ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಅವರ ಮುಂಬರುವ ಚಿತ್ರ ಧುರಂಧರ್ (Dhurandhar) ಚಿತ್ರೀಕರಣವನ್ನು ಲಡಾಖ್‌ನ ಲೇಹ್‌ನಲ್ಲಿ ಸ್ಥಗಿತಗೊಳಿಸಲಾಗಿದೆ. ಧುರಂಧರ್ ಚಿತ್ರತಂಡದಲ್ಲಿ ಕೆಲಸ ಮಾಡುತ್ತಿದ್ದ 120 ಕ್ಕೂ ಅಧಿಕ ಅಧಿಕ ಮಂದಿ ಏಕಾಏಕಿ ಅಸ್ವಸ್ಥರಾಗಿದ್ದಾರೆ. ಅವರನ್ನು ಲೇಹ್ ಜಿಲ್ಲೆಯ ಎಸ್‌ಎನ್‌ಎಂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆಗಸ್ಟ್ 17 ರಂದು ಸಂಜೆ ‘ಧುರಂಧರ್’ ಚಿತ್ರತಂಡದ 100ಕ್ಕೂ ಅಧಿಕ ಮಂದಿ ಏಕಾಏಕಿ ಅಸ್ವಸ್ಥರಾದರು. ಎಲ್ಲರಿಗೂ ತೀವ್ರ ಹೊಟ್ಟೆ ನೋವು, ವಾಂತಿ, ತಲೆನೋವು ಆವರಿಸಿತು. ಕೂಡಲೆ ಎಲ್ಲರನ್ನೂ ಲೇಹ್‌ನಲ್ಲಿರುವ ಎಸ್‌ಎನ್‌ಎಂ ಆಸ್ಪತ್ರೆಗೆ ದಾಖಲಿಸಲಾಯಿತು. ಎಲ್ಲರನ್ನೂ ಪರೀಕ್ಷಿಸಿದ ವೈದ್ಯರು ಮಾಸ್ ಫುಡ್ ಪಾಯ್ಸನಿಂಗ್ ಆಗಿದೆ ಎಂದು ದೃಢಪಡಿಸಿದ್ದಾರೆ.
ಇದು ಮಾಸ್ ಫುಡ್ ಪಾಯ್ಸನ್ನಿಂಗ್ ಪ್ರಕರಣ. ನಾವು ರೋಗಿಗಳ ದಟ್ಟಣೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದ್ದೇವೆ. ಎಮರ್ಜೆನ್ಸಿ ವಾರ್ಡ್‌ನಲ್ಲಿ ಜನಸಂಖ್ಯೆ ಹೆಚ್ಚಾಗಿದ್ದರಿಂದ ಪೊಲೀಸರ ಸಹಾಯದಿಂದ ನಾವು ನಿಯಂತ್ರಣಕ್ಕೆ ತಂದೆವು. ಎಲ್ಲರಿಗೂ ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಲೇಹ್‌ನ ಸುಂದರ ಪ್ರದೇಶಗಳಲ್ಲಿ ‘ಧುರಂಧರ್’ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ದೊಡ್ಡ ದೊಡ್ಡ ಕಲಾವಿದರು ಶೂಟಿಂಗ್‌ನಲ್ಲಿ ಪಾಲ್ಗೊಂಡಿದ್ದರು. ಆದರೆ ಸಡನ್ ಅಗಿ ತಂಡದ ಹಲವರು ಅನಾರೋಗ್ಯಕ್ಕೀಡಾದರು. ಬಹುತೇಕ ಎಲ್ಲರೂ ಹಠಾತ್ ಅಸ್ವಸ್ಥರಾದರು. ಹೀಗಾಗಿ ಕೂಡಲೆ ‘ಧುರಂಧರ್’ ಚಿತ್ರದ ಚಿತ್ರೀಕರಣವನ್ನ ಸ್ಥಗಿತಗೊಳಿಸಲಾಗಿದೆ. ಅದೃಷ್ಟವಶಾತ್, ಯಾವುದೇ ಸಾವುನೋವುಗಳು ವರದಿಯಾಗಿಲ್ಲ, ಆದರೂ ಪರಿಸ್ಥಿತಿ ಸ್ಥಿರವಾಗುವವರೆಗೆ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ.
ಡಿಸೆಂಬರ್ 5, 2025 ರಂದು ಚಿತ್ರ ಬಿಡುಗಡೆಯಾಗಲಿದೆ. ರಣವೀರ್ ಸಿಂಗ್ ಅವರ ಹುಟ್ಟುಹಬ್ಬದಂದು ಬಿಡುಗಡೆಯಾದ ಟೀಸರ್ ಗಮನಸೆಳೆದಿತ್ತು. ಈ ಚಿತ್ರವನ್ನ ಆದಿತ್ಯ ಧರ್ ನಿರ್ದೇಶನ ಮಾಡುತ್ತಿದ್ದಾರೆ. ರಣ್‌ವೀರ್ ಸಿಂಗ್, ಆರ್ ಮಾಧವನ್, ಸಂಜಯ್ ದತ್, ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಸಾರಾ ಅರ್ಜುನ್ ಮುಂತಾದ ದೊಡ್ಡ ಕಲಾವಿದರು ‘ಧುರಂಧರ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಣವೀರ್ ಪಾತ್ರ ಬಹುಮುಖ್ಯವಾಗಿದೆ.
ಈ ಸುದ್ದಿಯನ್ನೂ ಓದಿ: Actor Rajinikanth: ʼಕೂಲಿʼ ಬಿಡುಗಡೆ ಹೊತ್ತಲ್ಲೇ ವಿವಾದ ಹುಟ್ಟುಹಾಕಿದ್ರಾ ರಜನಿಕಾಂತ್? ವೇದಿಕೆ ಮೇಲೆ ಆಮೀರ್ ಖಾನ್, ಮಲಯಾಳಂ ನಟನಿಗೆ ತಲೈವಾ ಅವಮಾನ?
ಟೀಸರ್‌ನಲ್ಲಿ, ರಣವೀರ್ ಅವರನ್ನು ಕ್ರೂರ ಅವತಾರದಲ್ಲಿ ತೋರಿಸಲಾಗಿದೆ. ಹಿಂಸಾತ್ಮಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಮತ್ತು ಜನರನ್ನು ನಿರ್ದಯವಾಗಿ ಕೊಲ್ಲುವುದನ್ನು ತೋರಿಸಲಾಗಿದೆ. ಈ ಚಿತ್ರವು ಹೆಚ್ಚಿನ ಮಟ್ಟದ ಗುಪ್ತಚರ ಕಾರ್ಯಾಚರಣೆಯ ಹಿನ್ನೆಲೆಯಲ್ಲಿದೆ. ರಾಷ್ಟ್ರೀಯ ಭದ್ರತಾ ಬೆದರಿಕೆಗಳು ಮತ್ತು ವೈಯಕ್ತಿಕ ಸಂದಿಗ್ಧತೆಗಳನ್ನು ನ್ಯಾವಿಗೇಟ್ ಮಾಡುವ ರಹಸ್ಯ ಏಜೆಂಟ್‌ಗಳ ಕಥಾ ಹಂದರವನ್ನು ಬಿಚ್ಚಿಡಹುದು ಎಂದು ಊಹಿಸಲಾಗಿದೆ.