ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ಅಭಿನಯದ ಡೆವಿಲ್ ಸಿನಿಮಾ (The Devil) ಇಂದು (ಡಿ.11) ಅದ್ಧೂರಿಯಾಗಿ ತೆರೆಗೆ ಬಂದಿದೆ. ಅಭಿಮಾನಿಗಳಲ್ಲಿ ಹಬ್ಬ ಜೋರಾಗಿದೆ. ಮೆಚ್ಚಿನ ನಟನನ್ನು ನೋಡಿ ಸಖತ್ ಖುಷ್ ಆಗಿದ್ದಾರೆ. ಮುಂಜಾನೆ 6.30ರಿಂದ ಶೋಗಳು ಆರಂಭ ಆಗಿವೆ. ಎಲ್ಲಾ ಶೋಗಳು ಹೌಸ್ಫುಲ್ ಆಗಿವೆ. ಮಲ್ಟಿಪ್ಲೆಕ್ಸ್ಗಳಲ್ಲಿಯೂ (Multiplex) ಸಿನಿಮಾನ ದೊಡ್ಡ ಸಂಖ್ಯೆಯಲ್ಲಿ ವೀಕ್ಷಣೆ ಮಾಡುತ್ತಿದ್ದಾರೆ. ದರ್ಶನ್ (Darshan) ಕಟೌಟ್‌ಗೆ ಹಾಲಿನ ಅಭಿಷೇಕ ಮಾಡುತ್ತಿದ್ದಾರೆ.
ಅಬ್ಬರ ಜೋರು!
ನಟ ದರ್ಶನ್ ಅವರು ಜೈಲಿನಲ್ಲಿ ಇದ್ದಾರೆ. ಅವರ ಅನುಪಸ್ಥಿತಿಯಲ್ಲೇ ‘ದಿ ಡೆವಿಲ್’ ಸಿನಿಮಾ ಬಿಡುಗಡೆ ಆಗಿದೆ. ‘ಕಾಟೇರ’ ಸಿನಿಮಾದ ಸೂಪರ್ ಸಕ್ಸಸ್ ನಂತರ ದರ್ಶನ್ ಮಾಡಿದ ಸಿನಿಮಾ ‘ದಿ ಡೆವಿಲ್’. ಬೆಂಗಳೂರು, ಮೈಸೂರು ಮಾತ್ರವಲ್ಲದೇ ರಾಜ್ಯಾದ್ಯಂತ ಇರುವ ಚಿತ್ರಮಂದಿರಗಳಲ್ಲಿ ಕೂಡ ‘ದಿ ಡೆವಿಲ್’ ಅಬ್ಬರ ಜೋರಾಗಿದೆ.
ಈ ಹಿಂದೆ ದರ್ಶನ್ ಜೈಲು ಸೇರಿದ್ದಾಗ 'ಸಾರಥಿ' ಬಾಕ್ಸಾಫೀಸ್‌ನಲ್ಲಿ ದಾಖಲೆಗಳನ್ನೇ ಬರೆದಿತ್ತು. ಇದೀಗ ಸಿನಿಮಾಗೆ ಬರೋ ರೆಸ್ಪಾನ್ಸ್ ನೋಡಿದ್ರೆ ಬ್ಲಾಜಕ ಬಸ್ಟರ್ ಗ್ಯಾರಂಟಿ ಅಂತ ಕಮೆಂಟ್ ಮಾಡ್ತಿದ್ದಾರೆ. 'ಡೆವಿಲ್' ಸಿನಿಮಾವನ್ನು ದೊಡ್ಡ ಮಟ್ಟಕ್ಕೆ ರಿಲೀಸ್ ಮಾಡುತ್ತಿರುವುದರಿಂದ ಕಲೆಕ್ಷನ್ ಕೂಡ ಅಷ್ಟೇ ದೊಡ್ಡದಾಗಿರುತ್ತೆ ಅನ್ನೋದು ಕರ್ನಾಟಕದ ವಿತರಕರ ಲೆಕ್ಕಾಚಾರ.
ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್ ನೀಡಲಾಗಿದೆ. ಅಂದರೆ 16 ವರ್ಷದ ಮೇಲಿರುವವರು ಈ ಚಿತ್ರವನ್ನು ನೋಡಬಹುದು. ಚಿತ್ರದ ಒಟ್ಟು ಅವಧಿ 2 ಗಂಟೆ 49 ನಿಮಿಷ ಇದೆ. ( 169 ನಿಮಿಷ ) ಅಂದರೆ ಹತ್ ಹತ್ರ ಮೂರು ಗಂಟೆಯ ಸಿನಿಮಾ ಇದು.
ಯಾರೆಲ್ಲ ಇದ್ದಾರೆ?
ನರ್ತಕಿ, ಸಿದ್ದೇಶ್ವರ, ನವರಂಗ್ ಪ್ರಸನ್ನ ,ಊರ್ವಶಿ ಚಿತ್ರಮಂದಿರಗಳಲ್ಲಿ ದರ್ಶನ್ ಡೆವಿಲ್ ಕಟೌಟ್ ತಲೆ ಎತ್ತಿದೆ. ಫ್ಯಾನ್ಸ್ ಅಂತೂ ಹಬ್ಬ ಜಾತ್ರೆಯೇ ಮಾಡುತ್ತಿದ್ದಾರೆ.
ಇದನ್ನೂ ಓದಿ: Actor Darshan: ಜೈಲಿನಲ್ಲಿ ಜಗಳ ಆಗಲೇ ಇಲ್ಲ! ದರ್ಶನ್ ಪತ್ನಿಯ ವಾದ
ದರ್ಶನ್‌ಗೆ ನಾಯಕಿಯಾಗಿ ರಚನಾ ರೈ ಇದ್ದಾರೆ. ಶರ್ಮಿಳಾ ಮಾಂಡ್ರೆ ಇಂಪಾರ್ಟೆಂಟ್ ರೋಲ್ ಮಾಡಿದ್ದು, ಮಹೇಶ ಮಾಂಜ್ರೇಕರ್, ಅಚ್ಯುತ್ ಕುಮಾರ್, ಶೋಭರಾಜ್, ಚಂದು ಗೌಡ, ವಿನಯ್ ಗೌಡ, ಗಿಲ್ಲಿ ನಟ, ಗೋವಿಂದೇಗೌಡ, ರೋಜರ್ ನಾರಾಯಣ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ.