ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Deepika Padukone: ಮಗಳ 2ನೇ ಬರ್ತ್‌ಡೇಗೆ ಬೇಬಿ ಬಂಪ್‌ ಫೋಟೋ ಹಂಚಿಕೊಂಡ ದೀಪಿಕಾ ಪಡುಕೋಣೆ

Deepika Padukone: ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಮುದ್ದಾದ ಫೋಟೋ ಶೂಟ್ ಹಂಚಿಕೊಂಡಿದ್ದಾರೆ. ಇದರಲ್ಲಿ ಬೇಬಿ ದುವಾ ಕಾಣಿಸಿಕೊಂಡಿದ್ದರು. ಖ್ಯಾತ ನಟಿ ದೀಪಿಕಾ ಪಡುಕೋಣೆ ಅವರು 2ನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಈಗ ಅವರು ಪತಿ ರಣವೀರ್ ಸಿಂಗ್ ಹಾಗೂ ಮಗಳು ದುವಾ (Dua)a ಜೊತೆಗಿರುವ ವಿಶೇಷ ಫೋಟೋ ಗಮನ ಸೆಳೆದಿದೆ.

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ (Deepika Padukone) ಮತ್ತು ರಣವೀರ್ ಸಿಂಗ್ (Ranveer Singh) ತಮ್ಮ ಮುದ್ದಾದ ಫೋಟೋ ಶೂಟ್ ಹಂಚಿಕೊಂಡಿದ್ದಾರೆ. ಇದರಲ್ಲಿ ಬೇಬಿ ದುವಾ ಕಾಣಿಸಿಕೊಂಡಿದ್ದರು. ಖ್ಯಾತ ನಟಿ ದೀಪಿಕಾ ಪಡುಕೋಣೆ ಅವರು 2ನೇ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ಈಗ ಅವರು ಪತಿ ರಣವೀರ್ ಸಿಂಗ್ ಹಾಗೂ ಮಗಳು ದುವಾ (Dua)a ಜೊತೆಗಿರುವ ವಿಶೇಷ ಫೋಟೋ ಗಮನ ಸೆಳೆದಿದೆ.

ಬೇಬಿ ಬಂಪ್ ಫೋಟೋದಲ್ಲಿ ದೀಪಿಕಾ!

ಈ ಲುಕ್‌ನಲ್ಲಿ ಲೇಸ್‌ವರ್ಕ್‌ನೊಂದಿಗೆ ಫಿಟ್ ಆಗಿರುವ, ಹೈ-ನೆಕ್ ಟಾಪ್ ಧರಿಸಿದ್ದರು. ಕಪ್ಪು-ಬಿಳುಪಿನ ಫೋಟೋಗಳಲ್ಲಿ, ರಣವೀರ್ ಸಿಂಗ್ ಅವರು ದೀಪಿಕಾ ಅವರ ಬೇಬಿ ಬಂಪ್ ಅನ್ನು ಪ್ರೀತಿಯಿಂದ ಹಿಡಿದುಕೊಂಡಿದ್ದಾರೆ. ದೀಪಿಕಾ ಅವರು ಲೇಸ್ ಉಡುಪಿನಲ್ಲಿ ಮಿಂಚುತ್ತಿದ್ದರೆ, ರಣವೀರ್ ಸಿಂಪಲ್ ವೈಟ್ ಶರ್ಟ್ ಮತ್ತು ಟ್ರೌಸರ್ ಧರಿಸಿ ನಗುಮುಖದಿಂದ ಕಂಗೊಳಿಸುತ್ತಿದ್ದಾರೆ.ʼ

ಇದನ್ನೂ ಓದಿ: Amrita Mahotsav: ವಿಷ್ಣುವರ್ಧನ್ ಅಮೃತ ಮಹೋತ್ಸವಕ್ಕೆ ಬಹುಭಾಷಾ ತಾರೆ ರೋಜಾ ಆಗಮನ

ದುವಾ ಅವರ ಮುದ್ದಾದತನಕ್ಕೆ ಅಭಿಮಾನಿಗಳು ಮೂಕವಿಸ್ಮಿತರಾಗಿದ್ದಾರೆ. ರಣವೀರ್ ಮತ್ತು ದೀಪಿಕಾ ತಮ್ಮ ಮಗಳನ್ನು ಪ್ರೀತಿಯಿಂದ ಹೊಗಳುತ್ತಿರುವುದು ಕಂಡುಬಂದಿದೆಮತ್ತೊಂದು ಫೋಟೋದಲ್ಲಿ ಇಬ್ಬರ ನಡುವೆ ಮಗಳು ದುವಾ ನಿಂತುಕೊಂಡಿದ್ದು, ತುಂಟತನದಿಂದ ತನ್ನ ಮುಖವನ್ನು ಮುಚ್ಚಿಕೊಂಡಿದ್ದಾಳೆ. ದುವಾಳನ್ನು ಕ್ಯಾಮೆರಾ ಕಣ್ಣಿನಿಂದ ದೂರವೇ ಇರಿಸಿದ್ದ ಈ ದಂಪತಿ, ಇದೀಗ ಫ್ಯಾಮಿಲಿ ಫೋಟೋವನ್ನು ಹಂಚಿಕೊಂಡು ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ.

ರಣವೀರ್ ಸಿಂಗ್, ‘ಪುಟ್ಟ ದುವಾ ಮತ್ತು ನಮ್ಮ ಹೃದಯಗಳು ಮತ್ತಷ್ಟು ದೊಡ್ಡದಾಗುತ್ತಿವೆ. ನಿಮ್ಮೆಲ್ಲರ ಹಾರೈಕೆಗಳಿಗೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ. ದೀಪಿಕಾ ಮತ್ತು ರಣವೀರ್ ದಂಪತಿಗೆ 2024ರ ಸೆಪ್ಟೆಂಬರ್ 8ರಂದು ಮೊದಲ ಹೆಣ್ಣು ಮಗು (ದುವಾ ಪಡುಕೋಣೆ ಸಿಂಗ್) ಜನಿಸಿದಳು.



ಇದನ್ನೂ ಓದಿ: Bigg Boss Kannada 13: ಅಧಿಕಪ್ರಸಂಗ ಮಾತನಾಡಬೇಡ; ಗಗನ್-ಮಂಜು ಜಗಳಕ್ಕೆ 'BASE' ಜೋರಾಗೇ ಇದೆ

ಎರಡನೇ ಮಗುವಿನ ಆಗಮನದ ನಿರೀಕ್ಷೆಯ ನಡುವೆಯೂ ದೀಪಿಕಾ ಪಡುಕೋಣೆ ಅವರು ತಮ್ಮ ವೃತ್ತಿಪರ ಕೆಲಸಗಳನ್ನು ಮುಂದುವರಿಸಿದ್ದರು. ಶಾರುಖ್ ಖಾನ್ ಮತ್ತು ಸುಹಾನಾ ಖಾನ್ ಅಭಿನಯದ, ಸಿದ್ಧಾರ್ಥ್ ಆನಂದ್ ನಿರ್ದೇಶನದ ‘ಕಿಂಗ್’ ಸಿನಿಮಾದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ.

Yashaswi Devadiga

View all posts by this author