ಬೆಂಗಳೂರು, ಸೆ. 26: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ (Darshan) ಹಾಗೂ ಪವಿತ್ರ ಗೌಡ ಜೈಲು ಸೇರಿದ್ದಾರೆ. ಈ ಪ್ರಕರಣಗಳು ದಿನಕ್ಕೊಂದು ಹೊಸ ತಿರುವು ಪಡೆಯುತ್ತಿದ್ದು ದರ್ಶನ್, ಪವಿತ್ರಾ ಜೈಲಿನಲ್ಲಿಯೇ ಕಾಲ ಕಳೆಯುವಂತಾಗಿದೆ. ಪವಿತ್ರಾ ಗೌಡ ಎ1 ಆರೋಪಿ ಆಗಿದ್ದು, ಈಗಾಗಲೇ ಹಲವು ಬಾರಿ ಜಾಮೀನಿಗೆ ಅರ್ಜಿ ಹಾಕಿದ್ದಾರೆ. ಈ ನಡುವೆ ನಟ ದರ್ಶನ್ ಮತ್ತು ಪವಿತ್ರಾ ಗೌಡ ಸಂಬಂಧ ಸಾಬೀತು ಪಡಿಸಲು ಮತ್ತೊಂದು ಹಳೆಯ ವಿಡಿಯೊ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral News) ಆಗುತ್ತಿದೆ.
ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ವಿಚಾರದಲ್ಲಿ ನಟ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ 17 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ನಟಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾರೆ ಎಂಬ ಆರೋಪದ ಮೇಲೆ ರೇಣುಕಾ ಸ್ವಾಮಿಯನ್ನು ಬೆಂಗಳೂರಿಗೆ ಅಪಹರಿಸಿ ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು. ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ಗೆ ಮಾಫಿ ಸಾಕ್ಷಿಯ ಸಂಕಷ್ಟ ಎದುರಾಗಿದ್ದು, ಪ್ರದೂಷ್ ಹೇಳಿಕೆ ದಾಖಲಿಸಲು ಡೇಟ್ ಫಿಕ್ಸ್ ಆಗಿದೆ. ಸೆಪ್ಟೆಂಬರ್ 28ರಂದು ಮಾಫಿ ಸಾಕ್ಷಿ ಹೇಳಿಕೆ ದಾಖಲು ಪ್ರಕ್ರಿಯೆಗೆ ಸೆಷನ್ಸ್ ಕೋರ್ಟ್ ಸಮಯ ನಿಗದಿ ಮಾಡಿದೆ. ಇತ್ತ ಪವಿತ್ರಾ ಗೌಡ ಜಾಮೀನು ಕೋರಿ 59ನೇ ಸಿಸಿಎಚ್ ನ್ಯಾಯಾಲಯದ ಮೊರೆ ಹೋಗಿದ್ದಾರೆ.
ವಿಡಿಯೊ ನೋಡಿ:
ಈ ನಡುವೆ ನಟ ದರ್ಶನ್ ತೂಗುದೀಪ ಮತ್ತು ಪವಿತ್ರಾ ಗೌಡ ಆಪ್ತತೆಯನ್ನು ಸಾರುವ ಹಳೆಯ ವಿಡಿಯೊ ವೈರಲ್ ಆಗುತ್ತಿದೆ. ಪವಿತ್ರಾ ಗೌಡ ಮನೆಯಲ್ಲಿ 2018ರಲ್ಲಿ ಗೃಹಪ್ರವೇಶ ನಡೆದಿದ್ದು ಈ ಪೂಜೆಯ ವಿಡಿಯೊದಲ್ಲಿ ದರ್ಶನ್ ಕಾಣಿಸಿಕೊಂಡಿದ್ದಾರೆ.
ಮನುಷ್ಯರಂತೆ ವಾನರ ಪಡೆಗೂ ಓಣಂ ವಿಶೇಷ ಭೋಜನ
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಹೊಸದಾಗಿ ನಿರ್ಮಾಣ ಮಾಡಿದ್ದ ಪವಿತ್ರಾ ಗೌಡ ಅವರ ಮನೆಯ ಗೃಹಪ್ರವೇಶ ಪೂಜೆಯಲ್ಲಿ ದರ್ಶನ್ ಪಾಲ್ಗೊಂಡಿದ್ದರು. ಪೂಜೆಯ ಸಮಯದಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ಇಬ್ಬರೂ ದಂಪತಿಯಂತೆಯೇ ಹೂವಿನ ಹಾರ ಬದಲಾಯಿಸಿಕೊಂಡಿರುವ ದೃಶ್ಯ ವೈರಲ್ ಆಗಿದೆ. ಈ ಮನೆಯನ್ನು ದುಬಾರಿ ವೆಚ್ಚದಲ್ಲಿ ದರ್ಶನ್ ಅವರೇ ಕಟ್ಟಿಸಿದ್ದು ಪವಿತ್ರಾ ಗೌಡ ಅವರಿಗೆ ಕೊಡಿಸಿದ್ದರು ಎಂದು ವರದಿಯಾಗಿದೆ. ದರ್ಶನ್ ತಾಯಿ ಮೀನಾ ತೂಗುದೀಪ ಕೂಡ ಸಮಾರಂಭದಲ್ಲಿ ಭಾಗಿಯಾಗಿದ್ದರು. ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ನಡುವೆ ಇಬ್ಬರ ನಡುವಿನ ಹಳೆಯ ಆಪ್ತ ಸಂಬಂಧಕ್ಕೆ ಮತ್ತೊಂದು ಸಾಕ್ಷಿ ಸಿಕ್ಕಂತಾಗಿದೆ.