ಇತ್ತೀಚೆಗೆ ಪ್ರೆಗ್ನೆಂಟ್ ಆಗಿರುವ ಸುದ್ದಿಯನ್ನು ಘೋಷಿಸಿದ ನಟಿ ದೀಪಿಕಾ ಪಡುಕೋಣೆ (Deepika Padukone ), ಸದ್ಯ ಸಿನಿಮಾ ಕೆಲಸಗಳಿಲ್ಲಿಯೂ ಬ್ಯುಸಿಯಾಗಿದ್ದಾರೆ. ಪ್ರಸ್ತುತ ಶಾರುಖ್ ಖಾನ್ (Sharukh Khan) ಅಭಿನಯದ ಕಿಂಗ್ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಸದ್ಯ ದಕ್ಷಿಣ ಆಫ್ರಿಕಾದಲ್ಲಿ ಶೂಟಿಂಗ್ ನಡೆಯುತ್ತಿದೆ ಎನ್ನಲಾಗುತ್ತಿದೆ . ಈಗ ಫೋಟೋಗಳು ಲೀಕ್ (leak) ಕೂಡ ಆಗಿವೆ. ದೀಪಿಕಾ ಮತ್ತು ಶಾರುಖ್ ಕೈ ಕೈ ಹಿಡಿದು ನಡೆಯುತ್ತಿರುವ ಫೋಟೋ ವೈರಲ್ ಆಗಿದೆ.
ಈ ಚಿತ್ರಗಳನ್ನು ಯಾವಾಗ ತೆಗೆಯಲಾಗಿದೆ ಎಂಬುದು ಸ್ಪಷ್ಟವಾಗಿಲ್ಲವಾದರೂ, ಶುಕ್ರವಾರ ವೈರಲ್ ಆಗಿದೆ.
ಚಿತ್ರದಲ್ಲಿ, ದೀಪಿಕಾ ಹೂವಿನ ಪ್ರಿಂಟೆಡ್ ಗೌನ್‌ನಲ್ಲಿ ಸೆಟ್‌ನಲ್ಲಿ ನಡೆಯುತ್ತಿರುವುದು ಕಂಡುಬರುತ್ತದೆ. ಅದೇ ರೀತಿಯ ಶರ್ಟ್‌ನಲ್ಲಿ ಶಾರುಖ್ ಕೂಡ ಸೊಗಸಾಗಿ ಕಂಡಿದ್ದಾರೆ.
ಇದನ್ನೂ ಓದಿ: Amruthadhaare Serial: ಸದ್ದಿಲ್ಲದೇ ಎಂಗೇಜ್ ಆದ ʻಅಮೃತಧಾರೆʼ ಸೀರಿಯಲ್ ನಟಿ ದಿಯಾ!
ಶಾರುಖ್ ಅಭಿಮಾನಿಗಳಿಂದ ಕೂಡ ಪ್ರಶಂಸೆ ಪಡೆದರು. ಚಿತ್ರದಲ್ಲಿ ಅವರ ಲುಕ್ ಅನ್ನು ಉಲ್ಲೇಖಿಸಿ ಒಬ್ಬರು ಬರೆದಿದ್ದಾರೆ, "60 ವರ್ಷ ವಯಸ್ಸಿನಲ್ಲೂ ಶಾರುಖ್ ಅದ್ಭುತವಾಗಿ ಕಾಣುತ್ತಿದ್ದಾರೆ. CGI ಗಳು ಅವರಿಗೆ ಅಗತ್ಯವಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.
ಬಾಲಿವುಡ್ ಹಂಗಾಮಾ ವರದಿಯ ಪ್ರಕಾರ, ಇದು 350 ಕೋಟಿ ರೂ. ಬಜೆಟ್‌ನೊಂದಿಗೆ ಭಾರತದ ಅತ್ಯಂತ ದುಬಾರಿ ಆಕ್ಷನ್ ಚಿತ್ರವಾಗಿದೆ. ಸುಹಾನಾ ಖಾನ್, ಅಭಿಷೇಕ್ ಬಚ್ಚನ್, ಅನಿಲ್ ಕಪೂರ್, ಜಾಕಿ ಶ್ರಾಫ್, ಅರ್ಷದ್ ವಾರ್ಸಿ, ಸೌರಭ್ ಶುಕ್ಲಾ, ಅಭಯ್ ವರ್ಮಾ, ಜೈದೀಪ್ ಅಹ್ಲಾವತ್, ರಾಘವ್ ಜುಯಲ್, ರಾಣಿ ಮುಖರ್ಜಿ ಮತ್ತು ದೀಪಿಕಾ ಪಡುಕೋಣೆ ಇದ್ದಾರೆ.
ನಟಿ ಕಿಂಗ್ ಮತ್ತು ಅವರ ಇನ್ನೊಂದು ಚಿತ್ರ ರಾಕಾ ಚಿತ್ರೀಕರಣವನ್ನು ಮುಂದುವರಿಸುತ್ತಾರೆ . ಸಿದ್ಧಾರ್ಥ್ ಆನಂದ್ ನಿರ್ದೇಶನದ ಮತ್ತು ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ಮಾರ್ಫ್ಲಿಕ್ಸ್ ಪಿಕ್ಚರ್ಸ್ ನಿರ್ಮಿಸಿದ ಕಿಂಗ್ , ಡಿಸೆಂಬರ್ 24, 2026 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಸಾಮಾನ್ಯವಾಗಿ ಪ್ರೆಗ್ನೆಂಟ್ ಆದಾಗ ಮನೆಯಲ್ಲೇ ವಿಶ್ರಾಂತಿ ಪಡೆಯಲು ಎಲ್ಲರೂ ನಿರ್ಧರಿಸುತ್ತಾರೆ. ಆದರೆ, ದೀಪಿಕಾ ಪಡುಕೋಣೆ ಆ ರೀತಿ ಅಲ್ಲ. ಅವರು ಒಪ್ಪಿಕೊಂಡ ಸಿನಿಮಾ ಕೆಲಸಗಳನ್ನು ಮುಗಿಸುವ ನಿರ್ಧಾರಕ್ಕೆ ಬಂದಿದ್ದಾರೆ. ‘ ಅಲ್ಲು ಅರ್ಜುನ್ ಅವರು ‘ರಾಕಾ’ ಸಿನಿಮಾದಲ್ಲಿ ನಟಿಸಿದ್ದಾರೆ. ಅಟ್ಲಿ ನಿರ್ದೇಶನ ಇರುವ ಈ ಚಿತ್ರಕ್ಕೆ ತಮಿಳಿನ ಸನ್ ಪಿಕ್ಚರ್ಸ್ ಬಂಡವಾಳ ಹೂಡಿದೆ.
ಇದನ್ನೂ ಓದಿ: Bellamkonda Sai Sreenivas: ತಿರುಪತಿಯಲ್ಲಿ ಹಸೆಮಣೆ ಏರಿದ ಸ್ಟಾರ್ ನಟ
‘ರಾಕಾ’ ಸಿನಿಮಾದಲ್ಲಿ ಸಾಕಷ್ಟು ಆ್ಯಕ್ಷನ್ ದೃಶ್ಯಗಳಿವೆ. ಈ ಆ್ಯಕ್ಷನ್ ದೃಶ್ಯಗಳನ್ನು ಅವರಿಂದ ಮಾಡಿಸಲು ತಂಡ ರೆಡಿ ಇಲ್ಲ. ಹೀಗಾಗಿ, ಬಾಡಿ ಡಬಲ್ ಮೊರೆ ಹೋಗಿದೆ.