ರಣವೀರ್ ಸಿಂಗ್ ನಟನೆಯ ʻಧುರಂಧರ್ 2ʼ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಇಂದು (ಮಾ.18) ಸಂಜೆಯಿಂದಲೇ ಈ ಚಿತ್ರದ ಪೇಯ್ಡ್ ಪ್ರೀಮಿಯರ್ ಶೋಗಳು ಶುರುವಾಗಲಿದ್ದು, ದಾಖಲೆ ಪ್ರಮಾಣದಲ್ಲಿ ಟಿಕೆಟ್‌ಗಳು ಸೋಲ್ಡ್‌ಔಟ್ ಆಗಿವೆ. ಈ ನಡುವೆ ಚಿತ್ರದ ನಿರ್ದೇಶಕ ಆದಿತ್ಯ ಧರ್ ಅವರು ಒಂದು ವಿಶೇಷ ಮನವಿಯನ್ನು ಮಾಡಿಕೊಂಡಿದ್ದಾರೆ. "ಸಿನಿಮಾಗಳನ್ನು ಹಾಗೆಯೇ ಅನುಭವಿಸಬೇಕು. ಯಾರದ್ದೋ ಫೋನ್‌ನಲ್ಲಿ ಅಸ್ಪಷ್ಟ ಚಿತ್ರದ ಮೂಲಕ ಅಲ್ಲ" ಎಂದು ಆದಿತ್ಯ ಹೇಳಿದ್ದಾರೆ.
ಆದಿತ್ಯ ಧರ್ ಪೋಸ್ಟ್‌ನಲ್ಲಿ ಏನಿದೆ?
"ನನ್ನ ಅತ್ಯಂತ ಪ್ರಿಯವಾದ, ಅಸಾಧಾರಣ 'ಧುರಂಧರ್' ಕುಟುಂಬಕ್ಕೆ.. 2025ರ ಡಿಸೆಂಬರ್ 5ರಂದು 'ಧುರಂಧರ್' ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಅಂದಿನಿಂದ ನೀವು ಕೇವಲ ನಮ್ಮ ಸಿನಿಮಾವನ್ನು ನೋಡಲಿಲ್ಲ, ಅದನ್ನು ಪ್ರೀತಿಸಿದಿರಿ. ಅದರೊಂದಿಗೆ ಬದುಕಿದಿರಿ. ಪ್ರತಿಯೊಂದು ಸಣ್ಣ ವಿವರವನ್ನೂ ಮೆಚ್ಚಿಕೊಂಡಿರಿ, ಪ್ರತಿ ಕ್ಷಣದ ಬಗ್ಗೆ ಚರ್ಚಿಸಿದಿರಿ, ಮತ್ತೆ ಮತ್ತೆ ನೋಡಿ ನಾನು ಎಂದೂ ಊಹಿಸದ ವಿಷಯಗಳನ್ನು ಗುರುತಿಸಿದಿರಿ" ಎಂದು ಆದಿತ್ಯ ಧರ್ ತಿಳಿಸಿದ್ದಾರೆ.
ಬಾಕ್ಸ್ ಆಫೀಸ್‌ನಲ್ಲಿ ರಣವೀರ್ ಸಿಂಗ್ ಅಬ್ಬರ: 'ಧುರಂಧರ್ 2' ಸಿನಿಮಾದ ಫಸ್ಟ್ ಡೇ ಕಲೆಕ್ಷನ್ ಎಷ್ಟಾಗಬಹುದು?
ನಾವು ನಮ್ಮ ಶಕ್ತಿ ಮೀರಿ ಪ್ರಯತ್ನಿಸಿದ್ದೇವೆ
"ಆ ಸುಂದರ ಮತ್ತು ಅನಿರೀಕ್ಷಿತ ಪ್ರಯಾಣದ ನಡುವೆ, ನಮ್ಮ ಸಿನಿಮಾ ನಿಮ್ಮದಾಯಿತು. ನಂತರ ಇಡೀ ದೇಶದ್ದು ಮತ್ತು ಇಡೀ ವಿಶ್ವದ್ದಾಯಿತು! ಒಬ್ಬ ಸಿನಿಮಾ ನಿರ್ದೇಶಕನಿಗೆ ಸಿಗಬಹುದಾದ ಅತ್ಯಂತ ವಿನಮ್ರ ಮತ್ತು ಮನಮುಟ್ಟುವ ಉಡುಗೊರೆ ಇದಾಗಿದೆ. ಹಾಗಾಗಿ, ನಾವು 'ಧುರಂಧರ್: ದಿ ರಿವೇಂಜ್' ಸಿನಿಮಾ ಮಾಡಲು ಕುಳಿತಾಗ, ನಮಗೆ ಒಂದು ವಿಷಯ ಖಚಿತವಾಗಿ ತಿಳಿದಿತ್ತು. ನಾವು ನಿಮಗೆ ಅಚ್ಚರಿ ನೀಡಲೇಬೇಕು. ನೀವು ಸಿದ್ಧರಿಲ್ಲದ ಭಾವನೆಗಳನ್ನು ನೀವು ಅನುಭವಿಸುವಂತೆ ಮಾಡಬೇಕು. ಅದು ಕೂಡ ಪ್ರಾಮಾಣಿಕವಾಗಿ. ಈ ಕೆಲಸ ಎಂದಿಗೂ ಸುಲಭವಲ್ಲ. ಆದರೆ ನಿಮಗಾಗಿ, ನಾವು ನಮ್ಮ ಶಕ್ತಿ ಮೀರಿ ಪ್ರಯತ್ನಿಸಿದ್ದೇವೆ" ಎಂದು ಆದಿತ್ಯ ಧರ್ ಹೇಳಿದ್ದಾರೆ.
Cocktail 2: 'ಧುರಂಧರ್ 2' ಜೊತೆಗೆ 'ಕಾಕ್‌ಟೇಲ್ 2' ಟೀಸರ್ ಬಿಡುಗಡೆ; ಫಸ್ಟ್ ಲುಕ್ ಪೋಸ್ಟರ್ ಔಟ್
ಫೋನ್‌ನಲ್ಲಿ ಅಸ್ಪಷ್ಟ ಚಿತ್ರದ ಮೂಲಕ ಅಲ್ಲ
"ನಾವು 'ಧುರಂಧರ್: ದಿ ರಿವೇಂಜ್' ಚಿತ್ರಕ್ಕೆ ನಮ್ಮ ಹೃದಯವನ್ನೇ ಇಟ್ಟಿದ್ದೇವೆ. ಇದರಿಂದ ನೀವು ಪ್ರತಿಯೊಂದು ತಿರುವು ಮತ್ತು ಪ್ರತಿಯೊಂದು ಭಾವನೆಯನ್ನು ಅವು ಹೇಗಿರಬೇಕೋ ಹಾಗೆಯೇ ಅನುಭವಿಸಬಹುದು. ಚಿತ್ರಮಂದಿರದಲ್ಲಿ, ಕತ್ತಲೆಯಲ್ಲಿ, ಸ್ನೇಹಿತರು, ಕುಟುಂಬ ಮತ್ತು ಅಪರಿಚಿತರ ನಡುವೆ ಕುಳಿತು ಎಲ್ಲರೂ ಒಂದೇ ರೀತಿಯ ಭಾವನೆಗಳನ್ನು ಅನುಭವಿಸಬಹುದು. ಸಿನಿಮಾಗಳನ್ನು ಹಾಗೆಯೇ ಅನುಭವಿಸಬೇಕು. ಯಾರದ್ದೋ ಫೋನ್‌ನಲ್ಲಿ ಅಸ್ಪಷ್ಟ ಚಿತ್ರದ ಮೂಲಕ ಅಲ್ಲ" ಎಂದು ಆದಿತ್ಯ ಧರ್ ತಿಳಿಸಿದ್ದಾರೆ.
ಆದಿತ್ಯ ಧರ್ ಹಂಚಿಕೊಂಡಿರುವ ಪೋಸ್ಟ್
"ಆದ್ದರಿಂದ, ನನ್ನದೊಂದು ಹೃದಯಾಂತರಾಳದ ವಿನಮ್ರ ವಿನಂತಿ ಏನೆಂದರೆ, ದಯವಿಟ್ಟು ಸಿನಿಮಾದ ಗುಟ್ಟುಗಳನ್ನು ಹಂಚಿಕೊಳ್ಳಬೇಡಿ. ಪ್ರತಿಯೊಬ್ಬ ಅಭಿಮಾನಿಯೂ ಏನೂ ತಿಳಿಯದ ಕುತೂಹಲದೊಂದಿಗೆ ಚಿತ್ರಮಂದಿರಕ್ಕೆ ಬರಲಿ. ತಾನು ಅನುಭವಿಸಿದ ವಿಷಯದ ಬಗ್ಗೆ ತನ್ನದೇ ಆದ ಆಳವಾದ ವೈಯಕ್ತಿಕ ಭಾವನೆಯೊಂದಿಗೆ ಹೊರಹೋಗಲಿ. ನೀವು 'ಧುರಂಧರ್' ಅನ್ನು ಈ ಮಟ್ಟಕ್ಕೆ ತಂದಿದ್ದೀರಿ. ಈಗ ಇದು ಏನಾಗಲಿದೆ ಎಂಬುದನ್ನು ರಕ್ಷಿಸುವ ಜವಾಬ್ದಾರಿಯನ್ನು ನಾನು ನಿಮ್ಮ ಮೇಲೆ ನಂಬಿಕೆಯಿಟ್ಟು ಬಿಡುತ್ತಿದ್ದೇನೆ. ಭಾರತ್ ಮಾತಾ ಕಿ... ಜೈ.." ಎಂದು ಆದಿತ್ಯ ಧರ್ ತಮ್ಮ ಪತ್ರವನ್ನು ಮುಗಿಸಿದ್ದಾರೆ.