ನಿರ್ದೇಶಕ ಆರ್ ಚಂದ್ರು ಅವರ ಆರ್ ಸಿ ಸ್ಟುಡಿಯೋಸ್ ನಿರ್ಮಾಣ ಮಾಡಿರುವ 'ಫಾದರ್' ಚಿತ್ರದ ಎಲ್ಲಾ ಕೆಲಸಗಳು ಮುಗಿದಿದ್ದು, ಈ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಸದ್ಯ 'ಫಾದರ್' ಸಿನಿಮಾದ ಥೀಮ್ ವಿಡಿಯೋ ಸಾಂಗ್‌ವೊಂದನ್ನು ರಿಲೀಸ್ ಮಾಡಲಾಗಿದೆ. ಅದನ್ನು ಬಿಡುಗಡೆ ಮಾಡಿದ್ದು ಆರ್ ಚಂದ್ರು ಅವರ ತಂದೆ ಎಂಬುದು ವಿಶೇಷ. ಹೌದು, ಈ ರೀತಿ ಹಾಡುಗಳನ್ನು, ಟೀಸರ್‌ಗಳನ್ನು ರಿಲೀಸ್ ಮಾಡಲು ಸ್ಟಾರ್‌ಗಳನ್ನು ಕರೆಯಲಾಗುತ್ತದೆ. ಆದರೆ ಈ ಬಾರಿ ಆರ್ ಚಂದ್ರು ಮುಖ್ಯ ಅತಿಥಿಯಾಗಿ ತನ್ನ ತಂದೆಯನ್ನೇ ಕರೆಸಿ, ಅವರಿಂದ ಥೀಮ್ ವಿಡಿಯೋ ಬಿಡುಗಡೆ ಮಾಡಿಸಿದ್ದು ಮೆಚ್ಚುಗೆಗೆ ಪಾತ್ರವಾಯಿತು.
'ಫಾದರ್' ಎಂದಾಗ ಪ್ರತಿಯೊಬ್ಬರಿಗೂ ನೆನಪಾಗೋದೇ ಅಪ್ಪ, ಬಾಲ್ಯದ ನೆನಪು, ನಮ್ಮ ಬದುಕು ರೂಪಿಸುವ ಜೀವ ಅಪ್ಪ, ಅಂತಹ ಅಪ್ಪನ ಕುರಿತು ಆರ್. ಚಂದ್ರು ಸಿನಿಮಾ ಮಾಡಿದ್ದಾರೆ. ಅಪ್ಪ-ಮಗನ ವ್ಯಾಲ್ಯೂ ತಿಳಿಸುವ ಫಾದರ್ ಸಿನಿಮಾ ನಿರ್ಮಾಣ ಮಾಡಿದ್ದಾರೆ.
BRAT OTT: ಸದ್ದಿಲ್ಲದೇ ಒಟಿಟಿಗೆ ಬಂದೇ ಬಿಡ್ತು ಡಾರ್ಲಿಂಗ್ ಕೃಷ್ಣ ನಟನೆಯ 'ಬ್ರ್ಯಾಟ್ ʼ! ಸ್ಟ್ರೀಮಿಂಗ್ ಎಲ್ಲಿ?
"ಫಾದರ್ ಸಿನಿಮಾವು ಭಾವುಕ ಪಯಣಕ್ಕೆ ಕರೆದೊಯ್ಯುವ, ಕಣ್ಣಂಚಲ್ಲಿ ನೀರು ತರಿಸುವ, ಹೃದಯದ ಬಡಿತ ಹೆಚ್ಚಿಸುವ, ಅಪ್ಪನ ಬೆಲೆ ತಿಳಿಸುವ, ಚಿತ್ರ ಆಗಲಿದೆ ಎನ್ನುವ ಸೂಚನೆಯೇ ಈ ಥೀಮ್ ವಿಡಿಯೋ. ಅದು ನೋಡಿದವರಿಗೆ ಗೊತ್ತಾಗುತ್ತಿದೆ. ತಂದೆಯ ಪಾತ್ರದಲ್ಲಿ ಪ್ರಕಾಶ್ ರಾಜ್, ಮಗನ ಪಾತ್ರದಲ್ಲಿ ಡಾರ್ಲಿಂಗ್ ಕೃಷ್ಣ ಮೂಡಿಬಂದಿರುವ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ" ಎಂದು ಚಿತ್ರತಂಡ ಹೇಳಿಕೊಂಡಿದೆ.
ಕೃಷ್ಣಗೆ ಅಮೃತಾ ಅಯ್ಯಂಗಾರ್ ನಾಯಕಿ
'ಲವ್ ಮಾಕ್ಟೈಲ್' ಬಳಿಕ ಡಾರ್ಲಿಂಗ್ ಕೃಷ್ಣ ಹಾಗೂ ಅಮೃತಾ ಅಯ್ಯಂಗಾರ್ ಮತ್ತೊಮ್ಮೆ ಫಾದರ್ ಸಿನಿಮಾಕ್ಕಾಗಿ ಜೊತೆಯಾಗಿದ್ದಾರೆ. 'ಟಗರು ಪಲ್ಯ' ಖ್ಯಾತಿಯ ನಟ ನಾಗಭೂಷಣ್ ಕೂಡ ಇಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೌಸಲ್ಯ ಸುಪ್ರಜಾ ರಾಮ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ನಾಗಭೂಷಣ್ ಒಟ್ಟಿಗೆ ನಟಿಸಿದ್ದರು. ಪ್ರಕಾಶ್ ರಾಜ್ ತಂದೆಯ ಪಾತ್ರ ಮಾಡಿದ್ದು, ಈ ಸಿನಿಮಾವನ್ನು ವಿವಿಧ ಭಾಷೆಗಳಲ್ಲಿ ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ಆರಂಭಿಸಿದೆ.
BRAT Movie: ಯಶಸ್ಸಿನ ಹಾದಿಯಲ್ಲಿ ಡಾರ್ಲಿಂಗ್ ಕೃಷ್ಣ ಅಭಿನಯದ ʼಬ್ರ್ಯಾಟ್ʼ ಚಿತ್ರ
'ಫಾದರ್' ಸಿನಿಮಾವನ್ನು ಮೈಸೂರು, ಧರ್ಮಸ್ಥಳ, ಮಂಗಳೂರು, ಬೆಂಗಳೂರು ಹಾಗೂ ವಾರಣಾಸಿಯಲ್ಲಿ ಚಿತ್ರೀಕರಣ ಮಾಡಲಾಗಿದೆ. ಈ ಚಿತ್ರಕ್ಕೆ ರಾಜಮೋಹನ್ ನಿರ್ದೇಶನ ಮಾಡಿದ್ದು, ಸುಜ್ಞಾನ್ ಛಾಯಾಗ್ರಹಣ ಮಾಡಿದ್ದಾರೆ. ನಕುಲ್ ಅಭಯಂಕರ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. 2026ರ ಆರಂಭದಲ್ಲಿ ಈ ಸಿನಿಮಾ ತೆರೆಗೆ ಬರುವ ನಿರೀಕ್ಷೆ ಇದೆ.