ತಿರುವನಂತಪುರಂ: ಎಸ್. ಶಶಿಕಾಂತ್ ಮತ್ತು ಚಕ್ರವರ್ತಿ ರಾಮಚಂದ್ರ ಒಡೆತನದ ’ನೈಟ್ ಶಿಫ್ಟ್ ಸ್ಟುಡಿಯೋʼ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಮಲಯಾಳಂನ ʼಡೀಯಸ್ ಈರೇʼ ಸಿನಿಮಾದಲ್ಲಿ (Dies Irae Movie) ಮಾಲಿವುಡ್ ಸೂಪರ್ ಸ್ಟಾರ್ ಮೋಹನ್‌ಲಾಲ್ ಪುತ್ರ ಪ್ರಣವ್ ಮೋಹನ್‌ಲಾಲ್ (Pranav Mohanlal) ನಾಯಕನಾಗಿ ಅಭಿನಯಿಸುತ್ತಿದ್ದು, ಟ್ರೈಲರ್ ಶನಿವಾರ ಬಿಡುಗಡೆಯಾಗಿದೆ. 1.18 ನಿಮಿಷದ ಟ್ರೈಲರ್ ಇದಾಗಿದ್ದು, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಒಂದು ಮುಕ್ಕಾಲು ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡು ಸದ್ದು ಮಾಡುತ್ತಿದೆ. ’ಕೋಪದ ದಿನʼ ಎಂದು ಇಂಗ್ಲಿಷ್‌ನಲ್ಲಿ ಅಡಿಬರಹ ಇದೆ.
ʼಡೀಯಸ್ ಈರೇʼ ಸಿನಿಮಾದಲ್ಲಿ ಹಾರರ್ ಥ್ರಿಲ್ಲರ್ ಕಥೆಯಲ್ಲಿ ಒಂದಷ್ಟು ನೈಜ ಘಟನೆಗಳನ್ನು ಸೇರಿಸಿಕೊಳ್ಳಲಾಗಿದೆ. ಅಂದ ಹಾಗೆ ಸಿನಿಮಾವು ಅಕ್ಟೋಬರ್ 31ರಂದು ವಿಶ್ವದಾದ್ಯಂತ ತೆರೆ ಕಾಣುತ್ತಿದೆ.
ಈ ಸುದ್ದಿಯನ್ನೂ ಓದಿ | Rukmini Vasanth: ಕಲಾಂಕಾರಿ ಎಥ್ನಿಕ್‌ವೇರ್‌ನಲ್ಲಿ ಕಂಗೊಳಿಸಿದ ನಟಿ ರುಕ್ಮಿಣಿ ವಸಂತ್
ರಾಹುಲ್ ಸದಾಶಿವನ್ ರಚನೆ ಹಾಗೂ ನಿರ್ದೇಶನದ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ತಾರಾಗಣದಲ್ಲಿ ಜಿಬಿನ್ ಗೋಪಿನಾಥ್, ಅರುಣ್ ಅಜಿಕುಮಾರ್, ಮನೋಹರಿ ಜಾಯ್ ಮುಂತಾದವರು ನಟಿಸಿದ್ದಾರೆ. ಕ್ರಿಸ್ಟೋ ಕ್ಸೇವಿಯರ್ ಸಂಗೀತ, ಶೆಹನಾದ್ ಜಲಾಲ್ ಅವರ ಛಾಯಾಗ್ರಹಣ, ಶಫಿಕ್ಯೂ ಮೊಹಮ್ಮದ್ ಅಲಿ ಸಂಕಲನವಿದೆ.
2024ರಲ್ಲಿ ತೆರೆಕಂಡ ಮಮ್ಮುಟ್ಟಿ ನಟನೆಯ ʼಭ್ರಮಯುಗಂʼ ಸಿನಿಮಾ ಮೂಲಕ ಗಮನ ಸೆಳೆದ ರಾಹುಲ್ ಸದಾಶಿವನ್ ಇದೀಗ ಮತ್ತೊಂದು ವಿಭಿನ್ನ ಚಿತ್ರದೊಂದಿಗೆ ಬಂದಿದ್ದು ಕುತೂಹಲಕ್ಕೆ ಕಾರಣವಾಗಿದೆ. ಬ್ಲ್ಯಾಕ್ & ವೈಟ್‌ನಲ್ಲಿ ಮಾದರಿಯಲ್ಲಿ ʼಭ್ರಮಯುಗಂʼ ಚಿತ್ರವನ್ನು ಅವರು ತೆರೆಗೆ ತಂದಿದ್ದರು. ಈ ಬಾರಿ ಕ್ರೈಂ ಸಬ್ಜೆಕ್ಟ್ ಕೈಗೆತ್ತಿಕೊಂಡಿರುವುದರಿಂದ ನಿರೀಕ್ಷೆ ಹೆಚ್ಚಾಗಿದೆ. ಯಾವ ರೀತಿ ವಿಭಿನ್ನವಾಗಿ ಇದನ್ನು ತೆರೆಮೇಲೆ ತರುತ್ತಾರೆ ಎನ್ನುವುದನ್ನು ಕಾದು ನೀಡಬೇಕಿದೆ.