ದರ್ಶನ್ ಪುತ್ರ ವಿನೀಶ್ (Vineesh Birthday) ಹುಟ್ಟುಹಬ್ಬ ಇಂದು (ಅಕ್ಟೋಬರ್ 31). ಮಗನ ಹುಟ್ಟುಹಬ್ಬವನ್ನ ಮಧ್ಯರಾತ್ರಿ ಏಕಾಂಗಿಯಾಗಿ ಆಚರಿಸಿದ ವಿಜಯಲಕ್ಷ್ಮೀ (Vijayalakshmi Darhan) ಅವರು ಪುತ್ರನಿಗೆ ಕಷ್ಟಗಳ ಬಗ್ಗೆ ಕಿವಿಮಾತು ಹೇಳಿದ್ದಾರೆ. ತಾವೂ ಹಾಗೂ ಪುತ್ರ ಒಟ್ಟಿಗೆ ಇರುವ ಹಲವು ಫೋಟೊಗಳನ್ನು ಒಟ್ಟಿಗೆ ಹಂಚಿಕೊಂಡಿರುವ ವಿಜಯಲಕ್ಷ್ಮಿ, ಮಗನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುವ ಜೊತೆಗೆ ಕೆಲವು ಅಗತ್ಯ ಸಲಹೆಗಳನ್ನು ಸಹ ನೀಡಿದ್ದಾರೆ.
“ನೀನು ಉತ್ತಮ ಚಾರಿತ್ರ್ಯ, ಧೈರ್ಯ ಮತ್ತು ದಯಾಗುಣವುಳ್ಳ ವ್ಯಕ್ತಿಯಾಗಿ ಬೆಳವಣಿಗೆ ಹೊಂದು, ಜೀವನ ನಿನಗೆ ಬಹಳಷ್ಟು ಪಾಠಗಳನ್ನ ಕಲಿಸುತ್ತದೆ. ಆದ್ದರಿಂದ ಪ್ರತಿಯೊಂದು ಸವಾಲನ್ನೂ ಶಕ್ತಿಯಿಂದ ಎದುರಿಸು ಮತ್ತು ನಿನ್ನಲ್ಲಿರುವ ಒಳ್ಳೆಯತನವನ್ನು ಎಂದಿಗೂ ಕಳೆದುಕೊಳ್ಳಬೇಡ. 18ನೇ ಹುಟ್ಟುಹಬ್ಬದ ಶುಭಾಶಯಗಳು ವಿನೀಶ್ ಬಂಗಾರು” ಎಂದು ವಿಜಯಲಕ್ಷ್ಮೀ ದರ್ಶನ್ ಅವರು ಬಹಳ ವಿಶೇಷವಾಗಿ ಮಗನಿಗೆ ವಿಶ್ ಮಾಡಿದ್ದಾರೆ.
ಇದನ್ನೂ ಓದಿ: Bigg Boss kannada 13: ತಾಂಡವ್ v/s ಜಗದೀಶ್; ಯಾರಾಗ್ತಾರೆ captain?
ಬ್ಲ್ಯಾಕ್ ಅಂಡ್ ವೈಟ್ ಥೀಮ್‌ನಲ್ಲಿ ಬರ್ತ್ ಡೇ ಡೆಕೋರೇಷನ್ ಮಾಡಿಸಿ, ಮಧ್ಯ ರಾತ್ರಿ ಮಗನ ಬರ್ತ್ ಡೇ ಆಚರಿಸಿದ್ದಾರೆ ವಿಜಯಲಕ್ಷ್ಮೀ. ವಿನೀಶ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಆದರೆ ಹೆಚ್ಚಾಗಿ ಪೋಸ್ಟ್ಗಳನ್ನು ಹಂಚಿಕೊಳ್ಳೂವುದಿಲ್ಲ. ಆಗೊಮ್ಮೆ ಈಗೊಮ್ಮೆ ಕೆಲ ಯೂಟ್ಯೂಬರ್ಗಳ ವಿಡಿಯೋಗಳಲ್ಲಿ ಕಾಣಿಸಿಕೊಳ್ಳುತ್ತಾರೆ.