ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸದ್ದಿಲ್ಲದೇ ಹೊಸ ಸಿನಿಮಾ ಘೋಷಣೆ ಮಾಡಲು ರೆಡಿಯಾದ ನಿರ್ದೇಶಕ ಎಸ್‌. ನಾರಾಯಣ್; ಸದ್ಯದಲ್ಲೇ ಚಿತ್ರತಂಡದ ವಿವರ ಬಹಿರಂಗ

ನಿರ್ದೇಶಕ ಎಸ್.‌ ನಾರಾಯಣ್‌ ಅವರ ಅಭಿಮಾನಿಗಳಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದ್ದು, ಮತ್ತೊಮ್ಮೆ ಆ್ಯಕ್ಷನ್-ಕಟ್ ಹೇಳಲು ನಾರಾಯಣ್ ಸದ್ದಿಲ್ಲದೇ ಸಜ್ಜಾಗಿದ್ದಾರೆ. ಸದ್ಯ ಅವರು ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುವ ಕೆಲಸ ಅಂತಿಮ ಹಂತದಲ್ಲಿದ್ದು, ಪ್ರಿ-ಪ್ರೊಡಕ್ಷನ್ ಕಾರ್ಯಗಳು ಬಿರುಸಿನಿಂದ ಸಾಗುತ್ತಿವೆ.

ಕನ್ನಡ ಚಿತ್ರರಂಗಕ್ಕೆ ಹಲವಾರು ಸದಭಿರುಚಿಯ, ಕೌಟುಂಬಿಕ ಹಾಗೂ ಮನಮುಟ್ಟುವ ಯಶಸ್ವಿ ಚಿತ್ರಗಳನ್ನು ನೀಡಿರುವ ‘ಕಲಾಸಾಮ್ರಾಟ್’ ಡಾ. ಎಸ್. ನಾರಾಯಣ್ ಅವರು ಇದೀಗ ಸದ್ದಿಲ್ಲದೇ ಮತ್ತೊಂದು ಹೊಸ ಸಿನಿಮಾ ನಿರ್ದೇಶಿಸಲು ಸಜ್ಜಾಗಿದ್ದಾರೆ. ಸದ್ಯ ಈ ನೂತನ ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆಯುವ ಕೆಲಸದಲ್ಲಿ ಅವರು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ಚಿತ್ರದ ಪ್ರಿ-ಪ್ರೊಡಕ್ಷನ್ ಕಾರ್ಯಗಳು ತೆರೆಮರೆಯಲ್ಲಿ ಬಿರುಸಿನಿಂದ ಸಾಗುತ್ತಿವೆ.

ಘಟಾನುಘಟಿ ಕಲಾವಿದರಿಗೆ ನಿರ್ದೇಶನ

ಕನ್ನಡ ಚಿತ್ರರಂಗದ ಮೇರುನಟರಾದ ವರನಟ ಡಾ. ರಾಜ್‌ಕುಮಾರ್, `ಸಾಹಸಸಿಂಹ' ಡಾ. ವಿಷ್ಣುವರ್ಧನ್, `ರೆಬೆಲ್ ಸ್ಟಾರ್' ಅಂಬರೀಶ್ ಸೇರಿದಂತೆ ಸ್ಯಾಂಡಲ್‌ವುಡ್‌ನ ಬಹುತೇಕ ಎಲ್ಲಾ ಪ್ರಮುಖ ನಾಯಕ ನಟರಿಗೆ ಆ್ಯಕ್ಷನ್-ಕಟ್ ಹೇಳಿದ ಹಿರಿಮೆ ಎಸ್. ನಾರಾಯಣ್ ಅವರದ್ದು. ಕೇವಲ ನಿರ್ದೇಶಕರಾಗಿ ಮಾತ್ರವಲ್ಲದೆ, ಯಶಸ್ವಿ ನಿರ್ಮಾಪಕರಾಗಿ, ಗೀತರಚನೆಕಾರರಾಗಿ ಹಾಗೂ ಕಲಾವಿದರಾಗಿಯೂ ತಮ್ಮ ಬಹುಮುಖ ಪ್ರತಿಭೆಯನ್ನು ಸಾಬೀತುಪಡಿಸಿರುವ ಅವರು, ಕನ್ನಡ ಸಿನಿಮಾರಂಗದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ.

Search Movie: ಎಸ್. ನಾರಾಯಣ್ ಪುತ್ರ ಪಂಕಜ್ ನಾರಾಯಣ್ ನಟನೆಯ ಹೊಸ ಸಿನಿಮಾಗೆ ಕ್ಲ್ಯಾಪ್‌ ಮಾಡಿದ ಶ್ರೀನಗರ ಕಿಟ್ಟಿ

ಅಂತಿಮ ಹಂತದಲ್ಲಿ ಸ್ಕ್ರಿಪ್ಟ್ ಕೆಲಸಗಳು

ಸದಭಿರುಚಿಯ ಕಥಾಹಂದರ, ಮನರಂಜನೆಯ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರಗಳ ಮೂಲಕ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿರುವ ಎಸ್. ನಾರಾಯಣ್, ಈ ಬಾರಿಯೂ ಒಂದು ವಿಭಿನ್ನ ಹಾಗೂ ಗಮನಸೆಳೆಯುವ ಕಥೆಯನ್ನು ಪ್ರೇಕ್ಷಕರ ಮುಂದೆ ತರಲು ತಯಾರಿ ನಡೆಸಿದ್ದಾರೆ. ಸ್ಕ್ರಿಪ್ಟ್ ಕೆಲಸಗಳು ಅಂತಿಮ ಹಂತದಲ್ಲಿದ್ದು, ಹೊಸ ತಲೆಮಾರಿನ ಪ್ರೇಕ್ಷಕರಿಗೂ ಇಷ್ಟವಾಗುವಂತಹ ಅಂಶಗಳನ್ನು ಚಿತ್ರದಲ್ಲಿ ಅಳವಡಿಸಿಕೊಳ್ಳಲಾಗಿದೆ ಎನ್ನಲಾಗಿದೆ.

ಶೀಘ್ರದಲ್ಲೇ ಹೆಚ್ಚಿನ ಮಾಹಿತಿ ನೀಡಲಿರುವ ಎಸ್‌.‌ ನಾರಾಯಣ್

ಸಹಜವಾಗಿಯೇ ನಾರಾಯಣ್‌ ಅವರ ಈ ಹೊಸ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವ ನಿರ್ಮಾಪಕರು ಯಾರು? ಚಿತ್ರದ ನಾಯಕ-ನಾಯಕಿ ಹಾಗೂ ಇತರ ಪ್ರಮುಖ ಪಾತ್ರಗಳಲ್ಲಿ ಯಾವೆಲ್ಲಾ ಕಲಾವಿದರು ಅಭಿನಯಿಸಲಿದ್ದಾರೆ? ಹಾಗೂ ತಾಂತ್ರಿಕ ವರ್ಗದಲ್ಲಿ ಯಾರೆಲ್ಲಾ ಕೈಜೋಡಿಸಲಿದ್ದಾರೆ ಎಂಬ ಪ್ರಶ್ನೆಗಳು ಸಿನಿಪ್ರಿಯರಲ್ಲಿ ಮೂಡಿವೆ. ಈ ಎಲ್ಲಾ ಕುತೂಹಲಗಳಿಗೆ ಸದ್ಯದಲ್ಲೇ ತೆರೆ ಬೀಳಲಿದ್ದು, ಸ್ವತಃ ಎಸ್. ನಾರಾಯಣ್ ಅವರೇ ಅಧಿಕೃತವಾಗಿ ಚಿತ್ರದ ಶೀರ್ಷಿಕೆ ಹಾಗೂ ಸಂಪೂರ್ಣ ವಿವರಗಳನ್ನು ಪ್ರಕಟಿಸಲಿದ್ದಾರೆ.

ತಮ್ಮ ವಿಶಿಷ್ಟ ನಿರೂಪಣಾ ಶೈಲಿಯ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಡಾ. ಎಸ್. ನಾರಾಯಣ್ ಅವರ ಈ ನೂತನ ಸಿನಿಮಾ ಯಾವ ರೀತಿಯ ಕಥಾವಸ್ತುವನ್ನು ಒಳಗೊಂಡಿರಲಿದೆ ಎಂಬ ನಿರೀಕ್ಷೆ ಎಲ್ಲರಲ್ಲೂ ಮನೆಮಾಡಿದೆ. ಕಲಾಸಾಮ್ರಾಟರ ಹೊಸ ಸಿನಿಮಾದ ಅಧಿಕೃತ ಘೋಷಣೆ ಹಾಗೂ ಚಿತ್ರೀಕರಣದ ಆರಂಭಕ್ಕಾಗಿ ಕನ್ನಡ ಚಿತ್ರಪ್ರೇಮಿಗಳು ಕಾತರದಿಂದ ಎದುರು ನೋಡುತ್ತಿದ್ದಾರೆ.