Actor Darshan: ಕಾಲೆಳೆಯಲು ಹಲವರಿದ್ದರೆ, ಕಾಪಾಡಲು ದೇವರಿದ್ದಾನೆ; ಮತ್ತೆ ಪೋಸ್ಟ್ ಮಾಡಿ ವಿರೋಧಿಗಳಿಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ಹಾಗೂ ಪ್ರಥಮ್ ಸಿಡಿದೆದ್ದಿದ್ದಾರೆ. ಇದೆಲ್ಲದರ ನಡುವೆ ಪತ್ನಿ ವಿಜಯಲಕ್ಷ್ಮೀ ದರ್ಶನ್ ಪರ ನಿಂತಿದ್ದಾರೆ. ‘’ಹೆಚ್ಚು ಜನರು ನಿಮ್ಮನ್ನು ಕೆಳಕ್ಕೆ ತಳ್ಳಲು ಪ್ರಯತ್ನಿಸಿದರೆ, ದೇವರು ನಿಮ್ಮನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯುತ್ತಾನೆ. ದೇವರು ನಿಮ್ಮೆಲ್ಲರನ್ನು ಆಶೀರ್ವದಿಸಲಿ’’ ಎಂದು ಬರೆದುಕೊಂಡಿದ್ದಾರೆ.


ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ಜಾಮೀನಿನ ಮೇಲೆ ಹೊರಗಿರುವ ನಟ ದರ್ಶನ್, ಅಸ್ಸಾಂನ ಗುವಾಹಟಿಯಲ್ಲಿರುವ ಪ್ರಸಿದ್ಧ ಕಾಮಾಕ್ಯ ದೇವಿ ದೇವಸ್ಥಾನಕ್ಕೆ ನಟ ದರ್ಶನ್ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದಾರೆ. ಈ ಹಿಂದೆ ದರ್ಶನ್ ಪತ್ನಿ ವಿಜಯ ಲಕ್ಷ್ಮಿ (Vijayalakshmi Darshan) ಅವರು ಈ ಹಿಂದೆ ದರ್ಶನ್ ಅವರ ಬಿಡುಗಡೆಗಾಗಿ ಕಾಮಾಕ್ಯ ದೇವಿ ದರ್ಶನವನ್ನು ಪಡೆದು ವಿಶೇಷ ಪೂಜೆ ಸಲ್ಲಿಸಿದ್ದರು. ಇದೀಗ ಹರಕೆ ತೀರಿಸಲು ದರ್ಶನ್ ಅಲ್ಲಿಗೆ ತೆರಳಿದ್ದರು. ವಿಜಯ ಲಕ್ಷ್ಮಿ ಇದೀಗ ದರ್ಶನ್ ವಿರುದ್ಧದ ಆರೋಪಗಳಿಗೆ ಟಾಂಗ್ ಕೊಡಲು ಪೋಸ್ಟ್ ಒಂದನ್ನು ಹಾಕಿದ್ದಾರೆ.
ದರ್ಶನ್ ಫ್ಯಾನ್ಸ್ ವಿರುದ್ಧ ರಮ್ಯಾ ಹಾಗೂ ಪ್ರಥಮ್ ಸಿಡಿದೆದ್ದಿದ್ದಾರೆ. ಇದೆಲ್ಲದರ ನಡುವೆ ಪತ್ನಿ ವಿಜಯಲಕ್ಷ್ಮೀ ದರ್ಶನ್ ಪರ ನಿಂತಿದ್ದಾರೆ. ಈ ಕುರಿತು ಪೋಸ್ಟ್ ಮಾಡಿರುವ ವಿಜಯ ಲಕ್ಷ್ಮಿ ತುಳಿಯಲು ಯತ್ನಿಸಿದವರಿಗೆ ತಿರುಗೇಟು ನೀಡಿದ್ದಾರೆ. ಕಾಮಾಕ್ಯ ದೇಗುಲದಲ್ಲಿ ಪತಿ ದರ್ಶನ್ ಜೊತೆ ಕ್ಲಿಕ್ಕಿಸಿಕೊಂಡ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ವಿಜಯಲಕ್ಷ್ಮೀ, ‘’ಹೆಚ್ಚು ಜನರು ನಿಮ್ಮನ್ನು ಕೆಳಕ್ಕೆ ತಳ್ಳಲು ಪ್ರಯತ್ನಿಸಿದರೆ, ದೇವರು ನಿಮ್ಮನ್ನು ಉನ್ನತ ಸ್ಥಾನಕ್ಕೆ ಕರೆದೊಯ್ಯುತ್ತಾನೆ. ದೇವರು ನಿಮ್ಮೆಲ್ಲರನ್ನು ಆಶೀರ್ವದಿಸಲಿ’’ ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ದರ್ಶನ್‌ರನ್ನ ತುಳಿಯಲು ಯತ್ನಿಸುತ್ತಿರುವವರಿಗೆ ಮಾರ್ಮಿಕವಾಗಿ ಉತ್ತರ ನೀಡಿದ್ದಾರೆ.

ದರ್ಶನ್ ಫ್ಯಾನ್ಸ್ ಹಾಗೂ ನಟಿ ರಮ್ಯಾ ನಡುವಿನ ಸಮರ ಜೋರಾಗಿಯೇ ಇದೆ. ರೇಣುಕಾ ಸ್ವಾಮಿ ಕೊಲೆಗೆ ನ್ಯಾಯ ಸಿಗಬೇಕು ಎಂದು ಪೋಸ್ಟ್ ಮಾಡಿದ್ದ ರಮ್ಯಾಗೆ ದರ್ಶನ್ ಫ್ಯಾನ್ಸ್ ಅಶ್ಲೀಲವಾಗಿ ಮೆಸೇಜ್ ಮಾಡಿದ್ದರು. ಈ ಕುರಿತು ನಟಿ ಸೈಬರ್ ಕ್ರೈಂ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ರೇಣಕಾಸ್ವಾಮಿ ಮಾಡಿದ ಮೇಸೇಜ್‌ಗೂ ದರ್ಶನ್ ಅಭಿಮಾನಿಗಳ ಮೆಸೇಜ್‌ಗೂ ಯಾವುದೇ ವ್ಯತ್ಯಾಸ ಇಲ್ಲ ಎಂದಿದ್ದರು. ಇದು ದರ್ಶನ್ ಅಭಿಮಾನಿಗಳನ್ನು ಕೆರಳಿಸಿತ್ತು.
ಈ ಸುದ್ದಿಯನ್ನೂ ಓದಿ: Actress Ramya: ದರ್ಶನ್ ಅಭಿಮಾನಿಗಳ ವಿರುದ್ಧದ ರಮ್ಯಾ ದೂರು ತನಿಖೆ ಸಿಸಿಬಿಗೆ
ದೂರು ದಾಖಲಾದ ಬಳಿಕ ವಿಜಯ ಲಕ್ಷ್ಮಿ ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿದ್ದರು. "ಮೂರ್ಖನನ್ನು ಅವನ ಮಾತಿನಿಂದ ಗುರುತಿಸಲಾಗುತ್ತದೆ.. ಅದೇ ರೀತಿ ಬುದ್ಧಿವಂತನನ್ನು ಮೌನದಿಂದ ಗುರುತಿಸಲಾಗುತ್ತದೆ" ಎಂದು ಬುದ್ಧನ ಮಾತನ್ನು ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ಮಾಡಿದ್ದರು. ನಟಿ ರಕ್ಷಿತಾ ಕೂಡ ಪೋಸ್ಟ್ ಹಾಕಿ ದರ್ಶನ್‌ಗೆ ಸಪೋರ್ಟ್ ಮಾಡಿದ್ದರು.