ʻಚಾಲೆಂಜಿಂಗ್ ಸ್ಟಾರ್ʼ ದರ್ಶನ್ ಅಭಿನಯದ ʻದಿ ಡೆವಿಲ್ʼ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ ಹವಾ ಮಾಡುವುದಕ್ಕೆ ರೆಡಿಯಾಗಿದೆ. ನಿನ್ನೆಯಿಂದಲೇ (ಡಿ.6) ಚಿತ್ರದ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದ್ದು, ದೊಡ್ಡಮಟ್ಟದಲ್ಲಿ ಬುಕಿಂಗ್ ಆಗುತ್ತಿದೆ. ಒಂದು ಗಂಟೆಗೆ 11 ಸಾವಿರ ಟಿಕೆಟ್‌ಗಳು ಬುಕ್ ಆಗಿರುವುದು ದಾಖಲೆ ಆಗಿದೆ. ಬಿಡುಗಡೆಗೆ ಇನ್ನೂ 4 ದಿನಗಳು ಬಾಕಿ ಇದ್ದು, ಈಗಗಾಗಲೇ ಬುಕಿಂಗ್‌ನಿಂದಲೇ 2.52 ಕೋಟಿ ರೂ. ಹಣ ನಿರ್ಮಾಪಕರಿಗೆ ಸಿಕ್ಕಿದೆ.
Actor Darshan: ದರ್ಶನ್‌ಗೆ ಜಾಮೀನು ರದ್ದು; ದಿ ಡೆವಿಲ್ ಸಿನಿಮಾಗಿದ್ಯಾ ಕಂಟಕ? ಬಿಡುಗಡೆ ಯಾವಾಗ?
ದಾಖಲೆ ಪ್ರಮಾಣದ ಬುಕಿಂಗ್
ದಿ ಡೆವಿಲ್ ಸಿನಿಮಾಗೆ ಗುರುವಾರ ಬೆಳಗ್ಗೆ 6.30ರಿಂದಲೇ ಫ್ಯಾನ್ಸ್ ಶೋಗಳು ಆರಂಭವಾಗುತ್ತಿದ್ದು, ಅದರಿಂದಲೇ ಸುಮಾರು 2.52 ಕೋಟಿ ರೂ. ಹಣ ಸಂಗ್ರಹವಾಗಿದೆಯಂತೆ. ಈಗಾಗಲೇ ಮೊದಲ ದಿನಕ್ಕೆ 50 ಸಾವಿರ ಟಿಕೆಟ್ ಸೋಲ್ಡ್ ಔಟ್ ಆಗಿದ್ದು, ಶೋಗಳ ಸಂಖ್ಯೆಯು ಹೆಚ್ಚಾಗುತ್ತಿದ್ದು, ಇದಿನ್ನೂ ಸಿಂಗಲ್ ಸ್ಕ್ರೀನ್ ಅಷ್ಟೇ. ಮಲ್ಟಿಪ್ಲಕ್ಸ್ ಬುಕಿಂಗ್ ಇನ್ನಷ್ಟೇ ಓಪನ್ ಆಗಬೇಕಿದೆ. ಬರೀ ಸಿಂಗಲ್ ಸ್ಕ್ರೀನ್‌ನ ಫ್ಯಾನ್ಸ್ ಶೋನಿಂದಲೇ 2.50 ಕೋಟಿ ರೂ. ಹರಿದುಬಂದರೆ, ಅವತ್ತಿನ ದಿನಕ್ಕೆ ಎಷ್ಟು ಗಳಿಕೆ ಆಗಬಹುದು ಎಂಬ ಲೆಕ್ಕಾಚಾರ ಆರಂಭವಾಗಿದೆ. ಸದ್ಯದ ಮಾಹಿತಿ ಪ್ರಕಾರ, ಸಿಂಗಲ್ ಸ್ಕ್ರೀನ್ ಗಳಲ್ಲಿ ಗುರುವಾರ ಬೆಳಗ್ಗೆ 6.30ರ 50ಕ್ಕೂ ಅಧಿಕ ಫ್ಯಾನ್ಸ್ ಶೋಗಳು ಸೋಲ್ಡ್ ಔಟ್ ಆಗಿವೆ.
The Devil Movie: `ಡೆವಿಲ್' ಸಿನಿಮಾದಲ್ಲಿ ಗಿಲ್ಲಿ ನಟನ ಪರ್ಫಾರ್ಮೆನ್ಸ್ ಹೇಗಿದೆ? ನಟ ಚಂದು ಗೌಡ ಮನದಾಳದ ಮಾತು!
ಇನ್ನು, ಫ್ಯಾನ್ಸ್ ಶೋಗೆ ಸುಮಾರು 500-600 ರೂ.ವರೆಗೆ ಟಿಕೆಟ್ ದರ ಇದೆ. ಮಲ್ಟಿಪ್ಲೆಕ್ಸ್ ಓಪನ್ ಆದಮೇಲೆ ಅಲ್ಲಿ ಯಾವ ರೀತಿ ಟಿಕೆಟ್ ದರ ಇರಲಿದೆ ಎಂಬುದನ್ನು ಗಮನಿಸಬೇಕಿದೆ. ಒಟ್ಟಾರೆ, ಮೊದಲ ನಾಲ್ಕು ದಿನಗಳು ದಿ ಡೆವಿಲ್ ಸಿನಿಮಾಗೆ ಬಹಳ ಮುಖ್ಯವಾಗಿದ್ದು, ಮೊದಲ ವಾರಾಂತ್ಯಕ್ಕೆ ಎಷ್ಟು ಗಳಿಕೆ ಆಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ದಿ ಡೆವಿಲ್ ಟಿಕೆಟ್ ಬುಕಿಂಗ್ ಕುರಿತ ಪೋಸ್ಟ್
ಪ್ರಕಾಶ್ ವೀರ್ ನಿರ್ದೇಶನ ಮಾಡಿರುವ ಈ ಸಿನಿಮಾಗೆ ಜೆ ಜಯಮ್ಮ ಮತ್ತು ಸರಿಗಮಪ ಸಂಸ್ಥೆ ಹಣ ಹಾಕಿವೆ. ಅದ್ದೂರಿ ಬಜೆಟ್‌ನಲ್ಲಿ ಈ ಸಿನಿಮಾ ನಿರ್ಮಾಣಗೊಂಡಿದ್ದು, ಅಜನೀಶ್ ಲೋಕನಾಥ್ ಅವರು ಸಂಗೀತ ನೀಡಿದ್ದಾರೆ. ಕಾಂತರಾಜ್ ಸಂಭಾಷಣೆ ಇರುವ ಡೆವಿಲ್ ಸಿನಿಮಾಕ್ಕೆ ಸುಧಾಕರ್ ಎಸ್ ರಾಜ್ ಛಾಯಾಗ್ರಹಣ ಮಾಡಿದ್ದಾರೆ.
ದಿ ಡೆವಿಲ್ ಟ್ರೇಲರ್ ರಿವ್ಯೂ
ಹಿಟ್ ಆಯ್ತು ಟ್ರೇಲರ್
ಸದ್ಯ ರಿಲೀಸ್ ಆಗಿರುವ ಟ್ರೇಲರ್ ಅನ್ನು ಫ್ಯಾನ್ಸ್ ಮುಗಿಬಿದ್ದು ನೋಡಿದ್ದಾರೆ. ಆಗಲೇ ಅದರ ವೀಕ್ಷಣೆಯು 10 ಮಿಲಿಯನ್ ದಾಟಿದೆ. ಈ ಚಿತ್ರದಲ್ಲಿ ರಚನಾ ರೈ ನಾಯಕಿಯಾಗಿದ್ದು, ಶರ್ಮಿಳಾ ಮಾಂಡ್ರೆ, ಮಹೇಶ್ ಮಾಂಜ್ರೇಕರ್, ಗಿಲ್ಲಿ ನಟ, ಅಚ್ಯುತ್ ಕುಮಾರ್, ಶೋಭರಾಜ್, ವಿನಯ್ ಗೌಡ, ಚಂದು ಗೌಡ ಮುಂತಾವರು ನಟಿಸಿದ್ದಾರೆ.