ಆದಿತ್ಯ ಧರ್ ಅವರ 'ಧುರಂಧರ್ ಭಾಗ 2' (Dhurandhar 2) ಚಿತ್ರದ ಬಹುನಿರೀಕ್ಷಿತ ಟೀಸರ್‌ಗಾಗಿ ಕಾಯುವ ಸಮುಯ ಬಹುತೇಕ ಮುಗಿದಿದೆ. ಏಕೆಂದರೆ 'ಧುರಂಧರ್: ದಿ ರಿವೆಂಜ್' ಚಿತ್ರದ ಅಧಿಕೃತ ಟೀಸರ್ (Teaser) ಇಂದೇ (ಫೆಬ್ರವರಿ 3, 2026) ಬಿಡುಗಡೆ ಮಾಡಲು ಸಿದ್ಧರಾಗಿದ್ದಾರೆ. ರಣವೀರ್ ಸಿಂಗ್ (Ranveer Singh) ಚಿತ್ರದ ಹೊಸ ಪೋಸ್ಟರ್ (Poster) ಜೊತೆಗೆ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ.
ಹೊಸ ಪೋಸ್ಟರ್‌ನಲ್ಲಿ, ರಣವೀರ್ ಸಿಂಗ್ ಕಪ್ಪು ಜಾಕೆಟ್ ಧರಿಸಿ ಮಳೆಯಲ್ಲಿ ಒದ್ದೆಯಾಗಿ ರಗಡ್ ಆಗಿ ಕಾಣುತ್ತಿದ್ದಾರೆ. ಕೆಂಪು ಥೀಮ್‌ನ ಪೋಸ್ಟರ್ ತೀವ್ರವಾಗಿ ಕಾಣುತ್ತಿದ್ದು, ಉಗ್ರ ವಾತಾವರಣವನ್ನು ಸೃಷ್ಟಿಸುತ್ತಿದೆ.
ಧುರಂಧರ್ ಭಾಗ 2 ಟೀಸರ್ ರಿಲೀಸ್ ಯಾವಾಗ?
ರಣವೀರ್ ಸಿಂಗ್ ಅವರ ಧುರಂಧರ್ 2 ಚಿತ್ರದ ಟೀಸರ್ ಇಂದು ಫೆಬ್ರವರಿ 3, 2026 ರಂದು ಮಧ್ಯಾಹ್ನ 12:12 ಕ್ಕೆ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಬಿಡುಗಡೆಯಾಗಲಿದೆ. ಟೀಸರ್ ಬಿಡುಗಡೆ ಸಮಯವನ್ನು ಪ್ರಕಟಿಸಿದ ರಣವೀರ್ ಸಿಂಗ್, ಧುರಂಧರ್: ದಿ ರಿವೆಂಜ್ ಟೀಸರ್ ಇಂದು ಮಧ್ಯಾಹ್ನ 12:12 ಕ್ಕೆ ಬಿಡುಗಡೆಯಾಗಲಿದೆ, ಮಾರ್ಚ್ 19, 2026 ರಂದು ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ" ಎಂದು ಬರೆದಿದ್ದಾರೆ.
ಇದನ್ನೂ ಓದಿ: Sitara Ghattamaneni : ವೇದಿಕೆ ಮೇಲೆ ಸಿತಾರಾ ರ‍್ಯಾಂಪ್ ವಾಕ್; ಮಹೇಶ್ ಬಾಬು ಮಗಳ ಲುಕ್‌ಗೆ ಫ್ಯಾನ್ಸ್ ಫಿದಾ
ಬ್ಲಾಕ್‌ಬಸ್ಟರ್ ಚಿತ್ರ ಧುರಂಧರ್‌ನ ಎರಡನೇ ಕಂತು ಧುರಂಧರ್: ದಿ ರಿವೆಂಜ್ ಮಾರ್ಚ್ 19, 2026 ರಂದು ಹಿಂದಿ, ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಸೇರಿದಂತೆ ಬಹು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
ಧುರಂಧರ್ 1 ಒಟಿಟಿಯಲ್ಲಿ
ಡಿಸೆಂಬರ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ 1200 ಕೋಟಿ ರೂ.ಗಳನ್ನು ದಾಟಿದ ನಂತರ, ರಣವೀರ್ ಸಿಂಗ್ ಅವರ ಧುರಂಧರ್ ಜನವರಿ 30 ರಂದು OTT ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಯಿತು. ಗಮನಾರ್ಹವಾಗಿ, ಈ ಚಿತ್ರವು ಹಿಂದಿ, ತಮಿಳು ಮತ್ತು ತೆಲುಗು ಎಂಬ ಮೂರು ಭಾಷೆಗಳಲ್ಲಿ 12:00 ಗಂಟೆಗೆ ಬಿಡುಗಡೆಯಾಗಿದೆ.
ಥಿಯೇಟರ್‌ಗೆ ಹೋಲಿಸಿದರೆ ಒಟಿಟಿಯಲ್ಲಿ ಚಿತ್ರದ ರನ್-ಟೈಮ್ ಅನ್ನು 9 ರಿಂದ 10 ನಿಮಿಷಗಳಷ್ಟು ಕಡಿಮೆ ಮಾಡಲಾಗಿದೆ. ಎರಡನೆಯ ಕಾರಣವೆಂದರೆ ಒಟಿಟಿಯಲ್ಲಿ ಚಿತ್ರದ ಪ್ರಿಂಟ್. ಒಟಿಟಿಯಲ್ಲಿ ಅಪ್ಲೋಡ್ ಆದ ಪ್ರಿಂಟ್ನ ಕಲರಿಂಗ್ ಬಗ್ಗೆ ಅನೇಕರು ದೂರಿದ್ದರು.ಆಡಿಯೋ ಬಗ್ಗೆಯೂ ದೂರಿತ್ತು. ಈ ಎಲ್ಲಾ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ, ನೆಟ್‌ಫ್ಲಿಕ್ಸ್ ಈಗ ಅದರಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಿದೆ.
ಇದನ್ನೂ ಓದಿ: Dhurandhar OTT: ಅಂತೂ ಒಟಿಟಿಗೆ ಬಂತು 'ಧುರಂಧರ್' ; ಇದೊಂದು ಕಾರಣಕ್ಕೆ ಅಭಿಮಾನಿಗಳು ಆಕ್ರೋಶ
ಈ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ತನ್ನ ಮೊದಲ ಮೂರು ವಾರಗಳಲ್ಲಿ 500 ಕೋಟಿ ರೂ.ಗಳನ್ನು ದಾಟಿದೆ. ಇಲ್ಲಿಯವರೆಗೆ, ಈ ಚಿತ್ರವು ವಿಶ್ವಾದ್ಯಂತ 1300 ಕೋಟಿ ರೂ.ಗಳಿಗೂ ಹೆಚ್ಚು ಸಂಗ್ರಹಿಸಿದೆ. ‘ಧುರಂಧರ್’ ಚಿತ್ರದ ಒಟಿಟಿ ಬಿಡುಗಡೆಯ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಇತ್ತು. ಆದ್ದರಿಂದ, ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆದ ಕೇವಲ 24 ಗಂಟೆಗಳಲ್ಲಿ ಚಿತ್ರವು ಟ್ರೆಂಡಿಂಗ್ ಅಲ್ಲಿ ಮೊದಲ ಸ್ಥಾನದಲ್ಲಿ ಬರಲು ಪ್ರಾರಂಭಿಸಿತು.