ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೇಬಿ ಬಂಪ್‌ ಫೋಟೋಗಳನ್ನು ಹಂಚಿಕೊಂಡ ನಟ ಧನಂಜಯ್‌ ಪತ್ನಿ ಧನ್ಯತಾ; ಮಗುವಿನ ನಿರೀಕ್ಷೆಯಲ್ಲಿ ʻಡಾಲಿʼ ದಂಪತಿ

ಸ್ಯಾಂಡಲ್‌ವುಡ್‌ ನಟ ʻಡಾಲಿʼ ಧನಂಜಯ್‌ ಅವರು ವೈದ್ಯೆ ಧನ್ಯತಾ ಜೊತೆ ಕಳೆದ ವರ್ಷ ಫೆಬ್ರವರಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸದ್ಯ ಈ ದಂಪತಿ ಮುದ್ದು ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ವರ್ಷದ ಜನವರಿಯಲ್ಲಿ ಧನಂಜಯ್ ಅವರು ಸಿಹಿಸುದ್ದಿ ಹಂಚಿಕೊಂಡಿದ್ದರು. ಶೀಘ್ರದಲ್ಲೇ ನಾವು ಪೋಷಕರಾಗುತ್ತಿದ್ದೇವೆ ಎಂದು ಡಾಲಿ ತಿಳಿಸಿದ್ದರು. ಸದ್ಯ ಗರ್ಭಿಣಿಯಾಗಿರುವ ತಮ್ಮ ಪತ್ನಿ ಧನ್ಯತಾ ಅವರ ಬೇಬಿ ಬಂಪ್‌ ಫೋಟೋಗಳನ್ನು ಡಾಲಿ ಧನಂಜಯ್‌ ಹಂಚಿಕೊಂಡಿದ್ದಾರೆ. ಆ ಫೋಟೋಗಳಿಗೆ, "ನಮ್ಮ ಜಗತ್ತು ವಿಸ್ತರಿಸುತ್ತಿದೆ" ಎಂದು ಕ್ಯಾಪ್ಷನ್‌ ಕೂಡ ನೀಡಿದ್ದಾರೆ. ಇಲ್ಲಿವೆ ಡಾಲಿ ಪತ್ನಿ ಧನ್ಯತಾ ಅವರ ಬೇಬಿ ಬಂಪ್‌ ಫೋಟೋಶೂಟ್‌ನ ಫೋಟೋಗಳು ವೈರಲ್‌ ಆಗುತ್ತಿವೆ.

1/8

ಕೆಲ ತಿಂಗಳ ಹಿಂದೆ ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಪತ್ನಿ ಗರ್ಭಿಣಿ ಆಗಿರುವ ವಿಚಾರವನ್ನು ಹಂಚಿಕೊಂಡಿದ್ದ ಡಾಲಿ.

2/8

ಆ ಶೋನಲ್ಲಿ ಎರಡು ಗುಲಾಬಿಗಳನ್ನು ಡಾಲಿಗೆ ನೀಡಲಾಗಿತ್ತು, ಅವುಗಳನ್ನು ಎತ್ತಿಕೊಂಡು, "ಒಂದನ್ನ ನನ್ನ ಹೆಂಡ್ತಿಗೆ ಕೊಡ್ತೀನಿ.

3/8

ಇನ್ನೊಂದನ್ನು ಸದ್ಯದಲ್ಲೇ ಇನ್ನೊಂದು ಜೀವ ಜೊತೆಯಾಗುತ್ತಿದೆ. ಅದಕ್ಕೆ ಅಂತ ಹೇಳಿ ಕೊಡ್ತೀನಿ" ಎಂದಿದ್ದರು. ಹೀಗೆ ಹೇಳುವ ಮೂಲಕ ತಮ್ಮ ನಾವು ಮಗುವಿನ ನಿರೀಕ್ಷೆಯಲ್ಲಿ ಇದ್ದೇವೆ ಎಂಬುದನ್ನು ಧನಂಜಯ್‌ ಎಲ್ಲರಿಗೂ ಹೇಳಿದ್ದರು.

4/8

ಮೈಸೂರಿನಲ್ಲಿ ಧನಂಜಯ್ - ಧನ್ಯತಾ ಅವರ ಮದುವೆಯು ಅದ್ಧೂರಿಯಾಗಿ ನಡೆದಿತ್ತು.

5/8

ಧನಂಜಯ್‌ ಮತ್ತು ಧನ್ಯತಾ ಅವರದ್ದು ಲವ್‌ ಕಮ್‌ ಅರೆಂಜ್‌ ಮ್ಯಾರೇಜ್‌ ಆಗಿದೆ.

6/8

ಡಾಲಿ ಧನಂಜಯ್‌ ಅವರ ಮದುವೆಗೆ ಕನ್ನಡ ಚಿತ್ರರಂಗದ ತಾರೆಯರು, ರಾಜಕಾರಣಿಗಳು, ವಿವಿಐಪಿಗಳು, ಸಾವಿರಾರು ಅಭಿಮಾನಿಗಳು ಸಾಕ್ಷಿಯಾಗಿದ್ದರು.

7/8

ಮೈಸೂರಿನ ಜೆಎಸ್‌ಎಸ್‌ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆದಿರುವ ಧನ್ಯತಾ, ಸ್ತ್ರೀರೋಗ ತಜ್ಞರಾಗಿದ್ದು, ಇನ್‌ಫರ್ಟಿಲಿಟಿ ಸ್ಪೆಷಲಿಸ್ಟ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

8/8

ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ನಟ ಧನಂಜಯ್‌ ಅವರು ಜೊತೆಗೆ ಫ್ಯಾಮಿಲಿಗೂ ಸಮಯವನ್ನು ನೀಡುತ್ತಿದ್ದಾರೆ.