ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಅಲ್ಲು ಅರ್ಜುನ್‌ ನಟನೆಯ ʻರಾಕಾʼ ಚಿತ್ರಕ್ಕಾಗಿ ದೀಪಿಕಾ ಪಡುಕೋಣೆ ಪಡೆದ ಸಂಭಾವನೆ ಎಷ್ಟು?

Deepika Padukone Remuneration: ಅಲ್ಲು ಅರ್ಜುನ್ ಹಾಗೂ ಅಟ್ಲಿ ಕಾಂಬಿನೇಷನ್‌ನ 'ರಾಕಾ' ಚಿತ್ರಕ್ಕಾಗಿ ದೀಪಿಕಾ ಪಡುಕೋಣೆ ದುಬಾರಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದ್ದು, ಇದು ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ನಟಿಯೊಬ್ಬರಿಗೆ ನೀಡಲಾದ ಅತೀ ದೊಡ್ಡ ಮೊತ್ತವಾಗಿದೆಯಂತೆ.

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ಮಾಸ್ ಡೈರೆಕ್ಟರ್ ಅಟ್ಲಿ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಪ್ಯಾನ್ ವರ್ಲ್ಡ್‌ ಸಿನಿಮಾ 'ರಾಕಾ' (Raaka) ಸದ್ಯ ಭಾರತೀಯ ಚಿತ್ರರಂಗದಲ್ಲಿ ಹಾಟ್ ಟಾಪಿಕ್ ಆಗಿದೆ. ಇತ್ತೀಚೆಗೆ ಅಲ್ಲು ಅರ್ಜುನ್ ಹುಟ್ಟಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾದ ಈ ಸಿನಿಮಾದ ಟೈಟಲ್ ಮತ್ತು ಫಸ್ಟ್ ಲುಕ್ ರಿಲೀಸ್‌ ಆಗಿ, ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸುತ್ತಿದೆ. ಈ ಸಿನಿಮಾದ ಮೇಲಿನ ಕ್ರೇಜ್ ಹೆಚ್ಚಾಗಲು ಇದರಲ್ಲಿ ನಾಯಕಿಯಾಗಿ ನಟಿಸುತ್ತಿರುವ ದೀಪಿಕಾ ಪಡುಕೋಣೆ ಕೂಡ ಕಾರಣ. ಅಂದಹಾಗೆ, ಈ ಸಿನಿಮಾಕ್ಕಾಗಿ ದೀಪಿಕಾ ದುಪ್ಪಟ್ಟು ಸಂಭಾವನೆ ಪಡೆಯುತ್ತಿದ್ದಾರೆ.

25 ಕೋಟಿ ರೂ. ಸಂಭಾವನೆ ಪಡೆಯುತ್ತಿರುವ ದೀಪಿಕಾ

ಬಾಲಿವುಡ್‌ ವಲಯದಲ್ಲಿ ದೀಪಿಕಾಗೆ ಡಿಮ್ಯಾಂಡ್ ಕಮ್ಮಿ ಆಗಿದೆ ಎಂಬ ಮಾತುಗಳು ಕೇಳಿಬಂದರೂ, ತಮ್ಮ ಸಂಭಾವನೆ ಮತ್ತು ಬೇಡಿಕೆಯಿಂದಲೇ ಸದ್ದು ಮಾಡುತ್ತಿದ್ದಾರೆ. ಹೌದು, 'ರಾಕಾ' ಸಿನಿಮಾದಲ್ಲಿ ನಟಿಸಲು ದೀಪಿಕಾ ಬರೋಬ್ಬರಿ 25 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎಂದು ಚರ್ಚೆಯಾಗುತ್ತಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಇಷ್ಟೊಂದು ದುಬಾರಿ ಸಂಭಾವನೆ ಪಡೆಯುತ್ತಿರುವ ಏಕೈಕ ನಟಿ ದೀಪಿಕಾ ಎಂಬ ಮಾತು ಕೇಳಿಬಂದಿದೆ.

Ranveer Singh and Deepika: ಅಂಬಾನಿ ನಿವಾಸದ ಗಣೇಶ ಚತುರ್ಥಿ ಆಚರಣೆಯಲ್ಲಿ ದೀಪಿಕಾ-ರಣವೀರ್ ದಂಪತಿ ಭಾಗಿ; ಕ್ಯೂಟ್‌ ಲುಕ್‌ಗೆ ಫ್ಯಾನ್ಸ್‌ ಫಿದಾ

ಪ್ರಿಯಾಂಕಾ ಚೋಪ್ರಾಗೆ ವಾರಣಾಸಿ ಸಿನಿಮಾಕ್ಕಾಗಿ 30 ಕೋಟಿ ರೂ. ಸಂಭಾವನೆ ನೀಡಲಾಗುತ್ತದೆಯಂತೆ. ಆದರೆ ಪ್ರಿಯಾಂಕಾ ಈಗ ವಿದೇಶಿ ನಟಿಯಾಗಿ ಹೆಚ್ಚು ಗಮನಸೆಳೆದಿದ್ದಾರೆ. ಸದ್ಯ ಭಾರತೀಯ ಸಿನಿಮಾಗಳಲ್ಲೇ ಹೆಚ್ಚು ಸಕ್ರಿಯವಾಗಿರುವ ನಟಿಯೊಬ್ಬರಿಗೆ ಸಿಕ್ಕಿರುವ ದುಬಾರಿ ಮೊತ್ತದ ಸಂಭಾವನೆ ಎಂಬ ಕಾರಣಕ್ಕೆ ದೀಪಿಕಾ ಸುದ್ದಿಯಾಗಿದ್ದಾರೆ. ಅಂದಹಾಗೆ, ರಾಕಾ ಸಿನಿಮಾದ ಬಜೆಟ್ಟೇ 800 ಕೋಟಿ ರೂ. ಎಂಬ ಮಾತಿದೆ.

Deepika Padukone: ದೀಪಿಕಾ ಪಡುಕೋಣೆ ನನ್ನ ಲಕ್ಕಿ ಚಾರ್ಮ್! ಹೊಸ ಸಿನಿಮಾ ಅನೌನ್ಸ್‌ ಮಾಡುತ್ತಲೇ ನಟಿಯನ್ನ ಹೊಗಳಿದ ಅಟ್ಲೀ

ಎರಡು ಸಿನಿಮಾಗಳಿಂದ ದೀಪಿಕಾ ಔಟ್!‌

ಈ ನಡುವೆ ದೀಪಿಕಾ ಪಡುಕೋಣೆ ಕೆಲವು ವಿವಾದಗಳ ಮೂಲಕ ಸುದ್ದಿಯಲ್ಲಿದ್ದರು. ಪ್ರಭಾಸ್ ನಟನೆಯ 'ಸ್ಪಿರಿಟ್' ಮತ್ತು 'ಕಲ್ಕಿ 2' ಚಿತ್ರಗಳಿಂದ ದೀಪಿಕಾ ಅವರನ್ನು ಕೈಬಿಡಲಾಗಿತ್ತು. ಇದಕ್ಕೆ ಮುಖ್ಯ ಕಾರಣ ದೀಪಿಕಾ ಹಾಕಿದ ನಿಯಮಗಳು ಎಂದು ಹೇಳಲಾಗಿತ್ತು. ಸದ್ಯ ಹೆಣ್ಣು ಮಗುವಿನ ತಾಯಿಯಾಗಿರುವ ಅವರು ದಿನಕ್ಕೆ ಕೇವಲ 8 ಗಂಟೆಗಳ ಕಾಲ ಮಾತ್ರ ಕೆಲಸ ಮಾಡುವುದಾಗಿ ಮತ್ತು ಅದಕ್ಕಿಂತ ಹೆಚ್ಚಿನ ಸಮಯ ನೀಡಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದರಂತೆ.

ಜೊತೆಗೆ ಸಂಭಾವನೆ ವಿಷಯದಲ್ಲೂ ಅವರು ಪಟ್ಟು ಹಿಡಿದಿದ್ದರಿಂದ ನಿರ್ಮಾಣ ಸಂಸ್ಥೆಗಳೊಂದಿಗೆ ಭಿನ್ನಾಭಿಪ್ರಾಯ ತಲೆದೋರಿತ್ತು. ಆ ಕಾರಣಕ್ಕೆ ಅವರನ್ನು ಆ ಎರಡು ಸಿನಿಮಾಗಳಿಂದ ಕೈಬಿಡಲಾಯ್ತು ಎಂಬ ಟಾಕ್‌ ಇದೆ. ಇದರ ನಡವೆಯೇ ಈಗ ದಾಖಲೆ ಸಂಭಾವನೆ ಪಡೆದುಕೊಂಡು, ತಮ್ಮ ಕ್ರೇಜ್ ಕಿಂಚಿತ್ತೂ ಕಡಿಮೆಯಾಗಿಲ್ಲ ಎಂಬುದನ್ನು ದೀಪಿಕಾ ಸಾಬೀತುಪಡಿಸಿದ್ದಾರೆ.

ಇನ್ನು, 'ರಾಕಾ' ಸಿನಿಮಾದಲ್ಲಿ ಅಲ್ಲು ಅರ್ಜುನ್‌ ಅವರು ಹಿಂದೆಂದೂ ನೋಡಿರದ ರೀತಿಯಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಸನ್ ಪಿಕ್ಚರ್ಸ್ ಲಾಂಛನದಲ್ಲಿ ಕಲಾನಿಧಿ ಮಾರನ್ ಸುಮಾರು ಭಾರಿ ಬಜೆಟ್‌ನಲ್ಲಿ ನಿರ್ಮಿಸುತ್ತಿರುವ ಈ ಚಿತ್ರವು ಒಂದು ಸೈನ್ಸ್ ಫಿಕ್ಷನ್ ಡ್ರಾಮಾ ಆಗಿದೆ.