂ ಮುನ್ನ, ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ (cm), ಅಲ್ಲಿಂದ ರಸ್ತೆ ಮಾರ್ಗವಾಗಿ ಕೊಲ್ಲೂರಿಗೆ ಪಯಣ ಬೆಳೆಸಿದ್ದರು.
'ದೇಶಿ' ಲುಕ್‌ನಲ್ಲಿ ನಟ
ದೇವಸ್ಥಾನಕ್ಕೆ ಆಗಮಿಸುವ ಮೊದಲೇ ವಿಜಯ್ ಅವರು ಕೊಲ್ಲೂರಿನ ಪ್ರಸಿದ್ಧ ಆರ್.ಎನ್.ಎಸ್ (RNS) ಅತಿಥಿಗೃಹದಲ್ಲಿ ತಂಗಿದ್ದರು. ದೇವಸ್ಥಾನದ ಪವಿತ್ರ ನಿಯಮ ಮತ್ತು ಕರಾವಳಿಯ ಸಂಪ್ರದಾಯಗಳನ್ನು ಗೌರವಿಸುವ ಸಲುವಾಗಿ, ವಿಜಯ್ ಅವರು ತಮ್ಮ ಆಧುನಿಕ ಉಡುಪನ್ನು ತ್ಯಜಿಸಿ, ಶುಭ್ರವಾದ ಬಿಳಿ ಪಂಚೆ ಮತ್ತು ಶಲ್ಯ ಧರಿಸಿ ಕಾಣಿಸಿಕೊಂಡರು.
ಇದನ್ನೂ ಓದಿ: Amruthadhaare Serial: ಮಿಂಚು ಜನ್ಮ ರಹಸ್ಯ ಬಗೆಹರಿಸೋಕೆ ದಿವಾನ್ ಮನೆಯಲ್ಲಿ ಮಹಾರಥಿಗಳ ಸಂಗಮ!
ಈ ಸಂದರ್ಭದಲ್ಲಿ ಅವರು ತಾವೇ ಸ್ವತಃ ತಂದಿದ್ದ ಸುಂದರವಾದ ಬೆಳ್ಳಿಯ ಖಡ್ಗವನ್ನು ಮೂಕಾಂಬಿಕಾ ದೇವಿಗೆ ಭಕ್ತಿಪೂರ್ವಕವಾಗಿ ಉಡುಗೊರೆಯಾಗಿ ನೀಡಿದರು. . ದಶಕಗಳ ಹಿಂದೆ ತಮಿಳುನಾಡಿನ ಮಾಜಿ ಸಿಎಂ ಹಾಗೂ ಸಿನಿಮಾ ದಂತಕಥೆ ಎಂ.ಜಿ. ರಾಮಚಂದ್ರನ್ ಅವರು ಇದೇ ಕೊಲ್ಲೂರು ಮೂಕಾಂಬಿಕೆಗೆ 1 ಕೆಜಿ ತೂಕದ ಚಿನ್ನದ ಖಡ್ಗವನ್ನು ಕಾಣಿಕೆಯಾಗಿ ನೀಡಿದ್ದರು.
ವಿಜಯ್ ಅವರನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಸೇರಿದ್ದರು. ವಿಜಯ್ ದೇಗುಲದಿಂದ ಹೊರಬರುತ್ತಿದ್ದಂತೆ ಜೈಕಾರ ಕೂಗಿ ಸಂಭ್ರಮಿಸಿದರು.
ವಿಜಯ್ ಭೇಟಿಯ ಹಿನ್ನೆಲೆಯಲ್ಲಿ ದೇವಸ್ಥಾನದ ಪರಿಸರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಭದ್ರತಾ ದೃಷ್ಟಿಯಿಂದ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ದೇವಸ್ಥಾನಕ್ಕೆ ಆಗಮಿಸುವ ಮಾರ್ಗಗಳಲ್ಲಿಯೂ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಇದನ್ನೂ ಓದಿ: Cocktail 2: ರಶ್ಮಿಕಾ ಮೇಲೆ ಮುಗಿಬಿದ್ದ ಫ್ಯಾನ್ಸ್! ತೀವ್ರ ಆಕ್ರೋಶಗೊಂಡ ಶಾಹಿದ್, ವಿಡಿಯೋ ವೈರಲ್
ವಿಜಯ್, ವಿಶೇಷವಾಗಿ ‘ಶತ್ರು ಸಂಹಾರ ಸಂಕಲ್ಪ’ ನೆರವೇರಿಸಿ ಕೈಗೆ ರಕ್ಷಾಸೂತ್ರ (ದಾರ) ಕಟ್ಟಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ರಾಜಕೀಯವಾಗಿ ಸಕ್ರಿಯರಾಗಿರುವ ಬೆನ್ನಲ್ಲೇ ವಿಜಯ್ ಈ ವಿಶೇಷ ಸಂಕಲ್ಪ ಮಾಡಿರುವುದು ಕುತೂಹಲ ಮೂಡಿಸಿದೆ.