ಮುಂಬೈ: ಹೀ ಮ್ಯಾನ್ ಎಂದೇ ಪ್ರಸಿದ್ದಿ ಪಡೆದ ಹಿರಿಯ ನಟ ಧರ್ಮೇಂದ್ರ (Dharmendra) ಅವರು ಬಾಲಿವುಡ್ ನ ಬಹುಬೇಡಿಕೆ ನಟರಲ್ಲಿ ಒಬ್ಬರಾಗಿದ್ದಾರೆ. ತಮ್ಮ 89ನೇ ವಯಸ್ಸಿನಲ್ಲಿ ಮಂಗಳವಾರ ನಿಧನರಾಗಿದ್ದಾರೆ ಅನ್ನೋ ವಿಚಾರ ಇಂದು ವ್ಯಾಪಕವಾಗಿ ಹಬ್ಬಿತ್ತು. ಆದರೆ, ಅವರ ಕುಟುಂಬ ಈ ಸುದ್ದಿಯನ್ನು ನಿರಾಕರಿಸಿದೆ.. ಸದ್ಯ ಅವರು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಸಿನಿಮಾಗಳ ಬಗ್ಗೆ ಹಾಗೂ ವೈಯಕ್ತಿಕ ಜೀವನದ ಕುರಿತಾಗಿ ಕುತೂಹಲ ಹೆಚ್ಚಾಗಿದೆ. ಸದ್ಯ ಅವರ ಆರೋಗ್ಯದ ಬಗ್ಗೆ ವದಂತಿಗಳು ಹರಡುತ್ತಿದ್ದಂತೆ, ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ನಡುವೆ, ಇಬ್ಬರಲ್ಲಿ ಯಾರು ಹೆಚ್ಚು ಶ್ರೀಮಂತರು? ಎನ್ನುವ ಪ್ರಶ್ನೆ ಹೆಚ್ಚಿನವರಲ್ಲಿ ಮೂಡಿದೆ. ಹಾಗಿದ್ರೆ ಇವರಿಬ್ಬರ ಬಳಿ ಇರುವ ಆಸ್ತಿ ಮೌಲ್ಯ ಎಷ್ಟು?
ಮ್ಯಾಗಜೀನ್‌ನಲ್ಲಿ ಒಂದರ ಜಾಹೀರಾತಿನಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶದ ಬಗ್ಗೆ ತಿಳಿದ ಧರ್ಮೆಂದ್ರ ಅವರು ಆಡಿಷನ್ ನೀಡುವ ಮೂಲಕ ಅವರನ್ನು ದೊಡ್ಡ ಮಟ್ಟಕ್ಕೆ ಹೀರೋ ಆಗು ವಂತೆ ಮಾಡಿತು. 1960 ರಲ್ಲಿ 'ದಿಲ್ ಭಿ ತೇರಾ ಹಮ್ ಭಿ ತೇರೆ' ಮೂಲಕ ಸಿನಿ ಜೀವನವನ್ನು ಪ್ರಾರಂಭಿಸಿ ಬಳಿಕ 'ಶೋಲೆ', ' ಸೀತಾ ಔರ್ ಗೀತಾ', ' ಶರಾಬಿ', 'ಯಾದೋನ್ ಕಿ ಭಾರತ್', 'ಮೇರಾ ಗಾಂವ್ ಮೇರಾ ದೇಶ್', ಅನೇಕ ಸಿನಿಮಾದಲ್ಲಿ ನಟಿಸಿ ಖ್ಯಾತಿ ಗಳಿಸಿದ್ದಾರೆ.
ಅದರಲ್ಲೂ ಧರ್ಮೆಂದ್ರ ಮತ್ತು ಹೇಮಾ ಮಾಲಿನಿ ಹಿಂದಿ ಚಿತ್ರ ರಂಗದ ಅತ್ಯಂತ ಪ್ರಭಾವಶಾಲಿ ಜೋಡಿಗಳಲ್ಲಿ ಒಬ್ಬರಾಗಿದ್ದಾರೆ, ಅವರ ತೆರೆಯ ಮೇಲಿನ ಕೆಮಿಸ್ಟ್ರಿ ಮಾತ್ರವಲ್ಲದೆ, ರಾಜಕೀಯ, ವ್ಯವಹಾರ ಮತ್ತು ಸಾಮಾಜಿಕ ಜೀವನದಲ್ಲೂ ಸಹ ಪ್ರಸಿದ್ಧರಾಗಿದ್ದಾರೆ. ಈ ನಡುವೆ ಅವರಿಬ್ಬರ ಆದಾಯ ಆಸ್ತಿ ಮೌಲ್ಯದ ಬಗ್ಗೆಯೂ ಕ್ಯುರಾಸಿಟಿ ಹೆಚ್ಚಾಗಿದೆ.
2024 ರ ಮಥುರಾ ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಹೇಮಾ ಮಾಲಿನಿ ಸಲ್ಲಿಸಿದ ಅಫಿಡವಿಟ್ ಪ್ರಕಾರ, 129 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ. ಇದರಲ್ಲಿ ಏಳು ಐಷಾರಾಮಿ ಕಾರುಗಳನ್ನು ಒಳಗೊಂಡಿದ್ದು 4.3 ಕೋಟಿ ರೂ.ಗಳಿಗಿಂತ ಹೆಚ್ಚು ಮೌಲ್ಯದ್ದಾಗಿದೆ. ಮತ್ತು ಮುಂಬೈ ಮತ್ತು ಮಥುರಾದಲ್ಲಿ ಬಹು ವಸತಿ ಮತ್ತು ವಾಣಿಜ್ಯ ಆಸ್ತಿಗಳನ್ನು ಇವರು ಹೊಂದಿದ್ದಾರೆ..ಇನ್ನು ಚಲನಚಿತ್ರಗಳು, ಬ್ರ್ಯಾಂಡ್ ಪ್ರಮೋಟ್, ನೃತ್ಯ ಪ್ರದರ್ಶನಗಳು ಮತ್ತು ಸಂಸದರಾಗಿ (MP) ವಿವಿಧ ಮೂಲಗಳಿಂದ ಹಣ ಗಳಿಸುತ್ತಾರೆ. ಅದೇ ರೀತಿ 2.96 ಕೋಟಿ ಮೌಲ್ಯದ ಪೂರ್ವಜರ ಆಸ್ತಿಯನ್ನೂ ಹೊಂದಿದ್ದಾರೆ.
ಇದನ್ನು ಓದಿ:Gatha Vaibhava Movie: ಸಿಂಪಲ್ ಸುನಿ ಸಿನಿಮಾಗೆ ಕಿಚ್ಚ ಸುದೀಪ್ ಸಾಥ್! ಟ್ರೈಲರ್ ಔಟ್
ಮತ್ತೊಂದೆಡೆ, ಧರ್ಮೇಂದ್ರ ಅವರ ಆದಾಯವು ದುಪ್ಪಟ್ಟು ಆಗಿದೆ ಎಂದು ತಿಳಿದು ಬಂದಿದೆ. ಮೂಲಗಳ ಪ್ರಕಾರ ಅವರ ಸಂಪತ್ತನ್ನು ರೂ. 335 ಕೋಟಿಯಿಂದ ರೂ. 450 ಕೋಟಿ ಗಳವರೆಗೆ ಅಂದಾಜಿಸಲಾಗಿದೆ. ಆರು ದಶಕಗಳಲ್ಲಿ 300 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿರುವ ನಟ, ರಾಯಲ್ಟಿ, ಬ್ರಾಂಡ್ ಮತ್ತು ರಿಯಲ್ ಎಸ್ಟೇಟ್ ಉದ್ಯಮಗಳಿಂದ ಆದಾಯ ಗಳಿಸುತ್ತಲೇ ಇದ್ದಾರೆ. ಇವರು ಲೋನಾವಾಲದಲ್ಲಿ 100 ಎಕರೆ ತೋಟದ ಮನೆ, ಮುಂಬೈನಲ್ಲಿ ಹಲವಾರು ಬಂಗಲೆಗಳು ಮತ್ತು ಐಷಾರಾಮಿ ಕಾರುಗಳ ಸಂಗ್ರಹವನ್ನು ಹೊಂದಿದ್ದಾರೆ. ಅದೇ ರೀತಿ ಬಹು ರಿಯಲ್ ಎಸ್ಟೇಟ್ ಯೋಜನೆಗಳಲ್ಲಿ ಹೂಡಿಕೆ ಮಾಡಿದ್ದಾರೆ. ಅಂದಾಜಿನ ಪ್ರಕಾರ, ಧರ್ಮೇಂದ್ರ ಅವರು ಹೇಮಾ ಮಾಲಿನಿ ಅವರಿಗಿಂತ ದೊಡ್ಡ ಪ್ರಮಾಣದ ಸಂಪತ್ತನ್ನು ಹೊಂದಿದ್ದಾರೆ ಧರ್ಮೇಂದ್ರ ಅವರು ಹೇಮಾ ಮಾಲಿನಿ ಅವರಿಗಿಂತ ಹೆಚ್ಚು ಶ್ರೀಮಂತರಾಗಿದ್ದಾರೆ.