ಧುರಂಧರ್ 2 (Dhurandhar 2) ಭಾರತದಲ್ಲಿ ಹಿಂದಿ ಪ್ರೀಮಿಯರ್ ಶೋ ಹೊರತಾಗಿ ಇತರೆ ಭಾಷೆಯ ಎಲ್ಲ ಪ್ರೀಮಿಯರ್ ಶೋ ಪ್ರದರ್ಶನವನ್ನು ರದ್ದು ಮಾಡಲಾಗಿದೆ. ಪ್ಯಾನ್-ಇಂಡಿಯಾ ಚಿತ್ರವಾಗಿ ಸ್ಥಾನ ಪಡೆದಿರುವ ಈ ಸಿನಿಮಾ ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಡಬ್ ಮಾಡಿದ ಆವೃತ್ತಿಗಳೊಂದಿಗೆ ಹಿಂದಿಯಲ್ಲಿ (Hindi) ಬಿಡುಗಡೆಯಾಗಲು ನಿರ್ಧರಿಸಲಾಗಿತ್ತು. ಕೊನೆಯ ಕ್ಷಣದ ತಾಂತ್ರಿಕ ದೋಷಗಳಿಂದಾಗಿ ಹಠಾತ್ ಪ್ರೀಮಿಯರ್ ಶೋ ರದ್ದು ಮಾಡಲಾಗಿದೆ (preview shows get cancelled) ಎಂದು ವರದಿಯಾಗಿದೆ.
ತೆಲುಗು ಮತ್ತು ತಮಿಳು ಫ್ಯಾನ್ಸ್‌ಗೆ ಬೇಸರ
ಭಾರತೀಯ ಗೂಢಚಾರ ಜಸ್ಕಿರತ್ ಸಿಂಗ್ ರಂಗಿ ಪಾತ್ರದಲ್ಲಿ ರಣವೀರ್ ಸಿಂಗ್ ನಟಿಸಿದ್ದು, ಎರಡನೇ ಭಾಗವು ಅಕ್ಷಯ್ ಖನ್ನಾ ನಿರ್ವಹಿಸಿದ ರೆಹಮಾನ್ ದಕೈತ್ ಅವರ ಮರಣದ ನಂತರ ಮಾಬ್-ಬಾಸ್ ಹಮ್ಜಾ ಅಲಿ ಮಜಾರಿ ಪಾತ್ರದ ಬಗ್ಗೆಯೇ ಕಥೆ ಇರಲಿದೆ.
ಇದನ್ನೂ ಓದಿ: Bhagyalakshmi Serial Kannada: ಸಿಡಿಯಲಿದೆ ದ್ವೇಷದ ಜ್ವಾಲಾಮುಖಿ! ತಾಂಡವ್ ಅಸಲಿ ಮುಖ ರಿವೀಲ್
ಹಲವಾರು ಚಿತ್ರಮಂದಿರಗಳು ಸಂಜೆ 5 ಗಂಟೆಗೆ ನಿಗದಿಯಾಗಿದ್ದ ತೆಲುಗು ಮತ್ತು ತಮಿಳು ಮತ್ತು ತೆಲುಗು ಆವೃತ್ತಿಗಳ ವಿತರಣೆಯಲ್ಲಿನ ವಿಳಂಬ ಮತ್ತು ಕೊನೆಯ ಕ್ಷಣದ ತಾಂತ್ರಿಕ ದೋಷಗಳಿಂದಾಗಿ ಹಠಾತ್ ರದ್ದತಿಗೆ ಕಾರಣವಾಯಿತು ಎಂದು ವರದಿ ಆಗಿದೆ.
ತೆಲುಗು ಮಾತನಾಡುವ ಪ್ರದೇಶಗಳಲ್ಲಿಯೂ ಇದೇ ರೀತಿಯ ಅಡಚಣೆಗಳು ವರದಿಯಾಗಿವೆ. ನಿರ್ದೇಶಕ ಆದಿತ್ಯ ಧರ್ ಅವರ ಇತ್ತೀಚಿನ ಪೋಸ್ಟ್‌ನಿಂದ ಅಭಿಮಾನಿಗಳು ತಮ್ಮ ಹತಾಶೆಯನ್ನು ವ್ಯಕ್ತಪಡಿಸಿದರು. ಅಮೆರಿಕದಲ್ಲಿ ಸಿನಿಮಾದ ಎಲ್ಲ ಪೇಯ್ಡ್ ಪ್ರೀಮಿಯರ್ ಶೋ ರದ್ದು ಮಾಡಲಾಗಿದೆ ಎನ್ನಲಾಗುತ್ತಿದೆ.
ಚೆನ್ನೈನ ಜಿಕೆ ಸಿನಿಮಾಸ್‌ನ ವ್ಯವಸ್ಥಾಪಕ ನಿರ್ದೇಶಕ ರೂಬನ್ ಮತಿವಾನನ್, ಧುರಂಧರ್ 2 ರ ತಮಿಳು ಆವೃತ್ತಿ ಇಂದು ತಮ್ಮ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಚೆನ್ನೈನ ಕಮಲಾ ಸಿನಿಮಾಸ್‌ನ ನಿರ್ದೇಶಕ ವಿಷ್ಣು ಕಮಲ್ ಅವರ ಪ್ರಕಾರ, ಧುರಂಧರ್ 2 ತಯಾರಕರು ಚಿತ್ರದ ತಮಿಳು ಆವೃತ್ತಿಯನ್ನು ಬಿಡುಗಡೆ ಮಾಡಿಲ್ಲ. ಈ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿಯೂ ಪೋಸ್ಟ್ ಹಂಚಿಕೊಂಡಿದ್ದಾರೆ.
ಮಾರ್ಚ್ 19 ರಂದು ವಿಶ್ವದಾದ್ಯಂತ ಬಿಡುಗಡೆ
ಧುರಂಧರ್ 2 , ಧುರಂಧರ್: ದಿ ರಿವೆಂಜ್ , ನಾಳೆ ಮಾರ್ಚ್ 19 ರಂದು ಥಿಯೇಟರ್‌ಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಇದರಲ್ಲಿ ಆರ್ ಮಾಧವನ್, ಅರ್ಜುನ್ ರಾಂಪಾಲ್, ಸಂಜಯ್ ದತ್, ಸಾರಾ ಅರ್ಜುನ್, ಡ್ಯಾನಿಶ್ ಪಾಂಡೋರ್, ಗೌರವ್ ಗೆರಾ ಮತ್ತು ರಾಕೇಶ್ ಬೇಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇದರ ಜೊತೆಗೆ ರಾಶಿ ಖನ್ನಾ ನಟನೆಯ ‘ಉಸ್ತಾದ್ ಭಗತ್ ಸಿಂಗ್ ಅಸಲಿಗೆ ಮುಂದಿನ ವಾರ ಬಿಡುಗಡೆ ಆಗಬೇಕಿತ್ತು. ಆದರೆ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆ ದಿನಾಂಕವನ್ನು ಕೊನೆಯ ಕ್ಷಣದಲ್ಲಿ ಬದಲಾವಣೆ ಮಾಡಿದ ಕಾರಣಕ್ಕೆ, ‘ಉಸ್ತಾದ್ ಭತ್ ಸಿಂಗ್’ ಮಾರ್ಚ್ 19ರಂದೇ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಿತು.
ಇದನ್ನೂ ಓದಿ: Amruthadhaare Serial: ಗೌತಮ್ ಎಚ್ಚರಿಕೆಗೆ ಜೇಡಿಗೆ ಇಳಿದಿದೆ ಬೆವರಿನ ಹನಿ!
'ಧುರಂಧರ್ - ಪಾರ್ಟ್ 1' ಚಿತ್ರವು ವಿಶ್ವಾದ್ಯಂತ 1300 ಕೋಟಿ ರೂ. ಗಳಿಸಿ ಅತಿದೊಡ್ಡ ಯಶಸ್ಸು ಕಂಡಿತ್ತು ಮತ್ತು 75 ದಿನಗಳಿಗೂ ಹೆಚ್ಚು ಕಾಲ ಪ್ರದರ್ಶನ ಕಂಡಿತ್ತು. ಇದೀಗ ಎಲ್ಲರ ಕಣ್ಣು ಪಾರ್ಟ್ 2 ಮೇಲಿದೆ. ಇದರ ಅವಧಿ ಭರ್ತಿ 3 ಗಂಟೆ 55 ನಿಮಿಷ ಇರುವುದು ಇನ್ನೊಂದು ದಾಖಲೆ.