ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻನಾವು ಈಗಾಗಲೇ ಕಷ್ಟದ ಸಮಯವನ್ನು ಎದುರಿಸುತ್ತಿದ್ದೇವೆ..ʼ; ವಿನೀಶ್‌ ಕಾರು ಅಪಘಾತದ ಕುರಿತು ವಿಜಯಲಕ್ಷ್ಮೀ ದರ್ಶನ್‌ ಸ್ಪಷ್ಟನೆ

ನಟ ದರ್ಶನ್ ಪುತ್ರ ವಿನೀಶ್ ಕಾರು ಅಪಘಾತ ನಡೆಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ವರದಿ ಸಂಪೂರ್ಣ ಸುಳ್ಳು ಎಂದು ವಿಜಯಲಕ್ಷ್ಮಿ ದರ್ಶನ್ ಸ್ಪಷ್ಟಪಡಿಸಿದ್ದಾರೆ. ವಾಹನವನ್ನು ಚಾಲಕನೇ ಚಲಾಯಿಸುತ್ತಿದ್ದು, ಬೈಕ್ ಸವಾರರೇ ಬಂದು ಗುದ್ದಿದ್ದಾರೆ. ಮಾನವೀಯತೆಯಿಂದ ವಿನೀಶ್ ಕಾರಿನಿಂದ ಕೆಳಗಿಳಿದಿದ್ದನ್ನು ತಪ್ಪಾಗಿ ಬಿಂಬಿಸಲಾಗಿದೆ. ಎಂದು ಅವರು ಹೇಳಿದ್ದಾರೆ.

ನಟ ದರ್ಶನ್‌ ಅವರ ಪುತ್ರ ವಿನೀಶ್‌ ಪ್ರಯಾಣಿಸುತ್ತಿದ್ದ ಕಾರಿಗೆ ಬೈಕೊಂದು ಗುದ್ದಿತ್ತು. ಈ ವಿಚಾರ ಸಾಕಷ್ಟು ಸುದ್ದಿಯಾಗಿತ್ತು. ಇನ್ನೂ 18 ವರ್ಷದ ತುಂಬದ ವಿನೀಶ್‌ ಕಾರು ಚಲಾಯುಸಿ, ಬೈಕ್‌ಗೆ ಗುದ್ದಿದ್ದಾರೆ ಎಂದು ಸುದ್ದಿಯಾಗಿತ್ತು. ಅಲ್ಲದೆ, ಕಾರಿನ ಬಳಿ ಜನರು ಸೇರಿರುವ ವಿಡಿಯೋವೊಂದು ವೈರಲ್‌ ಆಗಿತ್ತು ಕೂಡ. ಆದರೆ ಅಸಲಿಗೆ ಆಗಿದ್ದೇ ಬೇರೆ ಎಂಬುದನ್ನ ವಿಜಯಲಕ್ಷ್ಮೀ ದರ್ಶನ್‌ ನೀಡಿದ ಸ್ಪಷ್ಟನೆಯಲ್ಲಿ ತಿಳಿಸಿದ್ದಾರೆ.

ವಿಜಯಲಕ್ಷ್ಮೀ ದರ್ಶನ್‌ ಹಂಚಿಕೊಂಡ ಸ್ಪಷ್ಟನೆ ಇಲ್ಲಿದೆ

"ವಿನೀಶ್ ಅವರಿಗೆ ಅಪಘಾತವಾಗಿದ್ದು, ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಕೆಲವು ಮಾಧ್ಯಮಗಳು ಪ್ರಸಾರ ಮಾಡುತ್ತಿರುವ ಸುದ್ದಿ ಸಂಪೂರ್ಣ ಸುಳ್ಳು ಎಂದು ನಾವು ಸ್ಪಷ್ಟಪಡಿಸಲು ಬಯಸುತ್ತೇವೆ. ವಿನೀಶ್ ಸಂಪೂರ್ಣವಾಗಿ ಸುರಕ್ಷಿತವಾಗಿದ್ದಾರೆ, ಆರಾಮಾಗಿದ್ದಾರೆ. ಅವರು ವಾಹನವನ್ನು ಚಲಾಯಿಸುತ್ತಿರಲಿಲ್ಲ. ಎಂದಿನಂತೆ ನಮ್ಮ ಚಾಲಕನೇ ವಾಹನ ಚಲಾಯಿಸುತ್ತಿದ್ದರು. ಒಂದು ಸಣ್ಣ ರಸ್ತೆ ಘಟನೆ ಸಂಭವಿಸಿದೆ, ದುರದೃಷ್ಟವಶಾತ್ ಬೆಂಗಳೂರಿನ ಸಂಚಾರ ದಟ್ಟಣೆಯಲ್ಲಿ (ಟ್ರಾಫಿಕ್‌ನಲ್ಲಿ) ಇಂತಹ ಘಟನೆಗಳು ಸಾಮಾನ್ಯ. ʻಇದರಲ್ಲಿ ನಿಮ್ಮದೇನೂ ತಪ್ಪಿಲ್ಲʼ ಎಂದು ಒಪ್ಪಿಕೊಂಡ ಎದುರು ಕಡೆಯವರು, ಕ್ಷಮೆಯನ್ನೂ ಕೇಳಿದ್ದಾರೆ" ಎಂದು ವಿಜಯಲಕ್ಷ್ಮೀ ದರ್ಶನ್‌ ತಿಳಿಸಿದ್ದಾರೆ.

‘ಬಾಸ್’ ಚಿತ್ರದ ರಿಲೀಸ್‌ಗೆ ಮತ್ತೆ ಕಾನೂನು ಸಂಕಷ್ಟ; ಹೈಕೋರ್ಟ್ ಮೆಟ್ಟಿಲೇರಿದ ದರ್ಶನ್ - ವಿಜಯಲಕ್ಷ್ಮೀ!

ಕಷ್ಟದ ಸಮಯವನ್ನು ಎದುರಿಸುತ್ತಿದ್ದೇವೆ

"ಬೈಕ್‌ನಲ್ಲಿದ್ದ ಸವಾರರು ಸುರಕ್ಷಿತವಾಗಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ವಿನೀಶ್ ಕೇವಲ ಕಾರಿನಿಂದ ಕೆಳಗಿಳಿದಿದ್ದರು. ದುರದೃಷ್ಟವಶಾತ್, ಆ ಕೆಲವು ಕ್ಷಣಗಳನ್ನು ತಪ್ಪಾಗಿ ಅರ್ಥೈಸಿ, ಸಂಪೂರ್ಣವಾಗಿ ದಾರಿ ತಪ್ಪಿಸುವ ರೀತಿಯಲ್ಲಿ ಬಿಂಬಿಸಲಾಗಿದೆ. ಒಂದು ಕುಟುಂಬವಾಗಿ ನಾವು ಈಗಾಗಲೇ ಕಷ್ಟದ ಸಮಯವನ್ನು ಎದುರಿಸುತ್ತಿದ್ದೇವೆ, ಇಂತಹ ಪರಿಶೀಲಿಸದ ಮತ್ತು ಪ್ರಚೋದನಾತ್ಮಕ ಸುದ್ದಿಗಳ ಹರಡುವಿಕೆಯು ನಮ್ಮ ನೋವು ಮತ್ತು ಆತಂಕವನ್ನು ಮತ್ತಷ್ಟು ಹೆಚ್ಚಿಸುತ್ತದೆ" ಎಂದು ಬೇಸರ ವಿಜಯಲಕ್ಷ್ಮೀ ದರ್ಶನ್‌ ವ್ಯಕ್ತಪಡಿಸಿದ್ದಾರೆ.

ದರ್ಶನ್‌ ಮಗ ವಿನೀಶ್‌ ಇದ್ದ ಕಾರು ಆಕ್ಸಿಡೆಂಟ್‌ ಆಗಿದ್ದು ಹೇಗೆ?



ಸುಳ್ಳು ವರದಿಗಳನ್ನು ಯಾರೂ ನಂಬಬೇಡಿ

"ವ್ಯಕ್ತಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಅನಗತ್ಯ ತೊಂದರೆ ಉಂಟುಮಾಡುವ ಯಾವುದೇ ಮಾಹಿತಿಯನ್ನು ಪ್ರಕಟಿಸುವ ಅಥವಾ ಪ್ರಸಾರ ಮಾಡುವ ಮುನ್ನ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಾಗಿ ನಾವು ಪ್ರತಿಯೊಬ್ಬರಲ್ಲೂ, ವಿಶೇಷವಾಗಿ ಮಾಧ್ಯಮ ಸಂಸ್ಥೆಗಳಲ್ಲಿ ಪ್ರಾಮಾಣಿಕವಾಗಿ ವಿನಂತಿಸುತ್ತೇವೆ. ಇಂತಹ ಸುಳ್ಳು ವರದಿಗಳನ್ನು ಯಾರೂ ನಂಬಬೇಡಿ ಮತ್ತು ಹಂಚಿಕೊಳ್ಳಬೇಡಿ ಎಂದು ನಾವು ವಿನಂತಿಸುತ್ತೇವೆ" ಎಂದು ವಿಜಯಲಕ್ಷ್ಮಿ ದರ್ಶನ್ ತಿಳಿಸಿದ್ದಾರೆ.

Actor Darshan: ನಿಮ್ಮ ಡಿ ಬಾಸ್‌ ಮಾನಸಿಕವಾಗಿ ಸ್ಟ್ರಾಂಗ್ ಇದ್ದಾರೆ; ದೊಡ್ಡ ಅಪ್ಡೇಟ್ ಕೊಟ್ಟ ವಿಜಯಲಕ್ಷ್ಮೀ

ಈ ಮಧ್ಯೆ ಅಪಘಾತ ಆಗಿದ್ದೇಗೆ ಎಂಬುದಕ್ಕೆ ತಾವು ಪ್ರಯಾಣಿಸುತ್ತಿದ್ದ ಕಾರಿನ ಡ್ಯಾಶ್‌ಕ್ಯಾಮ್‌ನ ವಿಡಿಯೋವನ್ನು ವಿನೀಶ್‌ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ತಿರುವುವೊಂದರಲ್ಲಿ ಬರುವಾಗ ಎದುರಿಗೆ ಬಂದ ಬೈಕ್‌ ಸವಾರರು ಕಾರಿಗೆ ಗುದ್ದಿರುವುದು ಸ್ಪಷ್ಟವಾಗಿ ಕಂಡಿದೆ.