ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Daali Dhananjaya: ಇದೇ ನನ್ನ ಕೊನೇ ಸಿನಿಮಾ ಆಗಬಹುದು! ಡಾಲಿ ಧನಂಜಯ್‌ ಬೇಸರ

Daali Dhananjaya: ‘ಮದರ್ ಪ್ರಾಮಿಸ್’ ಸಿನಿಮಾ ಕೆಲವೇ ದಿನಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಈಗಾಗಲೇ ಸಿನಿಮಾ ನೋಡಿರುವವರು ಇದೊಂದು ಒಳ್ಳೆಯ ಸದಭಿರುಚಿಯ ಹಾಸ್ಯ ಪ್ರಧಾನ ಸಿನಿಮಾ ಎಂದು ಮೆಚ್ಚಿಕೊಳ್ಳುತ್ತಿದ್ದಾರೆ. ಇವುಗಳ ಜೊತೆಯಲ್ಲಿ ಕೆಲವರು ಉದ್ದೇಶಪೂರ್ವಕವಾಗಿ ಸಿನಿಮಾದ ಬಗ್ಗೆ ನೆಗೆಟಿವ್ ಅಭಿಪ್ರಾಯ ಬಿತ್ತುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಥಿಯೇಟರ್‌ ಖಾಲಿ, ಜನರೇ ಇಲ್ಲ, ಕೆಟ್ಟ ಸಿನಿಮಾ ಎಂದೆಲ್ಲಾ ಕಮೆಂಟ್‌ ಹಾಕುವವರ ಬಗ್ಗೆ ನಟ ಡಾಲಿ ಧನಂಜಯ ಬೇಸರ ವ್ಯಕ್ತಪಡಿಸಿದ್ದಾರೆ.

ಡಾಲಿ ಧನಂಜಯ್‌

ಡಾಲಿ ಧನಂಜಯ್ (Daali Dhanjay) ನಟಿಸಿ, ನಿರ್ಮಾಣ ಮಾಡಿರುವ ‘ಮದರ್ ಪ್ರಾಮಿಸ್’ (Mother Promise) ಸಿನಿಮಾ ಕೆಲವೇ ದಿನಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಈಗಾಗಲೇ ಸಿನಿಮಾ ನೋಡಿರುವವರು ಇದೊಂದು ಒಳ್ಳೆಯ ಸದಭಿರುಚಿಯ ಹಾಸ್ಯ ಪ್ರಧಾನ ಸಿನಿಮಾ ಎಂದು ಮೆಚ್ಚಿಕೊಳ್ಳುತ್ತಿದ್ದಾರೆ. ಇವುಗಳ ಜೊತೆಯಲ್ಲಿ ಕೆಲವರು ಉದ್ದೇಶಪೂರ್ವಕವಾಗಿ ಸಿನಿಮಾದ ಬಗ್ಗೆ ನೆಗೆಟಿವ್ (Nagative) ಅಭಿಪ್ರಾಯ ಬಿತ್ತುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಥಿಯೇಟರ್‌ ಖಾಲಿ, ಜನರೇ ಇಲ್ಲ, ಕೆಟ್ಟ ಸಿನಿಮಾ ಎಂದೆಲ್ಲಾ ಕಮೆಂಟ್‌ ಹಾಕುವವರ ಬಗ್ಗೆ ನಟ ಡಾಲಿ ಧನಂಜಯ ಬೇಸರ ವ್ಯಕ್ತಪಡಿಸಿದ್ದಾರೆ. ಇದೀಗ ಚಿತ್ರರಂಗದಲ್ಲಿ ಇರುವ ನೆಗೆಟಿವ್ ಪ್ರಚಾರದ ಬಗ್ಗೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಡಾಲಿ ಧನಂಜಯ್‌ ಮಾತನಾಡಿ, ನಾನು 2021 ರಲ್ಲಿ ಬಡವ ರಾಸ್ಕಲ್‌ ಸಿನಿಮಾದಲ್ಲಿ ನಿರ್ಮಾಪಕನಾಗಿ ಗೆಲುವು ನೋಡಿದ್ದವನು. 2026ರಲ್ಲಿ ಎಷ್ಟೋ ಜನರ ಜೊತೆ ಕೆಲಸ ಮಾಡಿ, ಎಷ್ಟೋ ಪ್ರಯತ್ನ ಮಾಡಿದ್ದೇನೆ. ನಿರ್ಮಾಪಕನಾಗಿ ಬಡವ ರಾಸ್ಕಲ್, ಹೆಡ್ ಬುಷ್, ವಿದ್ಯಾಪತಿ, ಟಗರು ಪಲ್ಯ, ಜೆಸಿ, ಮದರ್ ಪ್ರಾಮಿಸ್ ಮಾಡಿದ್ದೇನೆ. ನನ್ನ ನಿರ್ಮಾಣದಲ್ಲಿ ಹೆಗ್ಗಣ ಮುದ್ದು ಕೊನೆಯ ಸಿನಿಮಾ ಆಗಬಹುದು’ ಎಂದು ಡಾಲಿ ಧನಂಜಯ ಹೇಳಿದ್ದಾರೆ.

ಇದನ್ನೂ ಓದಿ: Addinath Urmila divorce: 'ರಾಮಾಯಣ' ಸಿನಿಮಾ ಖ್ಯಾತಿಯ ನಟನ ಬಾಳಲ್ಲಿ ಬಿರುಗಾಳಿ; 15 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಜೋಡಿ

ನನಗೂ ಸುಸ್ತಾಗತ್ತೆ

ನನಗೂ ಸುಸ್ತಾಗತ್ತೆ. ಏನೋ ಒಂದು ಕೆಲಸಗಳು ನಡೆಯುವಾಗ, ಒಪಿನಿಯನ್‌ ಬೇರೆ. ಆದರೆ ತೊಂದರೆ ಕೊಡಬಾರದು ಅನ್ನೋ ಮೈಂಡ್‌ಸೆಟ್‌ ಆದ್ರೂ ಬೇಡವಾ? ಸಿನಿಮಾ, ಸಾಹಿತ್ಯ, ನಾಟಕ ಕನ್ನಡ ಕಟ್ಟೋ ಕೆಲಸಗಳೇ. ಚಿತ್ರರಂಗ ಅಂತ ಬಂದಾಗ, ಸಾಕಷ್ಟು ನಿರ್ದೇಶಕರು, ನಟರು ಬೇಕು. ಈ ಸಿನಿಮಾದಲ್ಲಿ ಸಾಕಷ್ಟು ಕಲಾವಿದರು ನಟಿಸಿದ್ದಾರೆ.

ಈ ಚಿತ್ರದ ಬಗ್ಗೆ ಸಮಸ್ಯೆ ಇದ್ದರೆ 50 ಜನರು ಇರುವ ಕಡೆ ಕುಳಿತುಕೊಂಡು ಅನುಭವ ಪಡೆಯಿರಿ. ಪ್ರೇಕ್ಷಕರು ನಗಲಿಲ್ಲ ಎಂದರೆ ಸಿನಿಮಾ ಚೆನ್ನಾಗಿಲ್ಲ ಅಂತ ನಾನು ಒಪ್ಪಿಕೊಳ್ಳುತ್ತೇನೆ. ಏನಾದರೂ ಮಾಡಿದಾಗ ಪಾಸಿಟಿವ್ ಆಗಿ ಜೊತೆಯಲ್ಲಿ ನಿಂತುಕೊಳ್ಳಬೇಕು. ಪ್ರತಿ ಬಾರಿ ಅದನ್ನು ಬೇರೆ ಕಡೆಗೆ ತೆಗೆದುಕೊಂಡು ಹೋಗುವುದರಲ್ಲಿ ಅರ್ಥ ಇಲ್ಲ’ ಎಂದು ಡಾಲಿ ಹೇಳಿದ್ದಾರೆ.

ಯಾವುದನ್ನೂ ನಾನು ಕಂಪ್ಲೇಟ್‌ ಮಾಡುತ್ತಿಲ್ಲ. ನಾನು ನಟನಾಗಿ ಒಳ್ಳೆಯ ಸಿನಿಮಾ ಮಾಡಬೇಕು ಅಷ್ಟೇ. ಉಳಿದಿದ್ದು ಎಕ್ಸ್‌ಟ್ರಾ. ಅದನ್ನ ಬೇರೆ ಬೇರೆ ತಿರುಗಿಸೋದು ಯಾರನ್ನೂ ಎಲ್ಲಿಯೂ ಕರೆದುಕೊಂಡು ಹೋಗಲ್ಲ. ಅದೇ ಎನರ್ಜಿ ಇಟ್ಟುಕೊಂಡು ಸಿನಿಮಾ ಮಾಡೋದು ಸರಿಯಲ್ಲ. ಇಷ್ಟ ಇಲ್ಲ ಅಂದರೆ ಸಿನಿಮಾ ನೋಡಬಾರದು. ಬಡವ ರಾಸ್ಕಲ್‌ ಸಿನಿಮಾ ಒಳ್ಳೆ ಆಗಬೇಕಾದರೆ ಕೆಲವು ನೆಗೆಟಿವಿಟಿ ಬಂದಿದ್ದವು. ಮನೆ ಮನೆಗೆ ತಲುಪಿತ್ತು ಆ ಸಿನಿಮಾ.

ಇದನ್ನೂ ಓದಿ: Pallichattambi ott: ಟೊವಿನೋ ಥಾಮಸ್ ನಟನೆಯ 'ಪಳ್ಳಿ ಚಟ್ಟಂಬಿ' ಈ ಒಟಿಟಿಯಲ್ಲಿ ಸ್ಟ್ರೀಮಿಂಗ್‌!

ಮದರ್ ಪ್ರಾಮಿಸ್ ಸಿನಿಮಾ ಉತ್ತಮ ಪ್ರದರ್ಶನ ಕಂಡಿದೆ. ನಮಗೆ ಇನ್ನೂ ಚೆನ್ನಾಗಿ ಆಗಬೇಕು. ಖಂಡಿತವಾಗಿಯೂ ಲಾಸ್ ಆಗಲ್ಲ. ಒಂದು ವೇಳೆ ಲಾಸ್ ಅಂತ ಏನಾದರೂ ಆದರೆ ನನಗೆ ಸಂಭಾವನೆ ಸಿಗಲ್ಲ ಅಷ್ಟೇ ಎಂದಿದ್ದಾರೆ.

Yashaswi Devadiga

View all posts by this author