ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Yash: ʻಅಡಲ್ಟ್‌ ಕಂಟೆಂಟ್‌ ಅಂದ್ರೆ ಬರೀ ಅದೇ ಅಲ್ಲ..ʼ; ʻಟಾಕ್ಸಿಕ್‌ʼ ಕಥೆ ಬಗ್ಗೆ ಇಂಟರೆಸ್ಟಿಂಗ್‌ ವಿಚಾರ ಬಿಚ್ಚಿಟ್ಟ ಅನುರಾಗ್‌ ಕಶ್ಯಪ್‌

ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಅವರು ನಟ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಕುರಿತು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. "ಎ ಫೇರಿಟೇಲ್ ಫಾರ್ ಗ್ರೋನಪ್ಸ್" ಎಂದರೆ ಅದು ಕೇವಲ ಲೈಂಗಿಕತೆಯಲ್ಲ, ಬದಲಿಗೆ ಪರಿಪೂರ್ಣ ವಯಸ್ಕರಿಗೆ ಸರಿಹೊಂದುವ ಗಂಭೀರ ಮತ್ತು ಬೋಲ್ಡ್ ಕಂಟೆಂಟ್ ಎಂದು ಅವರು ತಿಳಿಸಿದ್ದಾರೆ.

ʻರಾಕಿಂಗ್‌ ಸ್ಟಾರ್‌ʼ ಯಶ್‌ ಅಭಿನಯದ ʻಟಾಕ್ಸಿಕ್ʼ‌ ಸಿನಿಮಾವು ವಿಶ್ವಾದ್ಯಂತ ನಿರೀಕ್ಷೆ ಮೂಡಿಸಿದೆ. ಈಗಾಗಲೇ ಸಿನಿಮಾಕಾನ್‌ 2026ರಲ್ಲಿ ಭಾಗಿಯಾಗಿರುವ ನಟ ಯಶ್‌ ಅವರು ಸಾಕಷ್ಟು ಪ್ರಚಾರ ಮಾಡುತ್ತಿದ್ದಾರೆ. ಈ ನಡುವೆ ಬಾಲಿವುಡ್‌ ನಿರ್ದೇಶಕ ಅನುರಾಗ್‌ ಕಶ್ಯಪ್‌ ಅವರು ʻಟಾಕ್ಸಿಕ್‌ʼ ಸಿನಿಮಾ ಕುರಿತು ಒಂದಷ್ಟು ಇಂಟರೆಸ್ಟಿಂಗ್‌ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಈಚೆಗೆ ಬೆಂಗಳೂರಿಗೆ ಬಂದಿದ್ದ ನಟ, ನಿರ್ದೇಶಕ ಅನುರಾಗ್‌ ಕಶ್ಯಪ್‌ ಅವರು ವಿಶ್ವವಾಣಿ ಟಿವಿಗೆ ನೀಡಿದ ಎಕ್ಸ್‌ಕ್ಲೂಸಿವ್‌ ಸಂದರ್ಶನದಲ್ಲಿ ‌ʻಟಾಕ್ಸಿಕ್ʼ‌ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕಿ ಗೀತು ಮೋಹನ್‌ದಾಸ್‌ ಅವರು ಮೊದಲೇ ಅನುರಾಗ್‌ಗೆ ಪರಿಚಯ. ಅಲ್ಲದೆ, ಗೀತು ಅವರ ಹಿಂದಿನ ಸಿನಿಮಾವನ್ನು ನಿರ್ಮಾಣ ಮಾಡಿದ್ದು ಕೂಡ ಅನುರಾಗ್‌ ಕಶ್ಯಪ್‌ ಅವರೇ. ಹಾಗಾಗಿ, ಟಾಕ್ಸಿಕ್‌ ಕುರಿತ ಅಪ್ಡೇಟ್ಸ್ ಮಾಹಿತಿ ಅನುರಾಗ್‌ ಅವರಿಗೆ ತಿಳಿದಿದೆ.

ಸಿನಿಮಾಕಾನ್ ವೇದಿಕೆಯಲ್ಲಿ 'ಟಾಕ್ಸಿಕ್' ಚಿತ್ರದ 9 ನಿಮಿಷಗಳ ಪ್ರಿವ್ಯೂ ಪ್ರದರ್ಶನ; ಹಾಲಿವುಡ್ ಮಟ್ಟದಲ್ಲಿ ಯಶ್ ಸಿನಿಮಾ ಹವಾ!

‌ಟಾಕ್ಸಿಕ್‌ ಟೀಸರ್‌ ನನಗೆ ತುಂಬಾ ಇಷ್ಟ ಆಯ್ತು

"ಟಾಕ್ಸಿಕ್‌ ಸಿನಿಮಾ ನಿರ್ದೇಶಕಿ ಗೀತು ಮೋಹನ್‌ದಾಸ್‌ ನನಗೆ ತುಂಬಾ ಚೆನ್ನಾಗಿ ಗೊತ್ತು. ಅವರ ಹಿಂದಿನ ಮೂಥನ್‌ ಸಿನಿಮಾವನ್ನು ನಾನೇ ನಿರ್ಮಾಣ ಮಾಡಿದ್ದೆ. ನಾನು ಟಾಕ್ಸಿಕ್‌ ಸಿನಿಮಾವನ್ನು ಫಾಲೋ ಮಾಡುತಿದ್ದೇನೆ. ನನಗೆ ಟಾಕ್ಸಿಕ್‌ ಸಿನಿಮಾದ ಸ್ಕ್ರಿಪ್ಟ್‌ ಏನು ಎಂಬುದು ಗೊತ್ತು. ಟೀಸರ್‌ ನನಗೆ ತುಂಬಾ ಇಷ್ಟವಾಯಿತು. ತುಂಬಾ ಬೋಲ್ಡ್‌ ಆಗಿಯೂ ಇದೆ" ಎಂದು ಅನುರಾಗ್‌ ಹೇಳಿದ್ದಾರೆ

ಗ್ರೋನಪ್ಸ್ ಎಂಬುದು ಬರೀ ಲೈಂಗಿಕತೆಗೆ ಸಂಬಂಧಿಸಿದ್ದಲ್ಲ

"ಏನು ಮಾಡಬೇಕು ಎಂಬುದರ ಬಗ್ಗೆ ಗೀತು ಮೋಹನ್‌ದಾಸ್‌ಗೆ ತುಂಬಾ ಸ್ಪಷ್ಟತೆ ಇದೆ. ಜೊತೆಗೆ ಯಶ್‌ ಇದ್ದಾರೆ. ಇಬ್ಬರು ಸೇರಿಕೊಂಡು ತಮ್ಮ ವಿಷನ್‌ ಅನ್ನು ಜನರ ಮುಂದಿಡುವ ಪ್ರಯತ್ನ ಮಾಡುತ್ತಿದ್ದಾರೆ. ಚಿತ್ರದ ಶೀರ್ಷಿಕೆಯಲ್ಲೇ ಇದೆ, ಎ ಫೇರಿಟೇಲ್ ಫಾರ್ ಗ್ರೋನಪ್ಸ್ ಅಂತ. ಅದೇ ಈ ಸಿನಿಮಾದ ಕಥೆ. ಹಾಗಂತ, ಗ್ರೋನಪ್ಸ್ ಎಂದಮಾತ್ರಕ್ಕೆ ಇದು ಅಡಲ್ಸ್ಟ್‌ ಕಂಟೆಂಟ್‌ ಇರುವಂತಹ ಸಿನಿಮಾವಲ್ಲ. ಗ್ರೋನಪ್ಸ್ ಎಂಬುದು ಬರೀ ಲೈಂಗಿಕತೆಗೆ ಸಂಬಂಧಿಸಿದ್ದಲ್ಲ. ಇದು ಬೇರೆಯದೇ ಶೈಲಿಯ ಕಂಟೆಂಟ್‌ ಇರುವ ಸಿನಿಮಾ" ಎಂದು ಅನುರಾಗ್‌ ಕಶ್ಯಪ್‌ ಹೇಳಿದ್ದಾರೆ.‌

Yash Toxic movie : ‘ಟಾಕ್ಸಿಕ್’ ಜೊತೆ ಕ್ಲ್ಯಾಶ್ ತಪ್ಪಿಸಲು ರಿಲೀಸ್ ದಿನಾಂಕ ಚೇಂಜ್‌; ಯಾವುದು ಆ ಬಾಲಿವುಡ್ ಸ್ಟಾರ್ ಸಿನಿಮಾ ?

ಅನುರಾಗ್‌ ಕಶ್ಯಪ್‌ ಅವರ ಸಂದರ್ಶನ



ಕಥೆಯ ಎಳೆಯನ್ನು ಬಿಟ್ಟುಕೊಟ್ಟಿದ್ದ ಯಶ್‌

ಈಚೆಗೆ ಸಿನಿಮಾಕಾನ್‌ ವೇದಿಕೆಯಲ್ಲಿ ಸಂದರ್ಶನ ನೀಡಿದ್ದ ಯಶ್‌, ಟಾಕ್ಸಿಕ್‌ ಸಿನಿಮಾದ ಕಥೆಯ ಎಳೆಯನ್ನು ಬಿಟ್ಟುಕೊಟಿದ್ದರು. "ಟಾಕ್ಸಿಕ್ ಒಂದು ವೈಲ್ಡ್ ಸಿನಿಮಾ. ಇದರಲ್ಲಿ ತಂದೆ - ಮಗನ ನಡುವಿನ ಸೇಡಿನ ಕಥೆ ಇದೆ. ತುಂಬಾ ಇಂಟ್ರೆಸ್ಟಿಂಗ್ ಕಾಲಘಟ್ಟದಲ್ಲಿ ಈ ಸಿನಿಮಾದ ಕಥೆ ನಡೆಯಲಿದೆ. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತು. ಆದರೆ, ಗೋವಾ ಮಾತ್ರ 1961 ವರೆಗೆ ಪೋರ್ಚುಗೀಸರ ಆಳ್ವಿಕೆಯಲ್ಲಿತ್ತು. ಅದೇ ಕಾಲಘಟ್ಟದಲ್ಲಿ ನಮ್ಮ ಕಥೆ ನಡೆಯಲಿದ್ದು, ‘ಟಾಕ್ಸಿಕ್’ ಒಂದು ಗ್ಯಾಂಗ್‌ಸ್ಟರ್ ಚಿತ್ರ" ಎಂದು ಯಶ್‌ ತಿಳಿಸಿದ್ದರು.