ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ದ್ವಿಭಾಷೆಯಲ್ಲಿ ಮೂಡಿಬಂದ 'ಶ್ರಾವಣಿ' ಕಿರುಚಿತ್ರ; ಜೂನ್ 26 ಕ್ಕೆ ಒಟಿಟಿಯಲ್ಲಿ ರಿಲೀಸ್!

ಮುಳಬಾಗಿಲು ಮೂಲದ ವಿಕ್ರಮ್ ಕುಮಾರ್ ನಿರ್ದೇಶನದ 'ಶ್ರಾವಣಿ' ಎಂಬ 35 ನಿಮಿಷಗಳ ದ್ವಿಭಾಷಾ ಕಿರುಚಿತ್ರ ಜೂನ್ 26 ರಂದು 'ನಾನ್ ಸ್ಟಾಪ್ ಎಂಟರ್ಟೈನ್ಮೆಂಟ್' ಒಟಿಟಿ ಹಾಗೂ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಲಿದೆ. ಹರ್ಷ ಕಲ್ಯಾಣ್ ನಾಯಕನಾಗಿ ನಟಿಸಿರುವ, ಲವ್ ಹಾಗೂ ಸೆಂಟಿಮೆಂಟ್ ಜಾನರ್‌ನ ಈ ಕಿರುಚಿತ್ರಕ್ಕೆ ಅಶೋಕ್ ಮೋದಿ ಬಂಡವಾಳ ಹೂಡಿದ್ದಾರೆ.

ಬೆಳ್ಳಿತೆರೆಯ ಮೇಲೆ ದೊಡ್ಡ ಸಿನಿಮಾ ನಿರ್ದೇಶಿಸುವ ಕನಸು ಹೊತ್ತಿರುವ ಹೊಸ ಪ್ರತಿಭೆಗಳಿಗೆ ಕಿರುಚಿತ್ರಗಳು ಅತ್ಯುತ್ತಮ ವೇದಿಕೆ ಒದಗಿಸುತ್ತವೆ. ಇದೀಗ ಅದೇ ಹಾದಿಯಲ್ಲಿ ಮುಳಬಾಗಿಲು ಮೂಲದ ವಿಕ್ರಮ್ ಕುಮಾರ್ ಎಂಬ ಯುವ ಪ್ರತಿಭೆ ನಿರ್ದೇಶಿಸಿರುವ 'ಶ್ರಾವಣಿ' ಎಂಬ 35 ನಿಮಿಷಗಳ ಕಿರುಚಿತ್ರ ಸಿನಿರಂಗದಲ್ಲಿ ಭಾರಿ ಗಮನ ಸೆಳೆಯುತ್ತಿದೆ.

ಇತ್ತೀಚೆಗೆ ಬೆಂಗಳೂರಿನ ವಿಕ್ಟರಿ ಸಿನಿಮಾಸ್‌ನಲ್ಲಿ ಈ ಕಿರುಚಿತ್ರದ ವಿಶೇಷ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಸಾಮಾನ್ಯವಾಗಿ ದೊಡ್ಡ ಸಿನಿಮಾಗಳಿಗೆ ಸಿಗುವಂತೆ, ಈ ಕಿರುಚಿತ್ರದ ಪ್ರದರ್ಶನಕ್ಕೂ ಚಿತ್ರಮಂದಿರ ಭರ್ತಿಯಾಗಿ 'ಹೌಸ್ ಫುಲ್' ಪ್ರದರ್ಶನ ಕಂಡಿದ್ದು ಚಿತ್ರತಂಡದ ಹುಮ್ಮಸ್ಸನ್ನು ಹೆಚ್ಚಿಸಿದೆ. ಪ್ರದರ್ಶನದ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ತಮ್ಮ ಅನುಭವಗಳನ್ನು ಹಂಚಿಕೊಂಡರು.

ಜೀ ಕಿರುಚಿತ್ರ ಸ್ಪರ್ಧೆ ಫಿನಾಲೆ: ಪ್ರಾದೇಶಿಕ ಸಿನಿಮಾಗಳ ಭವಿಷ್ಯಕ್ಕೆ ಸಿಗಲಿದೆ ಬಿಗ್ ಮೈಲೇಜ್!

ಜೂನ್ 26 ರಂದು ಒಟಿಟಿ - ಯೂಟ್ಯೂಬ್‌ನಲ್ಲಿ ಬಿಡುಗಡೆ

ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ವಿಕ್ರಮ್ ಕುಮಾರ್, "ನಾನು ಮೂಲತಃ ಮುಳಬಾಗಿಲಿನ ಗುಡಿಪಲ್ಲಿಯವನು. ಸಿನಿಮಾ ನಿರ್ದೇಶಕನಾಗಬೇಕೆಂಬುದು ನನ್ನ ಬಹುದಿನಗಳ ಆಸೆ. ಅದರ ಮೊದಲ ಹೆಜ್ಜೆಯಾಗಿ ಲವ್ ಹಾಗೂ ಸೆಂಟಿಮೆಂಟ್ ಜಾನರ್‌ನ 'ಶ್ರಾವಣಿ' ಕಿರುಚಿತ್ರವನ್ನು ನಿರ್ದೇಶಿಸಿದ್ದೇನೆ. ಇದು ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ಮೂಡಿಬಂದಿದೆ. ವಿಶೇಷವೆಂದರೆ ಈ ಕಿರುಚಿತ್ರ ಎರಡು ಭಾಗಗಳಲ್ಲಿ ಬರಲಿದ್ದು, ಮೊದಲ ಭಾಗವು ಜೂನ್ 26 ರಂದು 'ನಾನ್ ಸ್ಟಾಪ್ ಎಂಟರ್ಟೈನ್ಮೆಂಟ್' ಓಟಿಟಿ ಹಾಗೂ 'ಟಿ.ಎಂ.ಪಿ ಪಿಕ್ಚರ್' ಯೂಟ್ಯೂಬ್ ಚಾನಲ್‌ನಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿದೆ" ಎಂದು ಮಾಹಿತಿ ನೀಡಿದರು.

Short Movie: ಕುಣಿ ಕಿರುಚಿತ್ರದಲ್ಲೊಂದು ಕರುಳು ಹಿಂಡುವ ಕಥೆ; ಕಲಾವಿದರ ಹಾರೈಕೆ

ನಟನಾಗುವ ಆಸೆ ಈಡೇರಿಸಿದ 'ಶ್ರಾವಣಿ'

ಈ ಚಿತ್ರದ ನಾಯಕ ಹರ್ಷ ಕಲ್ಯಾಣ್ ಮಾತನಾಡಿ, "ನಾನು ಹಲವು ವರ್ಷಗಳಿಂದ ಚಿತ್ರರಂಗದಲ್ಲೇ ಕೆಲಸ ಮಾಡುತ್ತಿದ್ದೇನೆ. ನಟನಾಗಬೇಕೆಂಬ ದೊಡ್ಡ ಆಸೆ ಹೊತ್ತು ಗಾಂಧಿನಗರಕ್ಕೆ ಬಂದವನು ನಾನು. ನನ್ನ ಆ ಕನಸು ಈ ಕಿರುಚಿತ್ರದ ಮೂಲಕ ಈಡೇರಿದೆ" ಎಂದು ಸಂತಸ ವ್ಯಕ್ತಪಡಿಸಿದರು. ರಾಣಿ ಎಂ ಅಂಗಡಿ, ದೀಪ,ಶ್ರೀವೈಷ್ಣವ್ ಹಾಗೂ ರಂಗನಾಥ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ನಿರ್ದೇಶಕರು ಹೇಳಿದ ಕಥೆಯನ್ನು ಮೆಚ್ಚಿ ಯಾವುದೇ ರಾಜಿಯಾಗದೆ ಅಶೋಕ್ ಮೋದಿ ಅವರು ಈ ಕಿರುಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಪ್ರದರ್ಶನಕ್ಕೆ ಆಗಮಿಸಿ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಅವರು ಧನ್ಯವಾದ ತಿಳಿಸಿದರು. ಚಿತ್ರಕ್ಕೆ ವಿಜಯ್ ಮೊಂಟೆರಿಯೊ ಛಾಯಾಗ್ರಹಣ ಹಾಗೂ ರೋಹಿತ್ ಪೂಜಾರಿ ಅವರ ಸಂಗೀತ ನಿರ್ದೇಶನವಿದ್ದು, ಕಿರುಚಿತ್ರದಲ್ಲಿ ಒಂದು ಸುಂದರವಾದ ಹಾಡು ಕೂಡ ಒಳಗೊಂಡಿದೆ. ಮುಂತಾದ ಕಲಾವಿದರು ಈ ಚಿತ್ರದ ತಾರಾಗಣದಲ್ಲಿದ್ದಾರೆ. ಮೊದಲ ಪ್ರದರ್ಶನದಲ್ಲೇ ಹೌಸ್‌ಫುಲ್ ಪ್ರದರ್ಶನ ಕಂಡು ವಿಶ್ವಾಸ ಹೆಚ್ಚಿಸಿಕೊಂಡಿರುವ 'ಶ್ರಾವಣಿ' ಜೂನ್ 26 ರಂದು ಡಿಜಿಟಲ್ ಪರದೆಯ ಮೇಲೆ ವೀಕ್ಷಕರಿಗೆ ಉಚಿತವಾಗಿ ಲಭ್ಯವಾಗಲಿದೆ.