ಧ್ರುವ ಸರ್ಜಾ (Dhruva Sarja) ಅವರ 7ನೇ ಸಿನಿಮಾ 'ಕ್ರಿಮಿನಲ್' . ರಚಿತಾ ರಾಮ್ (Rachita Ram) ನಾಯಕಿಯಾಗಿ ಧ್ರುವ ಜೊತೆ ಕಾಣಿಸಿಕೊಳ್ಳಲಿದ್ದಾರೆ. ವಿಶೇಷ ಅಂದರೆ ಈ ಸಿನಿಮಾ ಉತ್ತರ ಕರ್ನಾಟಕದ ಸೊಗಡಿನಲ್ಲಿ ಮೂಡಿಬರುತ್ತಿದೆ. ನೈಜ ಘಟನೆ ಆಧರಿಸಿದೆ (Real Story) ಎಂದು ಸ್ವತಃ ಚಿತ್ರತಂಡವೇ ಹೇಳಿಕೊಂಡಿದೆ. 'ಕ್ರಿಮಿನಲ್' ಸಿನಿಮಾ ಚಿತ್ರೀಕರಣ ಈಗ ಭರದಿಂದ ಸಾಗುತ್ತಿದೆ. ಧ್ರುವ ಸರ್ಜಾ ಶಿರಸಿ (Sirsi), ಶಿವಮೊಗ್ಗ, ಹಾವೇರಿಯಲ್ಲಿ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ವಿಡಿಯೋಗಳು (Social Media) ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಏನಿದು ಪಾತ್ರ?
ಧ್ರುವ ಸರ್ಜಾ ಅವರು ಶಿರಸಿಯಲ್ಲಿ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಮೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಸೇರಿದ್ದರು. ನಟ ಹೋದಲೆಲ್ಲ ಜನ ಸಾಗರವೇ ಇತ್ತು. ಮಾಹಿತಿ ಪ್ರಕಾರ ಶಿವಮೊಗ್ಗ, ಹಾವೇರಿ ಹಾಗೂ ಶಿರಸಿಯಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ ಎನ್ನಲಾಗಿದೆ. ಈ ಸಿನಿಮಾದಲ್ಲಿ ನಟ ಧ್ರುವ ಸರ್ಜಾ ಅವರು 'ಹೋರಿ ಶಿವ' ಪಾತ್ರದಲ್ಲಿ ನಟಿಸಲಿದ್ದಾರೆ.
ಇದನ್ನೂ ಓದಿ: Ranabaali: ʻರಣಬಾಲಿ' ನೈಜ ಘಟನೆ ಆಧಾರಿತ ಸಿನಿಮಾವೇ? ವಿಜಯ್–ರಶ್ಮಿಕಾ ಮಂದಣ್ಣ ಮೂವಿ ಇತಿಹಾಸ ಇದು
ಸ್ಟೋರಿ ಏನು?
‘ಕೆರೆಬೇಟೆ’ ಸಿನಿಮಾ ಖ್ಯಾತಿಯ ರಾಜ್ ಗುರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾಗೆ ರಚಿತಾ ರಾಮ್ ನಾಯಕಿ. ‘ಭರ್ಜರಿ’ ಸಿನಿಮಾದಲ್ಲಿ ರಚಿತಾ ಹಾಗೂ ಧ್ರುವ ನಟಿಸಿದ್ದರು. ಈಗ 8 ವರ್ಷಗಳ ಬಳಿಕ ಈ ಜೋಡಿ ಮತ್ತೆ ತೆರೆಮೇಲೆ ಒಂದಾಗುತ್ತಿದೆ.
ವೈರಲ್ ವಿಡಿಯೋ
ಚಿತ್ರತಂಡ ಹೇಳಿಕೊಂಡಂತೆ ಹೋರಿ ಹಿಡಿಯುವ ಪೈಲ್ವಾನ್ ಪಾತ್ರ ಅವರದ್ದಾಗಿದೆ. ಉತ್ತರ ಕರ್ನಾಟಕ ಸೊಗಡಲ್ಲಿ ಸಿನಿಮಾ ಮೂಡಿ ಬರಲಿದೆ. ಮನಿಶ್ ಶಾ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್ನಲ್ಲಿ ನಡೆದ ಪ್ರೇಮ ಕಥೆ ಬಳಕೆ ಮಾಡಲಾಗಿದೆ.ಈ ಚಿತ್ರದಲ್ಲಿ ತಾರಾ ಅವರು ಧ್ರುವ ತಾಯಿ ಪಾತ್ರ ಮಾಡುತ್ತಿದ್ದಾರೆ.
ಸಿನಿಮಾದಲ್ಲಿ ಉತ್ತರ ಕರ್ನಾಟಕ ಭಾಷೆ ಬಳಕೆ ಆಗಲಿದೆ. ಚಂದನ್ ಶೆಟ್ಟಿ ಈ ಚಿತ್ರಕ್ಕೆ ಸಂಗೀತ ಕೊಡುತ್ತಿದ್ದಾರೆ. ವೈದಿ ಕ್ಯಾಮರಾವರ್ಕ್ ಮಾಡುತ್ತಿದ್ದಾರೆ. ರವಿ ವರ್ಮ ಹಾಗೂ ವಿಕ್ರಮ್ ಮೋರ್ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ.
ಇದನ್ನೂ ಓದಿ: Ravi Teja: 'ಇರುಮುಡಿ' ಹೊತ್ತು ಬಂದ ಮಾಸ್ ಮಹಾರಾಜ; 77ನೇ ಸಿನಿಮಾ ಫಸ್ಟ್ ಲುಕ್ ಔಟ್
ಏಕಕಾಲಕ್ಕೆ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ
ಇದಕ್ಕೂ ಮುಂಚೆ ಸಿನಿಮಾದ ಮೊದಲ ದೃಶ್ಯ ಸಾಕಷ್ಟು ಸದ್ದು ಮಾಡಿತ್ತು. ಕ್ರಿಮಿನಲ್ ಚಿತ್ರದ ಮೊದಲ ದೃಶ್ಯ ರಗಡ್ ಆಗಿಯೇ ಇತ್ತು. ರಚಿತಾ ರಾಮ್ ಜುಟ್ಟು ಹಿಡಿದು ಧ್ರುವ ಸರ್ಜಾ ಡೈಲಾಗ್ ಹೇಳುತ್ತಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಏಕಕಾಲಕ್ಕೆ 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರಲಿದೆ. 'ಅದ್ಧೂರಿ', 'ಬಹದ್ದೂರ್' ಹಾಗೂ 'ಭರ್ಜರಿ' ಹೀಗೆ ಧ್ರುವ ನಟಿಸಿದ ಮೊದಲ 3 ಸಿನಿಮಾಗಳು ಹಿಟ್ ಆಗಿತ್ತು.ಬಳಿಕ 2022ರಲ್ಲಿ ಜೋಗಿ ಪ್ರೇಮ್ ನಿರ್ದೇಶನದ 'ಕೆಡಿ' ಚಿತ್ರವನ್ನು ಧ್ರುವ ಆರಂಭಿಸಿದ್ದರು.